RRR ಸರ್‌ ಸ್ಕಾಟ್‌ ಖ್ಯಾತಿಯ ನಟ 'ರೇ ಸ್ಟೀವನ್ಸನ್‌' ನಿಧನ..!

Ray Stevenson passed away : ರಾಜಮೌಳಿ ನಿರ್ದೇಶನಕ RRR ಸಿನಿಮಾದಲ್ಲಿ ಬ್ರೀಟಿಷ್‌ ಅಧಿಕಾರಿ ಸರ್‌ ಸ್ಕಾಟ್‌ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ನಟಿಸಿದ್ದ ಖ್ಯಾತ ನಟ ರೇ ಸ್ಟೀವನ್ಸನ್‌ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

Written by - Krishna N K | Last Updated : May 23, 2023, 10:09 AM IST
  • RRR ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ರೇ ಸ್ಟೀವನ್ಸನ್ (58) ನಿಧನ.
  • RRR ಸಿನಿಮಾದಲ್ಲಿ ಬ್ರೀಟಿಷ್‌ ಅಧಿಕಾರಿ ಸರ್‌ ಸ್ಕಾಟ್‌ ಪಾತ್ರ ನಿರ್ವಹಿಸಿದ್ದ ನಟ.
  • ಟ್ಟೀಟ್‌ ಮೂಲಕ ಸಂತಾಪ ಸೂಚಿಸಿದ ನಿರ್ದೇಶಕ ರಾಜಮೌಳಿ ಮತ್ತು RRR ಚಿತ್ರತಂಡ.
RRR ಸರ್‌ ಸ್ಕಾಟ್‌ ಖ್ಯಾತಿಯ ನಟ 'ರೇ ಸ್ಟೀವನ್ಸನ್‌' ನಿಧನ..! title=

Ray Stevenson : ವಿಶ್ವ ಬ್ಲಾಕ್ಬಸ್ಟರ್ ಹಿಟ್ ಚಲನಚಿತ್ರ RRR ನಲ್ಲಿ ಖಳನಾಯಕನ ಪಾತ್ರ ನಿರ್ವಹಿಸಿದ್ದ ರೇ ಸ್ಟೀವನ್ಸನ್ (58) ನಿಧನರಾಗಿದ್ದಾರೆ. ಅವರ ಸಾವಿಗೆ ಅನಾರೋಗ್ಯವೇ ಕಾರಣ ಎಂದು ಇಟಾಲಿಯನ್ ಸುದ್ದಿ ಪತ್ರಿಕೆ ರಿಪಬ್ಲಿಕಾ ಬಹಿರಂಗಪಡಿಸಿದೆ. ಇಟಲಿಯ ಇಶಿಯಾ ಪೆನಿನ್ಸುಲಾದಲ್ಲಿ 'ಕ್ಯಾಸಿನೊ' ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಸ್ವಸ್ಥರಾದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಅದ್ರೆ, ಚಿಕಿತ್ಸೆ ಫಲಕಾರಿಯಾಗದೆ ಮೇ 21 ರಂದು ಅವರು ನಿಧನರಾಗಿದ್ದು, ವಿಚಾರ ಈಗ ಬೆಳಕಿಗೆ ಬಂದಿದೆ.

ಈ ಕುರಿತು RRR ತಂಡ ಕೂಡ ಸಂತಾಪ ಸೂಚಿಸಿದೆ. 'ನೀವು ಇನ್ನಿಲ್ಲ ಎಂದು ನಮಗೆ ಆಘಾತವಾಗಿದೆ. ನೀವು ಯಾವಾಗಲೂ ನಮ್ಮ ಹೃದಯದಲ್ಲಿ ನೆಲೆಸಿರುತ್ತೀರಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ.. ಸರ್ ಸ್ಕಾಟ್..'' ಎಂದು RRR ತಂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದೆ. ಅಲ್ಲದೆ, 'ನಾವು ಈ ನಿರ್ಣಾಯಕ ದೃಶ್ಯವನ್ನು ಚಿತ್ರೀಕರಿಸುವಾಗ ಅವರಿಗೆ 56 ವರ್ಷ. ಆದರೆ ಈ ಸಾಹಸ ಮಾಡಲು ಹಿಂಜರಿಯಲಿಲ್ಲ. ರೇ ಸ್ಟೀವನ್ಸನ್ ನಮ್ಮ ಸಿನಿಮಾದ ಭಾಗವಾಗಿದ್ದನ್ನು ನಾವು ಯಾವಾಗಲೂ ಗೌರವಿಸುತ್ತೇವೆ....' ಎಂದು ಆರ್‌ಆರ್‌ಆರ್ ಸಿನಿಮಾದ ದೃಶ್ಯವೊಂದರ ಚಿತ್ರವನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ `ಪಿಂಕಿ ಎಲ್ಲಿ' ಜೂನ್ 2ರಂದು ತೆರೆಗೆ

ಅಲ್ಲದೆ, ನಿರ್ದೇಶಕ ರಾಜಮೌಳಿ ಸಹ ಟ್ವೀಟ್ ಸಂತಾಪ ಸೂಚಿಸಿದ್ದು, 'ಶಾಕಿಂಗ್.. ಈ ಸುದ್ದಿಯನ್ನು ನಂಬಲಾಗುತ್ತಿಲ್ಲ. ರೇ ಸಾಕಷ್ಟು ಶಕ್ತಿ ಮತ್ತು ಚೈತನ್ಯವನ್ನು ಸೆಟ್‌ಗೆ ತಂದವರು. ಅವರ ಜೊತೆ ಕೆಲಸ ಮಾಡಿದ್ದು ಖುಷಿ ತಂದಿದೆ. ಇಂತಹ ಸಮಯದಲ್ಲಿ ಅವರ ಕುಟುಂಬದ ಸದಸ್ಯರು ಧೈರ್ಯದಿಂದ ಇರಬೇಕು. ಅವರ ಆತ್ಮಕ್ಕೆ ಶಾಂತಿ ಸಿಗಲಿʼ ಎಂದು ರಾಜಮೌಳಿ ಬರೆದುಕೊಂಡಿದ್ದಾರೆ.  

ರೇ ಸ್ಟೀವನ್ಸನ್ 25 ಮೇ 1964 ರಂದು ಲಿಸ್ಬರ್ನ್ನಲ್ಲಿ ಜನಿಸಿದರು. 8 ನೇ ವಯಸ್ಸಿನಲ್ಲಿ ಇಂಗ್ಲೆಂಡ್ಗೆ ತೆರಳಿ ಬ್ರಿಸ್ಟಲ್ ಓಲ್ಡ್ ವಿಕ್ ಥಿಯೇಟರ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. 29ನೇ ವಯಸ್ಸಿನಲ್ಲಿ ಪದವಿ ಪಡೆದರು. 1990 ರ ದಶಕದಲ್ಲಿ ಟಿವಿ ಕಾರ್ಯಕ್ರಮಗಳೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿದರು. 1998ರಲ್ಲಿ ಅವರ ನಟನೆಯ 'ದಿ ಥಿಯರಿ ಆಫ್ ಫ್ಲೈಟ್' ಸೂಪರ್ ಡೂಪರ್ ಹಿಟ್ ಆಯಿತು.

ಇದನ್ನೂ ಓದಿ: Rosie Moore : ಪ್ರಪಂಚದ ʼಹಾಟ್‌ ಸೈನ್ಸಿಸ್ಟ್‌ʼ ರೋಸಿ ಮೂರ್‌..! ಕಾಡು ಪ್ರಾಣಿಗಳೇ ಈಕೆಯ ಫೇವರಿಟ್

2000 ರಿಂದ, ಅವರು ಹಾಲಿವುಡ್ ಚಲನಚಿತ್ರಗಳಲ್ಲಿ ಅವಕಾಶಗಳನ್ನು ಪಡೆದರು. ಆಂಟೊಯಿನ್ ಫುಕ್ವಾ ಅವರ 2004 ರ ಸಾಹಸ ಚಿತ್ರ 'ಕಿಂಗ್ ಆರ್ಥರ್' ಅವರ ಮೊದಲ ಪ್ರಮುಖ ಚಲನಚಿತ್ರವಾಗಿದೆ. RRR ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಜನರಲ್ ಸ್ಟೀವ್ ಬಕ್ಸ್‌ಟನ್ ಪಾತ್ರವು ಪ್ರೇಕ್ಷಕರನ್ನು ಮೆಚ್ಚಿಸಿತು. ವಿಲನ್ ಆಗಿ ಅವರ ನಟನೆಯನ್ನು ಪ್ರೇಕ್ಷಕರು ಅಷ್ಟು ಸುಲಭವಾಗಿ ಮರೆಯುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News