WTC ಫೈನಲ್’ನಲ್ಲಿ ನಿರ್ಧಾರವಾಗುತ್ತೆ ಈ ಆಟಗಾರನ ಭವಿಷ್ಯ! ವಿಫಲವಾದರೆ ವೃತ್ತಿಜೀವನ ಅಂತ್ಯವಾಗೋದು ಪಕ್ಕಾ!

WTC Final 2023: ಶ್ರೇಯಸ್ ಅಯ್ಯರ್ ಗಾಯದ ಕಾರಣ ಆಯ್ಕೆದಾರರು ಹಠಾತ್ತನೆ ಅಜಿಂಕ್ಯ ರಹಾನೆ ಅವರನ್ನು 16 ತಿಂಗಳ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಅಂತಿಮ ಪಂದ್ಯಕ್ಕಾಗಿ ಟೀಮ್ ಇಂಡಿಯಾಕ್ಕೆ ಮರಳುವಂತೆ ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತನ್ನನ್ನು ತಾನು ಸಾಬೀತುಪಡಿಸಬೇಕಾಗಿದೆ.

Written by - Bhavishya Shetty | Last Updated : Jun 2, 2023, 09:29 AM IST
    • ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ
    • ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರನ ಭವಿಷ್ಯ ಅತಂತ್ರವಾಗಿದೆ
    • ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತನ್ನನ್ನು ತಾನು ಸಾಬೀತುಪಡಿಸಬೇಕಾಗಿದೆ
WTC ಫೈನಲ್’ನಲ್ಲಿ ನಿರ್ಧಾರವಾಗುತ್ತೆ ಈ ಆಟಗಾರನ ಭವಿಷ್ಯ! ವಿಫಲವಾದರೆ ವೃತ್ತಿಜೀವನ ಅಂತ್ಯವಾಗೋದು ಪಕ್ಕಾ! title=
Ajinkya Rahane

WTC Final 2023: ಟೀಂ ಇಂಡಿಯಾ ಜೂನ್ 7 ರಿಂದ ಆಸ್ಟ್ರೇಲಿಯಾ ವಿರುದ್ಧ ICC ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯವನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಂಗ್ಲೆಂಡ್‌ ನ ಲಂಡನ್ ನಗರದ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರನ ಭವಿಷ್ಯ ಅತಂತ್ರವಾಗಿದೆ. ಈ ಶ್ರೇಷ್ಠ ಪಂದ್ಯದಲ್ಲಿ ಆಟಗಾರ ಸೋಲು ಕಂಡರೆ, ಆತನ ಟೆಸ್ಟ್ ವೃತ್ತಿಜೀವನ ಕೊನೆಗೊಳ್ಳಬಹುದು.

ಇದನ್ನೂ ಓದಿ: ಡಾ.ವಿಷ್ಣುವರ್ಧನ್ ಹೆಸರಿನಲ್ಲಿ ಮತ್ತೊಂದು ಏಷ್ಯಾ ಬುಕ್ - ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್!

ಶ್ರೇಯಸ್ ಅಯ್ಯರ್ ಗಾಯದ ಕಾರಣ ಆಯ್ಕೆದಾರರು ಹಠಾತ್ತನೆ ಅಜಿಂಕ್ಯ ರಹಾನೆ ಅವರನ್ನು 16 ತಿಂಗಳ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ (ಡಬ್ಲ್ಯುಟಿಸಿ ಫೈನಲ್) ಅಂತಿಮ ಪಂದ್ಯಕ್ಕಾಗಿ ಟೀಮ್ ಇಂಡಿಯಾಕ್ಕೆ ಮರಳುವಂತೆ ಮಾಡಿದ್ದಾರೆ. ಆದರೆ ಈ ಪಂದ್ಯದಲ್ಲಿ ಅಜಿಂಕ್ಯ ರಹಾನೆ ತನ್ನನ್ನು ತಾನು ಸಾಬೀತುಪಡಿಸಬೇಕಾಗಿದೆ. ಇಲ್ಲದಿದ್ದರೆ ಅವರ ಟೆಸ್ಟ್ ವೃತ್ತಿಜೀವನ ಕೊನೆಗೊಳ್ಳಬಹುದು. ಅಜಿಂಕ್ಯ ರಹಾನೆ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಜನವರಿ 2022 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಆದರೆ ನಂತರ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಯಿತು. ಅಜಿಂಕ್ಯ ರಹಾನೆ ಇತ್ತೀಚೆಗೆ ಐಪಿಎಲ್ 2023 ರಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್‌ ನಿಂದ ಆಯ್ಕೆದಾರರ ನಿದ್ದೆ ಕೆಡಿಸಿದ್ದರು. ಅಜಿಂಕ್ಯ ರಹಾನೆ ಐಪಿಎಲ್ 2023 ರಲ್ಲಿ 200 ಸ್ಟ್ರೈಕ್ ರೇಟ್‌ ನಲ್ಲಿ ರನ್ ಗಳಿಸಿದ್ದಾರೆ.

ಅಜಿಂಕ್ಯ ರಹಾನೆ 16 ತಿಂಗಳ ನಂತರ ಭಾರತ ತಂಡಕ್ಕೆ ಮರಳುತ್ತಿದ್ದಾರೆ. ಐಪಿಎಲ್ 2023 ರಲ್ಲಿ ಸಿ ಎಸ್‌ ಕೆ ಪರ ಅಜಿಂಕ್ಯ ರಹಾನೆ ಅವರ ಫಾರ್ಮ್ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಇದು ಅವರ ಮರಳುವಿಕೆಯ ಹಿಂದಿನ ದೊಡ್ಡ ಕಾರಣ ಎಂದು ಹೇಳಲಾಗುತ್ತಿದೆ.

ಸ್ಪಿನ್ ಬೌಲಿಂಗ್ ಆಲ್ ರೌಂಡರ್ ಗಳಾದ ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಮೂವರೂ ಒಟ್ಟಿಗೆ ಆಡುವ ಸಾಧ್ಯತೆ ಕಡಿಮೆ. ಪರಿಸ್ಥಿತಿಗಳು ವೇಗಿಗಳಿಗೆ ಅನುಕೂಲಕರವಾಗಿದ್ದರೆ, ಶಾರ್ದೂಲ್ ಠಾಕೂರ್ ಅವರನ್ನು ನಾಲ್ಕನೇ ವೇಗಿಯಾಗಿ ಆಯ್ಕೆ ಮಾಡಬಹುದು, ಅಂದರೆ ಅಶ್ವಿನ್, ಜಡೇಜಾ ಅಥವಾ ಅಕ್ಷರ್ ಪಟೇಲ್ ಅವರಲ್ಲಿ ಒಬ್ಬರು ಮಾತ್ರ ಸ್ಪಿನ್ನರ್ ಆಗಿ ಆಡಬಹುದು.

ಅಜಿಂಕ್ಯ ರಹಾನೆ 27 ಡಿಸೆಂಬರ್ 2020 ರಂದು ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊನೆಯ ಟೆಸ್ಟ್ ಶತಕವನ್ನು ಗಳಿಸಿದ್ದರು. ಈ ಇನ್ನಿಂಗ್ಸ್‌ ಬಳಿಕ ಒಂದೇ ಒಂದು ಶತಕವನ್ನು ಗಳಿಸಿಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: NRI News: ರೂ. 2000 ನೋಟು ಬ್ಯಾನ್ ಬೆನ್ನಲ್ಲೇ ಅನಿವಾಸಿ ಭಾರತೀಯರಿಗೆ ಎದುರಾಗಿದೆ ಈ ಸಮಸ್ಯೆ!

ಅಜಿಂಕ್ಯ ರಹಾನೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇದುವರೆಗೆ 12 ಶತಕ ಮತ್ತು 25 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆಡಿರುವ 82 ಟೆಸ್ಟ್‌ ಗಳಲ್ಲಿ 38.52 ಸರಾಸರಿಯಲ್ಲಿ 4931 ರನ್ ಗಳಿಸಿದ್ದಾರೆ, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 188 ಆಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಫೈನಲ್‌ ನಲ್ಲಿ, ಈಗ ಅಜಿಂಕ್ಯ ರಹಾನೆ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಉಳಿಸುವ ಜವಾಬ್ದಾರಿಯೂ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News