ಸಾಕಷ್ಟು ವಿರೋಧದ ನಡುವೆಯೂ ಆರಂಭಗೊಳ್ಳುತ್ತಿದೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಅದು ಸಾಕಷ್ಟು ವಿರೋಧದ ನಡುವೆಯೂ ಆರಂಭಗೊಳ್ಳುತ್ತಿರುವ ರೈಲ್ವೆ ಮಾರ್ಗ. ಈಗ ಮತ್ತೊಂದು ಪ್ರಸ್ತಾವನೆಗೆ ವನ್ಯಜೀವಿ ಮಂಡಳಿ ನಿರ್ದೇಶನ ನೀಡಿದೆ. ಹುಲಿ ಮತ್ತು ಆನೆ ಕಾರಿಡಾರ್ ಬಗ್ಗೆ ಕೇಂದ್ರ ಅಧ್ಯಯನ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ಈ ಸ್ಟೋರಿ ಓದಿ...

Written by - Yashaswini V | Last Updated : Feb 10, 2023, 08:12 AM IST
  • ಸಾಕಷ್ಟು ವಿರೋಧದ ನಡುವೆಯೂ ಆರಂಭಗೊಳ್ಳುತ್ತಿದೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ
  • ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜ್ಯದ ಪ್ರಮುಖ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶದ ಯೋಜನೆ
  • ಹೊಸದಾಗಿ ಸಮಿತಿ ರಚಿಸಿ ಪರಿಷ್ಕೃತ ವಿಸ್ತತ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ದೇಶನ
ಸಾಕಷ್ಟು ವಿರೋಧದ ನಡುವೆಯೂ ಆರಂಭಗೊಳ್ಳುತ್ತಿದೆ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ title=
Hubli-Ankola Railway Line

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ: ಉತ್ತರ ಕರ್ನಾಟಕದ ಜಿಲ್ಲೆಗಳಿಂದ ರಾಜ್ಯದ ಪ್ರಮುಖ ಬಂದರುಗಳಿಗೆ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿರುವ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ಹೊಸದಾಗಿ ಸಮಿತಿ ರಚಿಸಿ ಪರಿಷ್ಕೃತ ವಿಸ್ತತ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರ್ದೇಶನ ನೀಡಿದೆ. ಜನವರಿ 27 ರಂದು ನಡೆದ ಮಂಡಳಿ ಸಭೆಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಸಂಬಂಧಿಸಿ ಅಧ್ಯಯನ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದ ಕೇಂದ್ರ ಪರಿಶೀಲನಾ ಸಮಿತಿ ಸಲ್ಲಿಸಿದ ವರದಿ ಆಧಾರದ ಮೇಲೆ ಮಂಡಳಿ ಈ ನಿರ್ದೇಶನ ನೀಡಿದೆ. ಮಂಡಳಿ ನಡೆಸಿದ ಸಭೆಯ ನಡಾವಳಿ ಪ್ರತಿಯು ಲಭ್ಯವಾಗಿದೆ. ಆದರೆ, ಅಧ್ಯಯನ ಸಮಿತಿಯು ಯೋಜನೆಯನ್ನು ಎಲ್ಲಿಯೂ ವಿರೋಧಿಸಿದ ಅಂಶಗಳು ಕಂಡು ಬಂದಿಲ್ಲ ಎಂಬುದು ವಿಶೇಷವಾಗಿದೆ.
 
ಇನ್ನು ವನ್ಯಜೀವಿ ಹೆಚ್ಚುವರಿ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಧಾರವಾಡ ಐಐಟಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರು, ರಾಷ್ಟ್ರೀಯ ಹೆದ್ದಾರಿ, ಕರ್ನಾಟಕ ಸರಕಾರ, ರೈಲ್ವೆ ಇಲಾಖೆ, ಗತಿ ಶಕ್ತಿ ಯೋಜನಾ ತಜ್ಞರು ಹಾಗೂ ಕೇಂದ್ರ ಲೋಕೋಪಯೋಗಿ ಇಲಾಖೆ ಮುಖ್ಯಸ್ಥರ ಒಳಗೊಂಡ ಸಮಿತಿ ರಚಿಸಬೇಕು. ಈ ಸಮಿತಿಯು ವರ್ಕ್‌ಶಾಪ್‌ಗಳ ಮೂಲಕ ಸಮಗ್ರ ವಿಚಾರಗಳ ಮಂಡನೆ ಮಾಡಿ ಸಮಗ್ರ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ. 

ಇದನ್ನೂ ಓದಿ- ಮರುಮೌಲ್ಯಮಾಪನದ ವೇಳೆ ‘ಒಂದು ಅಂಕ’ ಹೆಚ್ಚು ಬಂದರೂ ಪರಿಗಣನೆ: ಮಾರ್ಚ್ ನಲ್ಲಿಯೇ ಹೊಸ ನಿಯಮ ಅನ್ವಯ

ಹುಲಿ ಮತ್ತು ಆನೆ ಕಾರಿಡಾರ್ ಬಗ್ಗೆ ಕೇಂದ್ರ ಅಧ್ಯಯನ ಸಮಿತಿ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ ಅರಣ್ಯ ವ್ಯಾಪ್ತಿಯಲ್ಲಿ ಸುರಂಗ ಮಾರ್ಗ ನಿರ್ಮಾಣ, ರೈಲು ಮಾರ್ಗವು ಆದಷ್ಟು ಈಗಿರುವ ಹೆದ್ದಾರಿಗೆ ಹೊಂದಿಕೊಂಡಿರಬೇಕು. ಪ್ರಸ್ತಾಪಿತ 600 ಹೆಕ್ಟೇರ್ ಅರಣ್ಯದ ಬದಲಾಗಿ ಒಂದು ಸಾವಿರ ಹೆಕ್ಟೇರ್ ಅರಣ್ಯ ನಾಶವಾಗುತ್ತದೆ. ಒಟ್ಟಾರೆ ಈ ಯೋಜನೆಯಿಂದ ಅರಣ್ಯ ಸಮಗ್ರತೆ, ಜೀವವೈವಿಧ್ಯತೆ, ಪಶ್ಚಿಮ ಘಟ್ಟಗಳ ಪ್ರಾಣಿ ಮಾರ್ಗಗಳ ಮೇಲೆ ಅಗಾಧವಾದ ಪರಿಣಾಮಗಳು ಬೀರಲಿವೆ. 

ಇದನ್ನೂ ಓದಿ- ನನ್ನ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರ ಕೊಡುವ ಧಮ್ ತಾಕತ್ತು ತೋರಿಸುತ್ತಿಲ್ಲ: ಎಚ್‍ಡಿಕೆ

ಒಟ್ಟಿನಲ್ಲಿ ಈ ಬಗ್ಗೆ ಪರಿಹಾರಗಳ ಕುರಿತು ಯೋಜನೆ ಪಾಲುದಾರಿಕೆ ಸಂಸ್ಥೆಗಳ ಒಳಗೊಂಡು ಸಮಿತಿ ರಚಿಸಿ ತಜ್ಞರೊಂದಿಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಬೇಕು . ಈ ಸಮಿತಿಯು ವಿಸ್ಮತ ಪ್ರಸ್ತಾವನೆ ಸಲ್ಲಿಸುವಂತೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿಯು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಸೂಚಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News