Male Mahadeshawara Temple: ಹನೂರು ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ(ನ.12) ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ 2.70 ಕೋಟಿ ರೂ. ಸಂಗ್ರಹವಾಗಿದೆ.
ದೀಪಾವಳಿ ಹಬ್ಬ, ಮಾದಪ್ಪನ ಜಾತ್ರೆ ಹಿನ್ನಲೆಯಲ್ಲಿ 27ದಿನಗಳಲ್ಲಿ ಮಾದಪ್ಪನ ಬೆಟ್ಟದ ಹುಂಡಿಯಲ್ಲಿ ಭಾರೀ ಹಣ ಸಂಗ್ರಹವಾಗಿದೆ ಎಂದು ಶ್ರೀ ಮಲೆ ಮಾದಪ್ಪನ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರಘು ಮಾಹಿತಿ ನೀಡಿದ್ದಾರೆ.
ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ನಡೆದಿದ್ದು ಬುಧವಾರ ಸಂಜೆ 7 ರಲ್ಲಿ ಮುಕ್ತಾಯಗೊಂಡಿದೆ.
ದೀಪಾವಳಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನ, ಅಮಾವಾಸ್ಯೆ, ಕಾರ್ತಿಕ ಮಾಸ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ 2,70,10,492 ನಗದು 43ಗ್ರಾಂ ಚಿನ್ನ ಹಾಗೂ 1.6 ಕೆಜಿ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
ಇ- ಹುಂಡಿಯಿಂದ 5,12,260 ರೂ., ಚಲಾವಣೆಯಲ್ಲಿಲ್ಲದ 2000 ಮುಖಬೆಲೆಯ 10 ನೋಟುಗಳು, ವಿದೇಶಿ 40 ನೋಟುಗಳು ಸಂಗ್ರಹವಾಗಿದೆ.
ಇದನ್ನೂ ಓದಿ- ಹುಲಿ ಬಂತು ಹುಲಿ- ಎಐ ಹಾವಳಿಗೆ ಜನರು, ಅರಣ್ಯ ಇಲಾಖೆ ಹೈರಾಣು
ಇದನ್ನೂ ಓದಿ- ಕೇವಲ ಕುರುಬರಿಗೆ ಅಷ್ಟೇ ಅಲ್ಲ ಎಲ್ಲಾ ಜಾತಿಗಳಿಗೂ ಕೆಲಸ ಮಾಡಿದ್ದೇನೆ-ಸಿಎಂ ಸಿದ್ದರಾಮಯ್ಯ









