Food Astrology: ಊಟ ಮಾಡುವಾಗ ಈ ಸಂಗತಿಗಳನ್ನು ನೆನಪಿನಲ್ಲಿಡಿ, ಅದೃಷ್ಟ ಹೊಳೆಯಲು ಸಮಯ ಬೇಕಾಗುವುದಿಲ್ಲ

Best Direction for Eating Food: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ,  ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ. ಸಮಯ ಇರುವಾಗ ಅವುಗಳತ್ತ ಗಮನ ನೀಡಿದರೆ, ಅದೃಷ್ಟವು ಫಟ್ ಅಂತ ಬದಲಾಗುತ್ತದೆ.

Best Direction for Eating Food: ಜೀವನದಲ್ಲಿ ನಡೆಯುವ ಹಲವು ಸಂಗತಿಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಆದರೆ,  ಜ್ಯೋತಿಷ್ಯದ ವಿಚಾರದಲ್ಲಿ ಈ ಸಣ್ಣಪುಟ್ಟ ಸಂಗತಿಗಳಿಗೂ ಕೂಡ ಮಹತ್ವವಿದೆ. ಸಮಯ ಇರುವಾಗ ಅವುಗಳತ್ತ ಗಮನ ನೀಡಿದರೆ, ಅದೃಷ್ಟವು ಫಟ್ ಅಂತ ಬದಲಾಗುತ್ತದೆ. ಇಂದು ನಾವು ಆಹಾರ ಸೇವಿಸುವಾಗ ಅನುಸರಿಸಬೇಕಾದ ಕೆಲ ಸಂಗತಿಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಸಂಗತಿಗಳನ್ನು ಸರಿಪಡಿಸಿಕೊಂಡರೆ ಅವು ನಿಮ್ಮ ಮನೆಯಲ್ಲಿಯೂ ಕೂಡ ಸಮೃದ್ಧಿಗೆ ಕಾರಣವಾಗಬಲ್ಲವು.

 

ಇದನ್ನೂ ಓದಿ-Rudraksha Benefit: ನವಗ್ರಹಗಳ ಅಶುಭ ಪ್ರಭಾವಗಳಿಂದ ರಕ್ಷಿಸುತ್ತದೆ ಈ ಅದ್ಭುತ ರುದ್ರಾಕ್ಷ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ವಾಸ್ತು ಶಾಸ್ತ್ರದ ಪ್ರಕಾರ ಆಹಾರ ಸೇವಿಸುವಾಗ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಸಂಗತಿಗಳು ಆರೋಗ್ಯದ ದೃಷ್ಟಿಯಿಂದ ಸಂಗತಿಗಳಾಗಿವೆ, ಜೊತೆಗೆ ಅವುಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಕೂಡ ಮಹತ್ವವಿದೆ. ಆಹಾರ ಸೇವಿಸುವಾಗ ಈ ಸಂಗತಿಗಳನ್ನು ಪಾಲಿಸುವುದು ತುಂಬಾ ಸುಲಭ. ಈ ವಿಷಯಗಳನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸಿದರೆ, ಅದೃಷ್ಟದ ಬೆಂಬಲ ನಿಮಗೆ ಸಿಗಲಾರಂಭಿಸುತ್ತದೆ.  

2 /5

2. ದಕ್ಷಿಣ ದಿಕ್ಕಿಗೆ ಮುಖಮಾಡಿ ಆಹಾರವನ್ನು ಸೇವಿಸಬಾರದು. ಈ ವಿಷಯವನ್ನು ಮನೆಯಲ್ಲಿ ಮಾತ್ರವಲ್ಲ, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಲ್ಲಿಯೂ ಅನುಸರಿಸಬೇಕು. ಈ ದಿಕ್ಕಿಗೆ ಮುಖಮಾಡಿ ತಿನ್ನುವುದರಿಂದ ನಕಾರಾತ್ಮಕ ಆಲೋಚನೆಗಳು ಮನಸ್ಸಿನಲ್ಲಿ ಬರಲಾರಂಭಿಸುತ್ತವೆ.  

3 /5

3. ಹಲವರಿಗೆ  ಆಹಾರ ಸೇವಿಸುವಾಗ ನೀರು ಕುಡಿಯುವ ಅಭ್ಯಾಸ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀರಿನ ಗ್ಲಾಸನ್ನು ಯಾವಾಗಲೂ ಬಲಭಾಗದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿದೆ, ಏಕೆಂದರೆ ಎಡಗೈಯಿಂದ ನೀರನ್ನು ಕುಡಿಯುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇನ್ನೊಂದೆಡೆ ಬಲಗೈಯಿಂದ ನೀರು ಕುಡಿಯುವುದು ಅದೃಷ್ಟವನ್ನು ಹೆಚ್ಚಿಸುತ್ತದೆ.  

4 /5

4. ಆಹಾರದ ಪ್ಲೇಟ್ ಅಥವಾ ತಟ್ಟೆಯಲ್ಲಿ ಕೈಗಳನ್ನು ಎಂದಿಗೂ ತೊಳೆಯಬಾರದು. ಈ ರೀತಿ ಮಾಡುವುದರಿಂದ ತಾಯಿ ಅನ್ನಪೂರ್ಣೆ ಮುನಿಸಿಕೊಳ್ಳುತ್ತಾಳೆ ಎನ್ನಲಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಈ ಅಭ್ಯಾಸವನ್ನು ತಪ್ಪು ಎಂದು ಹೇಳಲಾಗಿದೆ. ಆಹಾರದ ತಟ್ಟೆಯಲ್ಲಿ ಕೈಗಳನ್ನು ತೊಳೆಯುವುದರಿಂದ ನಿಮಗೆ ಬೆಂಬಲ ನೀಡುತ್ತಿರುವ ಅದೃಷ್ಟ ಮುನಿಸಿಕೊಳ್ಳುವ ಸಾಧ್ಯತೆ ಇದೆ.  

5 /5

5. ತಿನ್ನುವಾಗ ಆಹಾರದ ಒಂದು ಸಣ್ಣ ಭಾಗವನ್ನು ಯಾವಾಗಲೂ ತೆಗೆದು ತಟ್ಟೆಯ ಪಕ್ಕಕ್ಕೆ ಇರಿಸಬೇಕು. ಈ ಸಣ್ಣ ಭಾಗವನ್ನು ಇರುವೆಗಳಿಗಾಗಿ  ಅಥವಾ ಪಕ್ಷಿಗಳಿಗಾಗಿ ಮರ ಅಥವಾ ಛಾವಣಿಯ ಮೇಲೆ ಇರಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಬರುವ ಸಮಸ್ಯೆಗಳು ದೂರಾಗುತ್ತವೆ.