ದೆಹಲಿಯಲ್ಲಿ ರೂ. 70/ಲೀಟರ್ ದಾಟಿದ ಪೆಟ್ರೋಲ್, ಡಿಸೇಲ್ ದರ ಕೂಡ ಏರಿಕೆ

ರಾಷ್ಟ್ರ ರಾಜಧಾನಿಯಲ್ಲಿ 38 ಪೈಸೆಯಷ್ಟು ಹೆಚ್ಚಳದೊಂದಿಗೆ ಪೆಟ್ರೋಲ್ ಲೀಟರ್ಗೆ 70.13 ರೂ. ಆಗಿದೆ.

Last Updated : Jan 14, 2019, 08:40 AM IST
ದೆಹಲಿಯಲ್ಲಿ ರೂ. 70/ಲೀಟರ್ ದಾಟಿದ ಪೆಟ್ರೋಲ್, ಡಿಸೇಲ್ ದರ ಕೂಡ ಏರಿಕೆ title=

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಏರಿಕೆ ಕಂಡಿದೆ. ತೈಲ ಬೆಲೆಗಳು ಐದನೇ ದಿನ ಹೆಚ್ಚಾಗಿದೆ. ಸೋಮವಾರ, ರಾಷ್ಟ್ರ ರಾಜಧಾನಿಯಲ್ಲಿ 38 ಪೈಸೆಯಷ್ಟು ಹೆಚ್ಚಳದೊಂದಿಗೆ ಪೆಟ್ರೋಲ್ ಲೀಟರ್ಗೆ 70.13 ರೂ. ಆಗಿದೆ. ಡೀಸೆಲ್ ಬೆಲೆ 49 ಪೈಸೆ ಏರಿಕೆಯಾಗಿದೆ. ಇದರಿಂದಾಗಿ, ದೆಹಲಿಯಲ್ಲಿ ಡೀಸೆಲ್ ದರ ಸೋಮವಾರ ಲೀಟರ್ಗೆ 64.18 ರೂ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಕಂಡು ಬಂದಿದ್ದು, ಇಂದೂ ಕೂಡ ಪೆಟ್ರೋಲ್-ಡೀಸೆಲ್ ದರ ಏರಿಕೆ ಕಂಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 70.13 64.18
ಕೋಲ್ಕತ್ತಾ 72.24 65.95
ಮುಂಬೈ 75.77 67.18
ಚೆನ್ನೈ 72.79 67.78
ಬೆಂಗಳೂರು 72.44 66.29
ಹೈದರಾಬಾದ್ 74.40 69.77
ತಿರುವನಂತಪುರಂ 73.55 69.21

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
https://www.goodreturns.in/diesel-price.html
 

Trending News