New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು

Facial Recognition ಮೂಲಕ ವಿಮಾನ ನಿಲ್ದಾಣಗಳಲ್ಲಿ ಚೆಕ್ ಇನ್ ಹಾಗೂ ಸೆಲ್ಫ್ ಬ್ಯಾಗ್ ಡ್ರಾಪ್ ಸೌಕರ್ಯವನ್ನು ಒದಗಿಸಲು 'ಡಿಜಿ ಯಾತ್ರಾ' ಸೇವೆ ಅಧಿಕೃತವಾಗಿ ಆರಂಭಗೊಳ್ಳುತ್ತಿದೆ.  

Written by - Nitin Tabib | Last Updated : Nov 30, 2022, 08:25 PM IST
  • ಡಿಜಿ ಯಾತ್ರಾ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು
  • ಡಿಜಿ ಯಾತ್ರಾ ಫೌಂಡೇಶನ್ (ಡಿವೈಎಫ್) ಅನ್ನು ರಚಿಸಲಾಗಿದೆ.
  • DYF ದೇಶಾದ್ಯಂತ ಈ ವ್ಯವಸ್ಥೆಯಡಿಯಲ್ಲಿ ಪ್ರಯಾಣಿಕರ ID ಮೌಲ್ಯೀಕರಣ ಪ್ರಕ್ರಿಯೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ.
New Rules: ನಾಳೆಯಿಂದ ಬೆಂಗಳೂರು ಸೇರಿದಂತೆ 3 ವಿಮಾನ ನಿಲ್ದಾಣಗಳಲ್ಲಿ ನಿಮ್ಮ ಮುಖವೇ ನಿಮ್ಮ ಗುರುತು title=
Digi Yatra Launch

Digi Yatra Service Launch: ನೀವು ಕೂಡ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ ಈ ಸುದ್ದಿ ನಿಮಗಾಗಿ. ವಿಮಾನ ಪ್ರಯಾಣವನ್ನು ಕಾಗದ ರಹಿತ ಮತ್ತು ಜಗಳ ಮುಕ್ತಗೊಳಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಅಧಿಕೃತವಾಗಿ 'ಡಿಜಿ ಯಾತ್ರಾ' ಸೇವೆಯನ್ನು ಆರಂಭಿಸಲಿದೆ. ಪೇಪರ್ ದಾಖಲೆಗಳ ಬದಲಿಗೆ ಮುಖ ಗುರುತಿಸುವಿಕೆ ಮತ್ತು ಆಧಾರ್ ಕಾರ್ಡ್ ಅಥವಾ ಮೊಬೈಲ್ ಫೋನ್ ಮೂಲಕ ಇ-ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಗಮಗೊಳಿಸುವ ಈ ಸೇವೆಯು ಡಿಸೆಂಬರ್ 1 ರಿಂದ ಪ್ರಾರಂಭವಾಗಲಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ದೆಹಲಿ ವಿಮಾನ ನಿಲ್ದಾಣದಿಂದ ಇದರ ಶುಭಾರಂಭ ಮಾಡಲಿದ್ದಾರೆ. ಒಂದೊಮ್ಮೆ ಈ ಸೇವೆ ಬಿಡುಗಡೆಯಾದರೆ, ವಿಮಾನ ಪ್ರಯಾಣದ ವೇಳೆ ನಿಮ್ಮ ಮುಖವೇ ನಿಮ್ಮ ಗುರುತಾಗಿರಲಿದೆ. ಮೊದಲ ಹಂತದಲ್ಲಿ ದೇಶದ ಮೂರು ನಗರಗಳ ವಿಮಾನ ನಿಲ್ದಾಣಗಳಲ್ಲಿ ಇದನ್ನು ಪ್ರಾರಂಭಿಸಲಾಗುತ್ತಿದೆ. 2023 ರಲ್ಲಿ, ಮತ್ತೆ 4 ನಗರಗಳು ಈ ಸೇವೆಯನ್ನು ಪಡೆದುಕೊಳ್ಳಲಿವೆ.

ಮೂರನೇ ಹಂತದಿಂದ ಇಡೀ ದೇಶದಲ್ಲಿ ಸೇವೆ ಲಭ್ಯವಾಗಲಿದೆ
ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ​​ಸೆಕ್ಯುರಿಟಿ (ಬಿಸಿಎಎಸ್) ಗಳ ಜಂಟಿ ಉಪಕ್ರಮವಾದ ಡಿಜಿ ಯಾತ್ರೆಯನ್ನು ಮೊದಲು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಾರಣಾಸಿ ವಿಮಾನ ನಿಲ್ದಾಣದಿಂದ ಪ್ರಾರಂಭಿಸಲಾಗುತ್ತಿದೆ. ಇದರ ನಂತರ, ಅದರ ಎರಡನೇ ಹಂತವನ್ನು ಮಾರ್ಚ್ 2023ಕ್ಕೆ ಆರಂಭವಾಗುತ್ತಿದೆ. ಈ ಹಂತದಲ್ಲಿ ವಿಜಯವಾಡ, ಹೈದರಾಬಾದ್, ಕೋಲ್ಕತ್ತಾ ಮತ್ತು ಪುಣೆ ಈ  4 ನಗರಗಳ ವಿಮಾನ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲಾಗುವುದು ಎನ್ನಲಾಗಿದೆ. ಮೂರನೇ ಹಂತದಲ್ಲಿ ದೇಶದ ಒಲಿದ ಎಲ್ಲಾ ವಿಮಾನ ನಿಲ್ದಾಣಗಳು ಏಕಕಾಲಕ್ಕೆ ಡಿಜಿ ಯಾತ್ರಾ  ಹೈಟೆಕ್ ಇ-ಬೋರ್ಡಿಂಗ್ ಸೌಲಭ್ಯವನ್ನು ಪಡೆದುಕೊಳ್ಳಲಿವೆ.

ಇದನ್ನೂ ಓದಿ-ಮಾರ್ಚ್ 2024 ರ ವೇಳೆಗೆ ಏರ್ ಇಂಡಿಯಾ, ವಿಸ್ತಾರಾ ವಿಲೀನ

ಅಧಿಕೃತ ವೆಬ್‌ಸೈಟ್ India.gov.in ನಲ್ಲಿ ನೀಡಿರುವ ಪ್ರಕಾರ, ಡಿಜಿ ಯಾತ್ರಾ ವಿಮಾನ ಪ್ರಯಾಣಿಕರ ಪ್ರಯಾಣವನ್ನು ಸಂಪೂರ್ಣ ಡಿಜಿಟಲ್ ಅನುಭವದೊಂದಿಗೆ ಸಂಪರ್ಕಿಸುತ್ತದೆ. ಇದಕ್ಕಾಗಿ ಪ್ರಯಾಣಿಕರು ಡಿಜಿ ಯಾತ್ರಾ ಪ್ಲಾಟ್‌ಫಾರ್ಮ್ ಮೂಲಕ ನೋಂದಾಯಿಸಿಕೊಳ್ಳಬೇಕು. ಇದಾದ ನಂತರ, ವಿಮಾನ ನಿಲ್ದಾಣದಲ್ಲಿ ಎಂಟ್ರಿ ಪಾಯಿಂಟ್ ಚೆಕ್, ಸೆಕ್ಯುರಿಟಿ ಚೆಕ್ ಎಂಟ್ರಿ, ಏರ್‌ಕ್ರಾಫ್ಟ್ ಬೋರ್ಡಿಂಗ್ ಮುಂತಾದ ಎಲ್ಲಾ ಚೆಕ್ ಪಾಯಿಂಟ್‌ಗಳಲ್ಲಿ ತಮ್ಮ ಮುಖ ಗುರುತಿಸುವಿಕೆ ವ್ಯವಸ್ಥೆಯ ಮೂಲಕ ಡಿಜಿಟಲ್ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ, ಈ ವ್ಯವಸ್ಥೆಯನ್ನು ಸ್ವಯಂ ಬ್ಯಾಗ್ ಡ್ರಾಪ್ ಮತ್ತು ಚೆಕ್-ಇನ್ ಮಾಡಲು ಸಹ ಬಳಸಲಾಗುತ್ತಿದೆ. ಇದು ನಿಮ್ಮ ಇಡೀ ಪ್ರಯಾಣವನ್ನು ಕಾಗದರಹಿತವಾಗಿಸಲಿದೆ ಮತ್ತು ಪ್ರಯಾಣಿಕರು ತಮ್ಮ ಗುರುತಿನ ದಾಖಲೆಗಳನ್ನು ಮತ್ತೆ ಮತ್ತೆ ತೋರಿಸಬೇಕಾಗಿಲ್ಲ.

ಇದನ್ನೂ ಓದಿ-Funny Video: ಮೇಕೆ ಮರಿ ಮುಂದೆ ಹಾರಾಡಿ ಕೆಣಕಿದ ಕೋಳಿ, ಕಲಿತ ಪಾಠ ಲೈಫ್ ಲಾಂಗ್ ಮರೆಯಲ್ಲ

ಡಿಜಿ ಯಾತ್ರಾ ಫೌಂಡೇಶನ್ ಇದರ ಉಸ್ತುವಾರಿ ನೋಡಿಕೊಳ್ಳಲಿದೆ
ಡಿಜಿ ಯಾತ್ರಾ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಡಿಜಿ ಯಾತ್ರಾ ಫೌಂಡೇಶನ್ (ಡಿವೈಎಫ್) ಅನ್ನು ರಚಿಸಲಾಗಿದೆ. DYF ದೇಶಾದ್ಯಂತ ಈ ವ್ಯವಸ್ಥೆಯಡಿಯಲ್ಲಿ ಪ್ರಯಾಣಿಕರ ID ಮೌಲ್ಯೀಕರಣ ಪ್ರಕ್ರಿಯೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ. ಕಂಪನಿಗಳ ಕಾಯಿದೆ, 2013 ರ ಸೆಕ್ಷನ್-8 ರ ಅಡಿಯಲ್ಲಿ ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಾಗಿ 2019 ರಲ್ಲಿ DYF ಅನ್ನು ರಚಿಸಲಾಗಿದೆ. ಈ ಜಂಟಿ ಕಂಪನಿಯಲ್ಲಿ, ಶೇ.26 ರಷ್ಟು ಷೇರುಗಳನ್ನು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹೊಂದಿದೆ ಮತ್ತು ಉಳಿದ ಶೇ.74 ಷೇರುಗಳನ್ನು ಬೆಂಗಳೂರು, ದೆಹಲಿ, ಹೈದರಾಬಾದ್, ಮುಂಬೈ ಮತ್ತು ಕೊಚ್ಚಿ ವಿಮಾನ ನಿಲ್ದಾಣಗಳ ಖಾಸಗಿ ನಿರ್ವಾಹಕರು ಹೊಂದಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News