ಮಂಡ್ಯ: ರಾಜ್ಯದ ಜನರ ಬದುಕು ಹಸನಾಗಿಸಲು ಜೆಡಿಎಸ್ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿಯವರು ಮತ್ತೊಮ್ಮೆ ಸಿಎಂ ಆಗಬೇಕೆಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದ ನಾಗಮಂಗಲದ ಲಕ್ಕೇಗೌಡನಕೊಪ್ಪಲು ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘ಜೆಡಿಎಸ್ ಪಕ್ಷವನ್ನು ಕೆಳಗಿಳಿಸಿದ ಬಿಜೆಪಿಗೆ 40% ಸರ್ಕಾರ ಅಂತಾ ಪಟ್ಟ ಕಟ್ಟಲಾಗಿದೆ. ಭ್ರಷ್ಟ ಬಿಜೆಪಿಯನ್ನು ಸೋಲಿಸಿ ಜೆಡಿಎಸ್ ಗೆಲ್ಲಿಸಬೇಕೆಂದು’ ನಿಖಿಲ್ ಮನವಿ ಮಾಡಿಕೊಂಡಿದ್ದಾರೆ. ನಾಗಮಂಗಲ ತಾಲೂಕಿನ ಮೇಲೆ ಅಪಾರವಾದ ಪ್ರೀತಿ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ನನಗೆ ಅತೀಹೆಚ್ಚು ಲೀಡ್ ಕೊಟ್ಟಿದ್ದು ನಾಗಮಂಗಲದ ಜನರು. ನಿಮ್ಮ ಈ ಪ್ರೀತಿಯ ಋಣಕ್ಕೆ ನಾನು ಚಿರರುಣಿಯಾಗಿರ್ತೇನೆ. ಎಲ್ಲಾ ಕಡೆ ಯುವಕರ ಅಪೇಕ್ಷೆ ನನಗೆ ಹೆಚ್ಚಾಗಿದೆ. ಪಕ್ಷದ ಹೆಚ್ಚಿನ ಜವಬ್ದಾರಿ ಇರುವುದು ನನ್ನ ಕರ್ತವ್ಯ ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರಿಂದ ಹಲ್ಲೆ
ನನ್ನ ಅಮೂಲ್ಯ ಸಮಯವನ್ನು ಒಂದೆರಡು ಜಿಲ್ಲೆಗೆ ಸೀಮಿತಗೊಳಿಸದೆ ಎಲ್ಲಾ ಕಡೆ ಹೋಗಬೇಕಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕುಮಾರಣ್ಣನವರ ಕುಟುಂಬದಲ್ಲಿ ಹುಟ್ಟಿರುವುದೇ ನನ್ನ ಪುಣ್ಯ. ದೇಶದ ಯಾವುದೇ ಸಿಎಂ ಸಾಲಮನ್ನಾ ಮಾಡಿಲ್ಲ. ಸಾಲ ಮನ್ನಾ ಮಾಡಿದ್ದು ಕುಮಾರಣ್ಣ ಮಾತ್ರ. ಇಂದಿಗೂ ರಾಜ್ಯದ ಜನತೆಗೆ ಕುಮಾರಣ್ಣನೇ ಸಿಎಂ ಎಂಬಂತಾಗಿದೆ ಅಂತಾ ನಿಖಿಲ್ ಹೇಳಿದ್ದಾರೆ.
ಕುಮಾರಸ್ವಾಮಿಯವರು ಅವರ ರಾಜಕೀಯ ಸುದೀರ್ಘ ಅನುಭವದಿಂದ ಪಂಚರಥ ಯಾತ್ರೆ ನಡೆಸುತ್ತಿದ್ದಾರೆ. ಮತ್ತೆ ಸಿಎಂ ಆದರೂ ಮಾಜಿ ಸಿಎಂ ಎಂಬುದಷ್ಟೆ ಬರೋದು. ಆದರೆ ಕುಮಾರಣ್ಣನವರು ರಾಜ್ಯದ ಜನರ ಬದುಕು ಹಸನುಗೊಳಿಸಲು ಮುಂದಾಗಿದ್ದಾರೆಯೇ ಹೊರತು ಸಿಎಂ ಅಧಿಕಾರಕ್ಕಲ್ಲ. ಬಿಜೆಪಿ ನಮ್ಮ ಸರ್ಕಾರವನ್ನು ಇಳಿಸಿ 40% ಸರ್ಕಾರವೆಂದು ಹೆಸರು ಮಾಡಿದೆ. ಮತದಾರರು ಈ ಬಗ್ಗೆ ಯೋಚಿಸಿ ತಮ್ಮ ಹಕ್ಕು ಚಲಾಯಿಸಬೇಕು ಅಂತಾ ನಿಖಿಲ್ ಹೇಳಿದ್ದಾರೆ.
ಇದನ್ನೂ ಓದಿ: Mangaluru Auto Blast: ಸ್ಥಳಕ್ಕೆ ಎಡಿಜಿಪಿ ಭೇಟಿ, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ!
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳು ಇಂದು ಸೇವೆಯ ಬದಲು ಉದ್ಯಮವಾಗಿವೆ. ದೇಶದಲ್ಲಿ ಉದ್ಯೋಗವು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಪ್ರತೀ ಜಿಲ್ಲಾ ಹಂತದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶವನ್ನು ಕುಮಾರಣ್ಣನವರು ಹೊಂದಿದ್ದಾರೆ. ಜನರ ಬದುಕು ಹಸನಾಗಲು ಜನತಾದಳವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ. ನಮ್ಮ ಅಭ್ಯರ್ಥಿ ಸುರೇಶ್ ಗೌಡರಿಗೆ ಹೆಚ್ಚಿನ ಲೀಡ್ ನೀಡುವ ಮೂಲಕ ಮತ್ತೊಮ್ಮೆ ಅವರ ಕೈ ಬಲಪಡಿಸಬೇಕೆಂದು ನಿಖಿಲ್ ಮನವಿ ಮಾಡಿಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.