Madappa Jatre: ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಂತಹ ಭಕ್ತರಿಗೆ ವಿಶೇಷವಾಗಿ ಮಹಿಳಾ ಭಕ್ತರು ಶೌಚಾಲಯ ಸಮಸ್ಯೆಯಿಂದ ತೀರಾ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು ಬಳಕೆಯಲ್ಲಿರುವ ಶೌಚಾಲಯಗಳೂ ಕೂಡ ಗಬ್ಬೆದ್ದು ನಾರುತ್ತಿದೆ ಎಂದು ಕಿಡಿಕಾರಿದ್ದಾರೆ.
ಕೆಲವು ಶೌಚಾಲಯಗಳಿಗೆ ಬೀಗಗಳನ್ನು ಹಾಕಲಾಗಿದೆ. ಶೌಚಾಲಯಕ್ಕೆ ತೆರಳಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಈ ಅವ್ಯವಸ್ಥೆಯನ್ನು ಕಂಡು ಆಕ್ರೋಶ ಹೊರಹಾಕಿರುವ ಭಕ್ತಾದಿಗಳುಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ಹಣದ ಹೊಳೆಯೇ ಹರಿಯುತ್ತಿದ್ದರೂ ಏಕೀ ಅವ್ಯವಸ್ಥೆ ಎಂದು ಕಿಡಿಕಾರಿದ್ದಾರೆ. ದೀಪಾವಳಿ ಜಾತ್ರೆ ಇನ್ನೂ ಆರಂಭವಾಗಿಲ್ಲ ಈಗಲೇ ಶೌಚಾಲಯದ ಕೊರತೆ ಎದುರಾದರೇ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಂಜನಗೂಡಿನ ಭಕ್ತರೊಬ್ಬರು ಮಾತನಾಡಿ, ಸುತ್ತಲೂ ಸಾವಿರ ಬೆಟ್ಟವಿದ್ದರೂ ನಮಗೆ ಮಾದಪ್ಪನ ಬೆಟ್ಟವೇ ಇಷ್ಟ. ಆದರೆ, ಮಾದಪ್ಪನನ್ನು ಕಣ್ತುಂಬಿಕೊಳ್ಳಲು ಬರುವ ಭಕ್ತಾದಿಗಳಿಗೆ ಅದರಲ್ಲೂ ಮಹಿಳಾ ಭಕ್ತರಿಗೆ ಸರಿಯಾದ ಶೌಚಾಲಯ ವ್ಯವಸ್ಥೆ ಇಲ್ಲದೆ, ಅವರು ಪರದಾಡುತ್ತಿದ್ದು ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ಶೌಚಾಲಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಕೋಟ್ಯಂತರ ಆದಾಯ ಗಳಿಸುವ ಮಲೆ ಮಹದೇಶ್ವರ ಬೆಟ್ಟ ಪ್ರಾಧಿಕಾರವು ಕನಿಷ್ಠ ಸೌಲಭ್ಯವಾದ ಶೌಚಾಲಯವನ್ನೂ ಸಮರ್ಪಕವಾಗಿ ಒದಗಿಸದಿರುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಆಟೋ ವೀಲಿಂಗ್ ಪುಂಡಾಟ
ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಸಿರಿಧಾನ್ಯ ಪ್ರಸಾದ; ಪ್ಲಾಸ್ಟಿಕ್ ಬದಲಿಗೆ ಸಬ್ಬಕ್ಕಿ, ಮೆಕ್ಕೆಜೋಳ ಕವರ್









