)
ಸದ್ದಿಲ್ಲದೆ ನಾಡಹಬ್ಬ ದಸರೆಯ ಕಳೆ ಹೆಚ್ಚಾಗುತ್ತಿದ್ದು, ಇಂದು ಮೊದಲ ತಂಡಕ್ಕೆ ಮತ್ತೈದು ಹೊಸ ಆನೆಗಳ ಸೇರ್ಪಡೆಯಾಗಿದೆ. ಈ ಮೂಲಕ ನಾಳೆಯಿಂದ ದಸರೆಯ ರಾಜಬೀದಿಯಲ್ಲಿ ರಿಯಲ್ ತಾಲೀಮು ಶುರುವಾಗಲಿದ್ದು ಅರಣ್ಯ ಇಲಾಖೆ ಇದ್ದಕ್ಕಾಗಿ ಸನ್ನದ್ಧವಾಗಿದೆ.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆಯಲ್ಲಿ ಇಂದು ಮೈಸೂರಿಗೆ ಎರಡನೇ ಹಂತದ 5 ಆನೆಗಳ ಆಗಮನವಾಗಿದೆ. ಮತ್ತಿಗೋಡು ಶಿಬಿರದಿಂದ ಶ್ರೀಕಂಠ (56) ಭೀಮನಕಟ್ಟೆ ಆನೆ ಶಿಬಿರದಿಂದ ರೂಪ (44)
ದುಬಾರೆ ಆನೆ ಶಿಬಿರದಿಂದ ಗೋಪಿ (42) ಸುಗ್ರೀವ (43) ಮತ್ತು ಹೇಮಾವತಿ (11) ಆಗಮನವಾಗಿದೆ.
ಇನ್ನು ಲಾರಿ ಮೂಲಕ ಕರೆತರಲಾಗಿದ್ದ ಆನೆಗಳನ್ನ ಲಾರಿಯಿಂದ ಇಳಿಸಿದ ಬಳಿಕ ಸಾಂಪ್ರದಾಯಿಕವಾಗಿ ಜಿಲ್ಲಾಡಳಿತದ ವತಿಯಿಂದ ಪೂಜೆ ನೆರವೇರಿಸಲಾಯಿತು. ಇದೇ ಮೊದಲ ಬಾರಿಗೆ ದಸರೆಯಲ್ಲಿ ಶ್ರೀಕಂಠ, ರೂಪ, ಹೇಮಾವತಿ ಆನೆಗಳು ಭಾಗಿಯಾಗಿದ್ದು, ಗಜಪಡೆಗೆ ಪೂಜೆ ಸಲ್ಲಿಸಿ ಅರಮನೆಯ ಜಯ ಮಾರ್ತಾಂಡ ದ್ವಾರದಿಂದ ಬರಮಾಡಿಕೊಳ್ಳಲಾಯಿತು. ಈ ವೇಳೆ ಆನೆಗಳಿಗೆ ಕಬ್ಬು ಬೆಲ್ಲ ಕಜ್ಜಾಯ ಸಿಹಿ ನೀಡಿ ಡಿಸಿಎಫ್ ಪ್ರಭುಗೌಡ ಆನೆಗಳನ್ನ ಬರಮಾಡಿಕೊಂಡರು.
ಒಟ್ಟಾರೆ, ನಾಡಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ನಗರಕ್ಕೆ ಗಜಪಡೆಯ ಆನೆಗಳು ಹೊಂದಿಕೊಳ್ಳುತ್ತಿವೆ. ಈ ನಡುವೆ, ಎರಡನೇ ತಂಡದ ಆಗಮನದಿಂದ ನಗರದಲ್ಲಿ ಹೊಸ ಕಳೆ ಕಟ್ಟಿದೆ.
ಇದನ್ನೂ ಓದಿ : ಮರವೇರಿ ಕುಳಿತ ಕರಡಿ, ಜನರಲ್ಲಿ ಆತಂಕ