IPL 2023: ಗೆದ್ದರೂ ಇಲ್ಲ ನೆಮ್ಮದಿ! ಕೆಎಲ್ ರಾಹುಲ್ ಮಾಡಿದ ಆ ತಪ್ಪಿಗಾಗಿ ಬರೋಬ್ಬರಿ 12 ಲಕ್ಷ ದಂಡ ವಿಧಿಸಿದ ಬಿಸಿಸಿಐ

BCCI: ಕೆಎಲ್ ರಾಹುಲ್ ನಾಯಕತ್ವದಲ್ಲಿ, ಲಕ್ನೋ ಸೂಪರ್‌ ಜೈಂಟ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ರನ್‌’ಗಳಿಂದ ಸೋಲಿಸಿರಬಹುದು, ಆದರೆ ಬಿಸಿಸಿಐ ತಂಡದ ನಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿದೆ, ನಿಧಾನಗತಿಯ ಓವರ್ ರೇಟ್‌ಗಾಗಿ ರಾಹುಲ್‌’ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

Written by - Bhavishya Shetty | Last Updated : Apr 20, 2023, 05:15 PM IST
    • ಲಕ್ನೋ ಸೂಪರ್‌ ಜೈಂಟ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ರನ್‌’ಗಳಿಂದ ಸೋಲಿಸಿರಬಹುದು,
    • ಆದರೆ ಬಿಸಿಸಿಐ ತಂಡದ ನಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿದೆ,
    • ನಿಧಾನಗತಿಯ ಓವರ್ ರೇಟ್‌ಗಾಗಿ ರಾಹುಲ್‌’ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
IPL 2023: ಗೆದ್ದರೂ ಇಲ್ಲ ನೆಮ್ಮದಿ! ಕೆಎಲ್ ರಾಹುಲ್ ಮಾಡಿದ ಆ ತಪ್ಪಿಗಾಗಿ ಬರೋಬ್ಬರಿ 12 ಲಕ್ಷ ದಂಡ ವಿಧಿಸಿದ ಬಿಸಿಸಿಐ title=
KL Rahul

BCCI: ಬ್ಯಾಟ್ಸ್‌’ಮನ್ ಕೆಎಲ್ ರಾಹುಲ್ ಪ್ರಸ್ತುತ ಐಪಿಎಲ್ 16 ನೇ ಸೀಸನ್’ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ತಂಡದ ನಾಯಕತ್ವವನ್ನು ವಹಿಸಿದ್ದಾರೆ. ಬುಧವಾರ ರಾತ್ರಿ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಅವರ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ರನ್’ಗಳ ಗೆಲುವು ಕಂಡಿತ್ತು. ಆದರೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮಾಡಿದ ತಪ್ಪೊಂದಕ್ಕೆ ಬಿಸಿಸಿಐ ಇದೀಗ ಕಠಿಣ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ

ಬಿಸಿಸಿಐ ಈ ಕ್ರಮ: 

ಕೆಎಲ್ ರಾಹುಲ್ ನಾಯಕತ್ವದಲ್ಲಿ, ಲಕ್ನೋ ಸೂಪರ್‌ ಜೈಂಟ್ಸ್ ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ರನ್‌’ಗಳಿಂದ ಸೋಲಿಸಿರಬಹುದು, ಆದರೆ ಬಿಸಿಸಿಐ ತಂಡದ ನಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿದೆ, ನಿಧಾನಗತಿಯ ಓವರ್ ರೇಟ್‌ಗಾಗಿ ರಾಹುಲ್‌’ಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಲಕ್ನೋ ತಂಡವು ನಿಧಾನಗತಿಯ ಓವರ್ ರೇಟ್‌ ಹೊಂದಿದೆ ಎಂದು ಕಂಡುಬಂದಿದೆ.

ಲಕ್ನೋ ಸೂಪರ್‌ ಜೈಂಟ್ಸ್, ಇಂಡಿಯನ್ ಪ್ರೀಮಿಯರ್ ಲೀಗ್‌’ನ (ಐಪಿಎಲ್-2023) 16ನೇ ಸೀಸನ್’ನಲ್ಲಿ ನಾಲ್ಕನೇ ಗೆಲುವು ದಾಖಲಿಸಿದೆ. ಬುಧವಾರ ರಾತ್ರಿ ನಡೆದ 26ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ರನ್ ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಸ್ವಲ್ಪ ಸಮಯ ರಾಜಸ್ಥಾನ ತಂಡ ಮೇಲುಗೈ ಸಾಧಿಸಿದಂತೆ ಕಂಡರೂ ಕೊನೆಯ ಓವರ್ ಗಳಲ್ಲಿ ಆಟ ತಿರುವು ಪಡೆಯಿತು. ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ಲಕ್ನೋ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 154 ರನ್ ಗಳಿಸಿತು. ಇದಾದ ಬಳಿಕ ರಾಜಸ್ಥಾನ ತಂಡ 6 ವಿಕೆಟ್ ಕಳೆದುಕೊಂಡು 144 ರನ್ ಗಳಿಸಲಷ್ಟೇ ಶಕ್ತವಾಯಿತು.

ಇದನ್ನೂ ಓದಿ: Fish: ಈ ಮೀನಿನ ಬೆಲೆ ಬರೋಬ್ಬರಿ 25 ಲಕ್ಷದಿಂದ 1 ಕೋಟಿ ರೂ.! ತಿನ್ನೋಕೆ ಆಗದ ಈ ದುಬಾರಿ ಫಿಶ್ ಮತ್ತೇನಕ್ಕೆ ಪ್ರಯೋಜನ?

ಲಕ್ನೋ ತಂಡದ ಪರ ಆರಂಭಿಕರಾದ ಕೈಲ್ ಮೇಯರ್ಸ್ 42 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 51 ರನ್ ಗಳಿಸಿದರು. ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಕೊಡುಗೆ ನೀಡಿದ ಮಾರ್ಕಸ್ ಸ್ಟೊಯಿನಿಸ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅವರು 16 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 21 ರನ್ ಗಳಿಸಿದದರೆ, ನಂತರ 4 ಓವರ್‌ಗಳಲ್ಲಿ 28 ರನ್‌ ನೀಡಿ 2 ವಿಕೆಟ್‌ ಕಬಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News