ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್'ಗೆ ಹೋದ ವ್ಯಕ್ತಿ ಸಾವು

Kodagu News: ವೈದ್ಯೋ ನಾರಾಯಣೋ ಹರಿ. ಅಂದ್ರೆ ವೈದ್ಯರನ್ನ ದೇವರೆಂದು, ಪ್ರಾಣ ರಕ್ಷಕರೆಂದು ಕರೆಯುತ್ತಾರೆ. ಆದ್ರೆ  ಇಲ್ಲೊಬ್ಬ ವೈದ್ಯರನ್ನು ನಂಬಿ ಕ್ಲಿನಿಕ್ ಗೆ ಹೋದವ ದೇವರ ಪಾದ ಸೇರಿಬಿಟ್ಟಿದ್ದಾನೆ. ಇಂತಹ ದುರಂತ ಘಟನೆಗೆ ಸಾಕ್ಷಿಯಾಗಿದೆ ಕೊಡಗು. ಅಷ್ಟಕ್ಕೂ ಆ ವೈದ್ಯ ಮಾಡಿದ ಯಡವಟ್ಟಾದರೂ ಏನೂ ಅಂತೀರಾ..? ಈ ಸ್ಟೋರಿ ಓದಿ

Written by - Yashaswini V | Last Updated : Nov 7, 2025, 10:10 AM IST
  • ವೈದ್ಯರ ಎಡವಟ್ಟೋ ಏನೋ ಬಾಳಿ ಬದುಕಬೇಕಿದ್ದ ಯುವಕ ಸಾವು
  • ಎರಡೇರದು ಬಾರಿ ಇಂಜೆಕ್ಷನ್ ಹೋಯ್ತಾ ಯುವಕ ಪ್ರಾಣ?
  • ವೈದ್ಯರೆ ಯುವಕ ಸಾವಿಗೆ ಕಾರಣ ಎಂದು ಕುಟುಂಬಸ್ಥರ ಆರೋಪ
ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್'ಗೆ ಹೋದ ವ್ಯಕ್ತಿ ಸಾವು

Kodagu News: ಸೊಂಟ ನೋವು ಅಂತ ಖಾಸಗಿ ಆಸ್ಪತ್ರೆಗೆ ಹೋದ ಯವಕನೊಬ್ಬ ವೈದ್ಯರ ಎಡವಟ್ಟಿನಿಂದ ಮಸಣ ಸೇರಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ಬೆಳಕಿಗೆ ಬಂದಿದೆ. 

Add Zee News as a Preferred Source

ಚಿಕಿತ್ಸೆಗೆಂದು  ಹೋಗಿ ಹೆಣವಾದ ವ್ಯಕ್ತಿ ಮೂಲತಃ ಸುಂಟಿಕೊಪ್ಪದ ನಿವಾಸಿ ಜೀಪ್ ಚಾಲಕ 34 ವರ್ಷದ ವಿನೋದ್. ವಿನೋದ್ ಸುಂಟಿಕೊಪ್ಪದಲ್ಲಿ ಜೀಪ್ ಚಾಲಕನಾಗಿದ್ದ ಇಂದು(ನ.06) ಸಂಜೆ ಸೊಂಟ ಹಾಗೂ ಭುಜ ನೋವೆಂದು  ಸುಂಟಿಕೊಪ್ಪದ ಡಾ.ಯಶೋದರ ಪೂಜಾರಿಗೆ ಸೇರಿದ  ಖಾಸಗಿ ಕ್ಲೀನ್ ಗೆ  ಚಿಕಿತ್ಸೆಗೆ ತೆರೆಳಿದ್ದಾರೆ. ಚಿಕಿತ್ಸೆಗೆಂದು ತೆರಳಿದ ಯುವಕನಿಗೆ ಅಲ್ಲಿನ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಒಂದು ಇಂಜೆಕ್ಷನ್ ನೀಡಿದ  5 ನಿಮಿಷದ ಬಳಿಕ ಮತ್ತೊಂದು ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಿದ್ದಾರಂತೆ. ಮನೆಗೆ ಹೋಗುತ್ತಿದ್ದಂತೆ ವಿನೋದ್ ತೀವ್ರವಾಗಿ  ಅಸ್ವಸ್ಥಗೊಂಡಿದ್ದಾನೆ  ತಕ್ಷಣವೇ ಕುಟುಂಬಸ್ಥರು ಯುವಕನನ್ನ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿರೋದಾಗಿ  ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಸದ್ಯ ಯುವಕ‌ ಮೃತದೇಹ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಸಾವಿಗೆ ವೈದ್ಯರ ಮಾಡಿದ ಎಡವಟ್ಟೆ ನೇರ ಕಾರಣ ವೈದ್ಯರ ಎಡವಟ್ಟಿನಿಂದಲೆ ಯುವಕನ ಸಾವಾಗಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಇನ್ನು ಇದೆ ವೈದ್ಯರು ಹಲವು ಸಮಯದಿಂದಲೂ ಸುಂಟಿಕೊಪ್ಪದಲ್ಲೆ ವೈದ್ಯರಾಗಿದ್ದು ಇವರ ಬಳಿ ಚಿಕಿತ್ಸೆಗೆ  ತೆರಳಿವರು ಕೂಡ ಒಂದಷ್ಟು ಸಮಸ್ಯೆಗೆ ಒಳಗಾಗಿದ್ದಾರೆಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ನೋವಿನ ಸಮಸ್ಯೆಗೆ ಚಿಕಿತ್ಸೆಗೆಂದು ತೆರಳಿ ಗುಣಮುಖರಾಗಿ ಬರಬೇಕಿದ್ದ ಯುವಕ ಸಾವಿನ ಕದ ತಟ್ಟಿದ್ದು ಮಾತ್ರ ವಿಪರ್ಯಾಸ.

ಇದನ್ನೂ ಓದಿ- ಕೇರಳದ 4 ಪ್ರವಾಸಿ ಬಸ್‌ಗಳಿಗೆ ಕೊಡಗು ಜಿಲ್ಲೆಯಲ್ಲಿ ದಂಡ ವಿಧಿಸಿ ಕ್ರಮ

ಇದನ್ನೂ ಓದಿ- ಶಾಕಿಂಗ್ ಘಟನೆ...ರಾತ್ರಿ ವೇಳೆ ಹುಲಿ ಮರಿಗಳ ಜೊತೆ ವೀಡಿಯೋ!

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News