)
Leopard Viral Video: ಬೆಂಗಳೂರು - ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಚಾಮರಾಜನಗರ ಗಡಿಭಾಗವಾದ ದಿಂಬಂ ಘಟ್ಟ ಪ್ರದೇಶದ ತಡೆಗೋಡೆ ಮೇಲೆ ಚಿರತೆ ಹಾಯಾಗಿ ಕುಳಿತ ದೃಶ್ಯ ಗುರುವಾರ(ಆ. 21) ತಡರಾತ್ರಿ ನಡೆದಿದೆ.
ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ವೇಳೆ ದಿಂಬಂನ 27ನೇ ತಿರುವಿನ ತಡೆಗೋಡೆ ಮೇಲೆ ಚಿರತೆಯೊಂದು ಹಾಯಾಗಿ ಕುಳಿತಿದ್ದನ್ನು ಕಂಡ ಆ್ಯಂಬುಲೆನ್ಸ್ ಚಾಲಕ ವಿಡಿಯೋ ಮಾಡಿದ್ದಾರೆ.
ರಸ್ತೆ ತಡೆಗೋಡೆ ಮೇಲೆ ಸಾಕಷ್ಟು ಸಮಯ ಕುಳಿತಿದ್ದ ಚಿರತೆ ಬಳಿಕ ತಡೆಗೋಡೆ ಇಳಿದು ಕಾಡಿನತ್ತ ಮರಳಿದೆ. ಹಾಯಾಗಿ ಕುಳಿತಿದ್ದ ಚಿರತೆಗೆ ಆಂಬುಲೆನ್ಸ್ ಚಾಲಕನಿಂದ ನಿದ್ರಾಭಂಗವಾದಂತೆ ಆಗಿದ್ದು, ಮನುಷ್ಯರ ಸಹವಾಸವೇ ಸಾಕು ಎಂಬಂತೆ ಕ್ಷಣಾರ್ಧದಲ್ಲೇ ಮಾಯವಾಗಿದೆ.
ಇನ್ನು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿರತೆ ರಸ್ತೆ ತಡೆಗೊಡೆ ಮೇಲೆ ಆರಾಮಾಗಿ ಕುಳಿತಿರುವ ವೈರಲ್ ವಿಡಿಯೋವನ್ನು ಇಲ್ಲಿ ವೀಕ್ಷಿಸಿ.