ಪೋಸ್ಟ್ ಆಫೀಸ್ ಈ ಸ್ಚೀಮ್ ನಿಂದ ಲಾಭವೂ ಹೆಚ್ಚು! ತೆರಿಗೆ ವಿನಾಯಿತಿಯೂ ಇದೆ

Post Office Scheme: ಮಧ್ಯಮ ಆದಾಯದ ಲಕ್ಷಾಂತರ ಮಂದಿ ಪೋಸ್ಟ್ ಆಫೀಸ್  ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂಚೆ ಕಛೇರಿ ಉಳಿತಾಯ ಯೋಜನೆಗಳ ದೊಡ್ಡ ಪ್ರಯೋಜನವೆಂದರೆ ಇದು ಸರ್ಕಾರದ ಬೆಂಬಲಿತವಾಗಿವೆ.

Written by - Ranjitha R K | Last Updated : Mar 31, 2023, 12:05 PM IST
  • ಪೋಸ್ಟ್ ಆಫೀಸ್ ನಲ್ಲಿ ಮಾಡುವ ಹೂಡಿಕೆ ಅಪಾಯ-ಮುಕ್ತ
  • ಯಾವುದೇ ಆತಂಕವಿಲ್ಲದೆ ಇಲ್ಲಿ ಹೂಡಿಕೆ ಮಾಡಬಹುದಾಗಿದೆ.
  • ಇಲ್ಲಿ ಮಾಡುವ ಹೂಡಿಕೆ ಮೇಲೆ ಖಾತರಿ ಆದಾಯ ಸಿಗುತ್ತದೆ
ಪೋಸ್ಟ್ ಆಫೀಸ್  ಈ ಸ್ಚೀಮ್ ನಿಂದ ಲಾಭವೂ ಹೆಚ್ಚು! ತೆರಿಗೆ ವಿನಾಯಿತಿಯೂ ಇದೆ  title=

Post Office Scheme : ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವುದನ್ನು ನೀವು ಕೇಳಿರಬಹುದು. ಈ ಯೋಜನೆಗಳ ಮೂಲಕ  ದೀರ್ಘಾವಧಿಯ ಉಳಿತಾಯ ಮಾಡುವುದು ಸಾಧ್ಯವಾಗುತ್ತದೆ.  ಅಲ್ಲದೆ ಇಲ್ಲಿ ಮಾಡುವ ಹೂಡಿಕೆ  ಅಪಾಯ-ಮುಕ್ತವಾಗಿರುತ್ತದೆ. ಯಾವುದೇ ಆತಂಕವಿಲ್ಲದೆ ಇಲ್ಲಿ ಹೂಡಿಕೆ ಮಾಡಬಹುದಾಗಿದೆ.  ಈ  ಕಾರಣಗಳಿಂದಾಗಿ  ಮಧ್ಯಮ ಆದಾಯದ ಲಕ್ಷಾಂತರ ಮಂದಿ ಪೋಸ್ಟ್ ಆಫೀಸ್  ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುತ್ತಾರೆ. ಅಂಚೆ ಕಛೇರಿ ಉಳಿತಾಯ ಯೋಜನೆಗಳ ದೊಡ್ಡ ಪ್ರಯೋಜನವೆಂದರೆ ಇದು ಸರ್ಕಾರದ ಬೆಂಬಲಿತವಾಗಿವೆ. ಹೀಗಾಗಿ ಈ ಯೋಜನೆಯಲ್ಲಿ  ಮಾಡುವ  ಹೂಡಿಕೆ ಮೇಲೆ ಖಾತರಿ ಆದಾಯ ಸಿಗುತ್ತದೆ. ಇದಲ್ಲದೆ, ಈ ಯೋಜನೆಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡುತ್ತದೆ. 

ಸುಕನ್ಯಾ ಸಮೃದ್ಧಿ ಯೋಜನೆ : 
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯುವ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆಯ ಲಾಭವನ್ನು ಪಡೆಯಬಹುದು. ಹೆಣ್ಣು ಮಗುವಿಗೆ 18 ವರ್ಷ ವಯಸ್ಸಾದಾಗ ಖಾತೆಯ ಮಾಲೀಕತ್ವವನ್ನು ತೆಗೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಮಾಡುವ ಹೂಡಿಕೆ ಮೇಲೆ ಪ್ರಸ್ತುತ  7.6 ಶೇಕಡಾ ಬದಿ ದರ ನೀಡಲಾಗುತ್ತದೆ. ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ ವರೆಗೆ ಆರಂಭಿಕ ಠೇವಣಿ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಒದಗಿಸುತ್ತದೆ.

ಇದನ್ನೂ ಓದಿ : ಕೇವಲ 24 ಗಂಟೆಗಳಲ್ಲಿ PPF-SSY ಹೊಂದಿದವರಿಗೆ ಸಿಗಲಿದೆ ಒಂದು ಭಾರಿ ಸಂತಸದ ಸುದ್ದಿ!

ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS) :
60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ, ಹಿರಿಯ ನಾಗರಿಕ ಉಳಿತಾಯ ಯೋಜನೆ ಖಾತೆಯನ್ನು ತೆರೆಯಬಹುದು. SCSS ಐದು ವರ್ಷಗಳ ಮೆಚುರಿಟಿ ಅವಧಿಯನ್ನು ಹೊಂದಿದ್ದು, ವಾರ್ಷಿಕ 8 ಶೇಕಡಾ ಬಡ್ಡಿದರವನ್ನು ನೀಡುತ್ತದೆ.  ಐದು ವರ್ಷಗಳ ನಂತರ ಇದನ್ನು  ಮತ್ತೆ ನವೀಕರಿಸಬಹುದಾಗಿದೆ. 

ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ ಅಕೌಂಟ್ :
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಅನ್ನು ಇಂಡಿಯಾ ಪೋಸ್ಟ್ ಮೂಲಕ ನೀಡಲಾಗುತ್ತದೆ. ಇದು ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಅನ್ನು ಹೋಲುತ್ತದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಬಡ್ಡಿದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಈ ಯೋಜನೆಯ ಪ್ಲಸ್ ಪಾಯಿಂಟ್ ಎಂದರೆ ಕನಿಷ್ಠ ಹೂಡಿಕೆ  1,000 ರೂ. ಆಗಿದ್ದರೆ, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. 5 ವರ್ಷಗಳ ನಿಶ್ಚಿತ ಠೇವಣಿಗೆ ಪ್ರಸ್ತುತ ನೀಡಲಾಗುವ ಬಡ್ಡಿ ದರವು ಶೇಕಡಾ 7 ಆಗಿದೆ.

ಇದನ್ನೂ ಓದಿ : ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಎಕರೆಗೆ ಐದು ಸಾವಿರ ರೂ ! ಕಟಾವಿಗೆ ಮುನ್ನ ಬಿಡುಗಡೆಯಾಗುವುದು ಹಣ

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) :
NSC ಯೋಜನೆಯಲ್ಲಿ ಕನಿಷ್ಠ 1,000 ರೂ. ಮತ್ತು 100 ರೂಪಾಯಿ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಹೂಡಿಕೆ ಮೇಲೆ ಯಾವುದೇ ಮಿತಿ ಇಲ್ಲ. NSC ಯೋಜನೆಯ ಮುಕ್ತಾಯ ಅವಧಿಯು ಐದು ವರ್ಷಗಳು. ಹೂಡಿಕೆ ಮೇಲೆ ಸಿಗುವ ಬಡ್ಡಿ ದರವು 7 ಪ್ರತಿಶತ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News