ಚಾಮರಾಜನಗರ: ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ವಾಟರ್ ಮನ್ ನೇ*ಣಿಗೆ ಕೊರಳೊಡ್ಡಿದ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರಿನಲ್ಲಿ ಶುಕ್ರವಾರ(ಅಕ್ಟೋಬರ್ 17) ನಡೆದಿದೆ. ಹೊಂಗನೂರು ಗ್ರಾಮದ ಚಿಕ್ಕೂಸನಾಯಕ( 60 )ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಹೊಂಗನೂರು ಗ್ರಾಮ ಪಂಚಾಯ್ತಿಯಲ್ಲಿ ಅರೆಕಾಲಿಕ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕೂಸನಾಯಕನಿಗೆ ಕಳೆದ 27 ತಿಂಗಳಿನಿಂದ ವೇತನ ಆಗಿರಲಿಲ್ಲ. ವೇತನ ಕೊಡಿ ಎಂದು ಗ್ರಾಪಂ ಪಿಡಿಒ ರಾಮೇಗೌಡ ಹಾಗೂ ಗ್ರಾಪಂ ಅಧ್ಯಕ್ಷಗೆ ಸಾಕಷ್ಟು ಬಾರಿ ಮನವಿ ಮಾಡಿದ ನಂತರವೂ, ಜಿಪಂ ಸಿಇಒ ಗಮನಕ್ಕೆ ತಂದರೂ ವೇತನ ಸಿಗದ ಹಿನ್ನೆಲೆ ಜಿಗುಪ್ಸೆಗೊಂಡು ಗ್ರಾಪಂ ಕಟ್ಟಡದ ಕಿಟಕಿಗೇ ನೇಣು ಬಿಗಿದುಕೊಂಡು ಚಿಕ್ಕೂಸನಾಯಕ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಡೆತ್ ನೋಟ್:
ಆ*ತ್ಮಹ*ತ್ಯೆ ಮಾಡಿಕೊಳ್ಳುವ ಮುನ್ನ ಚಿಕ್ಕೂಸನಾಯಕ ಡೆತ್ ನೋಟ್ ಬರೆದು ಗೋಡೆಗೆ ಅಂಟಿಸಿದ್ದಾರೆ. ತನಗೇ ರಜೆ ಕೊಡದೇ ಮಾನಸಿಕ ಹಿಂಸೆ ಕೊಡುತ್ತಿದ್ದರು. ಸಾಕಷ್ಟು ಬಾರಿ ಮನವಿ ಮಾಡಿದರೂ ವೇತನ ನೀಡದೇ ಸತಾಯಿಸಿ ನರಕ ತೋರಿಸಿದ್ದಾರೆ. ವೇತನಕ್ಕೆ ಪಿಡಿಒ ರಾಮೇಗೌಡ ಸಹಿ ಹಾಕಿದರೇ ಗ್ರಾಪಂ ಅಧ್ಯಕ್ಷರು ಸಹಿ ಮಾಡುತ್ತಿರಲಿಲ್ಲ, ತನ್ನ ಸಾವಿಗೆ ಪಿಡಿಒ ರಾಮೇಗೌಡ ಮತ್ತು ಗ್ರಾಪಂ ಅಧ್ಯಕ್ಷೆ ಪತಿ ಮೋಹನ್ ಕಾರಣವೆಂದು ಡೆತ್ ನೋಟ್ ಬರೆದಿದ್ದಾರೆ.
ಸದ್ಯ, ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಶೌಚಾಲಯ ಅವ್ಯವಸ್ಥೆ ಆರೋಪ: ಮಹಿಳಾ ಭಕ್ತರ ಆಕ್ರೋಶ
ಇದನ್ನೂ ಓದಿ- ಬಿಳಿಗಿರಿರಂಗನ ಹುಂಡಿ ದುಡ್ಡಿಗೆ ಕಣ್ಣು- ಮೂವರು ಜೈಲುಪಾಲು









