Viral Video: ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟ ‘ಕಾಡಿನ ರಾಜ’!

Lion enters hotel in Gujarat: ಏಕಾಏಕಿ ಸಿಂಹವೊಂದು ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ಹೋಟೆಲ್‍ನೊಳಗೆ ಸಿಂಹ ಬಂದು ಓಡಾಡಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Written by - Puttaraj K Alur | Last Updated : Apr 22, 2023, 03:21 PM IST
  • ಇದ್ದಕ್ಕಿದ್ದಂತೆಯೇ ಹೋಟೆಲ್‍ಗೆ ಎಂಟ್ರಿ ಕೊಟ್ಟ ಕಾಡಿನ ರಾಜ
  • ಗುಜರಾತ್‍ನ ಜುನಾಗಢದ ಐಷಾರಾಮಿ ಹೋಟೆಲ್‍ಗೆ ಬಂದ ಸಿಂಹ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ವಿಡಿಯೋ
Viral Video: ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟ ‘ಕಾಡಿನ ರಾಜ’! title=
ಹೋಟೆಲ್‍ಗೆ ಎಂಟ್ರಿ ಕೊಟ್ಟ ಕಾಡಿನ ರಾಜ!

ನವದೆಹಲಿ: ಗುಜರಾತ್‍ನ ಜುನಾಗಢದ ಐಷಾರಾಮಿ ಹೋಟೆಲ್‍ಗೆ ಅಪರೂಪದ ಅತಿಥಿಯೊಬ್ಬರು ಆಗಮಿಸಿದ್ದರು. ಈ ಅತಿಥಿಯ ಎಂಟ್ರಿಯಿಂದ ಹೋಟೆಲ್‍ ಸಿಬ್ಬಂದಿಯೇ ಬೆಚ್ಚಿಬಿದ್ದಿದ್ದಾರೆ. ಈ ಅಪರೂಪದ ಅತಿಥಿ ಯಾರು ಅಂತೀರಾ? ಅವರೇ ಕಾಡಿನ ರಾಜ ಸಿಂಹ..! ಹೌದು, ಏಕಾಏಕಿ ಸಿಂಹವೊಂದು ಐಶಾರಾಮಿ ಹೋಟೆಲ್‍ಗೆ ಎಂಟ್ರಿ ಕೊಟ್ಟಿರುವ ಘಟನೆ ಗುಜರಾತ್ನ ಜುನಾಗಢದಲ್ಲಿ ನಡೆದಿದೆ. ಹೋಟೆಲ್‍ನೊಳಗೆ ಸಿಂಹ ಬಂದು ಓಡಾಡಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಉದಯನ್ ಕಚ್ಚಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜುನಾಗಢದ ಜನನಿಬಿಡ ಪ್ರದೇಶದಲ್ಲಿರುವ ಸರೋವರ್ ಪೋರ್ಟಿಕೊ ಹೋಟೆಲ್‍ಗೆ ಸಿಂಹ ಬಂದಿದೆ. ‘ಇತ್ತೀಚಿನ ದಿನಗಳಲ್ಲಿ ಜುನಾಗಢಕ್ಕೆ ಸಿಂಹಗಳ ಭೇಟಿ ಸಾಮಾನ್ಯವಾಗಿದೆ’ ಎಂದು ಉದಯನ್ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Viral Video: ದೆಹಲಿ ಮೆಟ್ರೋದಲ್ಲಿ ಇದೊಂದು ಬಾಕಿಯಿತ್ತು... ಅದನ್ನೂ ಈತ ಮಾಡೇ ಬಿಟ್ಟ!!

ಪಾರ್ಕಿಂಗ್ ಸ್ಥಳದ ಸುತ್ತಲೂ ಓಡಾಡಿರುವ ಸಿಂಹ ಹೋಟೆಲ್‍ನ ಆವರಣದ ತುಂಬೆಲ್ಲಾ ಅಡ್ಡಾಡಿದೆ. ಸ್ವಲ್ಪ ಸಮಯದ ನಂತರ ಗೋಡೆ ಮೇಲೆ ಹಾರಿ ಹೊರಹೋಗಿದೆ. ಸಿಂಹ ಹೊರಗೆ ಹಾರಿಹೋಗುತ್ತಿದ್ದಾಗ ಹೋಟೆಲ್ ಭದ್ರತಾ ಸಿಬ್ಬಂದಿ ಭಯಭೀತರಾಗಿ ಕ್ಯಾಬಿನ್‍ ಒಳಗಡಯೇ ಕುಳಿತುಕೊಂಡಿದ್ದರು.  

ಬೆಳಗಿನ ವೇಳೆ ಸಿಂಹ ಹೋಟೆಲ್‍ಗೆ ಎಂಟ್ರಿ ಕೊಟ್ಟಿದೆ. ಈ ವೇಳೆ ಜನರು ಯಾರೂ ಇಲ್ಲದ ಕಾರಣ ಯಾವುದೇ ರೀತಿ ಸಮಸ್ಯೆಯಾಗಿಲ್ಲ. ಸದ್ಯಕ್ಕೆ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಜುನಾಗಢ ನಗರ ಗಿರ್ನಾರ್ ಬೆಟ್ಟಗಳ ಬುಡದಲ್ಲಿದ್ದು, ಇಲ್ಲಿ ಗಿರ್ ಸಿಂಹದ ಅಭಯಾರಣ್ಯವಿದೆ. ಇದು ವಿಶ್ವದ ಏಷ್ಯಾಟಿಕ್ ಸಿಂಹಗಳ ಕೊನೆಯ ವಾಸಸ್ಥಾನ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಸಿಂಹದ ವಿಡಿಯೋ ನೋಡಿದ ಅನೇಕ ನೆಟಿಜನ್‍ಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.  

ಇದನ್ನೂ ಓದಿ: ಚದುರಿಹೋಗಲಿದೆಯೇ ಮಹಾ ವಿಕಾಸ್ ಆಘಾಡಿ? ಭಾರಿ ಕುತೂಹಲಕ್ಕೆ ಕಾರಣವಾದ ಅಜೀತ್ ಪವಾರ್ ಹೇಳಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News