ʼಲಂಕಾಸುರʼ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬಕ್ಕೆ ಸಾಂಗ್‌ ರಿಲೀಸ್‌

ಡಿಸೆಂಬರ್ 3 ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬದ ವಿಶೇಷವೆಂದರೆ, ವಿನೋದ್ ಪ್ರಭಾಕರ್ ಅವರು ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ "ಲಂಕಾಸುರ" ಚಿತ್ರ ಸಹ ನಿರ್ಮಾಣವಾಗಿದೆ‌. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. 

Written by - YASHODHA POOJARI | Edited by - Krishna N K | Last Updated : Dec 3, 2022, 05:47 PM IST
  • ಇಂದು ನಟ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ
  • ಲಂಕಾಸುರ ಚಿತ್ರತಂಡದಿಂದ ಮರಿ ಟೈಗರ್‌ಗೆ ಸಾಂಗ್‌ ಗಿಫ್ಟ್‌
  • "ಇಂಡಸ್ಟ್ರೀಯ ಹುಲಿಯ ವಂಶ" ಎಂಬ ಹಾಡು ರಿಲೀಸ್‌
 ʼಲಂಕಾಸುರʼ ವಿನೋದ್‌ ಪ್ರಭಾಕರ್‌ ಹುಟ್ಟುಹಬ್ಬಕ್ಕೆ ಸಾಂಗ್‌ ರಿಲೀಸ್‌ title=

Vinod prabhakar birthday song : ಡಿಸೆಂಬರ್ 3 ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಹುಟ್ಟುಹಬ್ಬ. ಈ ಬಾರಿಯ ಹುಟ್ಟುಹಬ್ಬದ ವಿಶೇಷವೆಂದರೆ, ವಿನೋದ್ ಪ್ರಭಾಕರ್ ಅವರು ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ "ಲಂಕಾಸುರ" ಚಿತ್ರ ಸಹ ನಿರ್ಮಾಣವಾಗಿದೆ‌. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. 

"ಇಂಡಸ್ಟ್ರೀಯ ಹುಲಿಯ ವಂಶ" ಎಂಬ ಹಾಡನ್ನು ಬಿಡುಗಡೆ ಮಾಡುವ ಮೂಲಕ "ಲಂಕಾಸುರ" ತಂಡ ವಿನೋದ್ ಪ್ರಭಾಕರ್ ಅವರಿಗೆ ವಿನೂತನವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಚೇತನ್ ಆಲೂರ್ ಬರೆದಿರುವ ಈ ಹಾಡಿಗೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಹಾಗೂ ಮದ್ವೇಶ್ ಈ ಹಾಡನ್ನು ಹಾಡಿದ್ದಾರೆ. ಪ್ರಮೋದ್ ಕುಮಾರ್ "ಲಂಕಾಸುರ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಇದನ್ನೂ ಓದಿ: Megha Thakur: ಮಾಡೆಲ್ ಮೇಘಾ ಠಾಕೂರ್ ಸಾವು

ವಿಶೇಷ ಅಂದ್ರೆ ವಿನೋದ್ ಜೊತೆಗೆ ಲೂಸ್ ಮಾದ ಯೋಗಿ ಕೂಡ ಲಂಕಾಸುರ ಸಿನಿಮಾದಲ್ಲಿ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇನ್ನು ಡೈನಾಮಿಕಟ್‌ ಸ್ಟಾರ್‌  ದೇವರಾಜ್ ಅವರು ಡಾನ್, ರವಿಶಂಕರ್ ಅವರು ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್‌ಗೆ ನಾಯಕಿಯರಾಗಿ ಪಾರ್ವತಿ ಅರುಣ್ ಮತ್ತು ಆದ್ಯಾ ಪ್ರಿಯಾ ನಟಿಸಿದ್ದಾರೆ. ಈಗಾಗಲೇ ಸೆನ್ಸಾರ್ ಸರ್ಟಿಫಿಕೇಟ್ ಮುಗಿಸಿರುವ ಚಿತ್ರ ಸದ್ಯ ಬಿಡುಗಡೆ ದಿನಾಂಕವನ್ನು ಪ್ರಕಟಿಸಬೇಕಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News