150ನೇ ಶೋ ರೂಂ, ಸಾಂಸ್ಕೃತಿಕ ಪಾರಂಪರಿಕ ಬ್ರ್ಯಾಂಡ್‌ನ ಪಯಣದಲ್ಲಿ ಐತಿಹಾಸಿಕ ಕ್ಷಣ

Ramraj Cotton: ರಾಮರಾಜ್ ಕಾಟನ್, ಅತ್ಯಂತ ಜನಪ್ರಿಯ ಬ್ಯಾಂಡ್‌ ಆಗಿ ಹೊರಹೊಮ್ಮಿದೆ. ಸದಾ ಮುಂಚೂಣಿಯಲ್ಲಿರುವ ವಿಜಯಶಾಲಿ ಉದ್ಯಮ ಮತ್ತು 40 ವರ್ಷಗಳಿಂದ ಸಾಟಿಯಿಲ್ಲದ ಬ್ಯಾಂಡ್ ಆಗಿ ಎಲ್ಲರ ಮನಗೆದ್ದಿದೆ. ದೇಸಿ ಸಂಸ್ಕೃತಿ, ಅತ್ಯುತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹದ ಮೂಲಕ ರಾಮರಾಜ್, ಕಾಟನ್, ದಕ್ಷಿಣ ಭಾರತದಾದ್ಯಂತ ಮನೆಮಾತಾಗಿರುವ ಬ್ರ್ಯಾಂಡ್ ಎನಿಸಿದೆ. 

Written by - Zee Kannada News Desk | Last Updated : Jun 12, 2023, 02:54 PM IST
  • ರಾಮರಾಜ್ ಕಾಟನ್ ಅತ್ಯಂತ ಜನಪ್ರಿಯ ಬ್ರ್ಯಾಂಡ್
  • ದೇಸಿ ಸಂಸ್ಕೃತಿ, ಅತ್ಯುತ್ತಮ ಗುಣಮಟ್ಟ ಮತ್ತು ವಿಶ್ವಾಸಾರ್ಹ
  • ದಕ್ಷಿಣ ಭಾರತದಾದ್ಯಂತ ಮನೆಮಾತಾಗಿರುವ ಬ್ರ್ಯಾಂಡ್
150ನೇ ಶೋ ರೂಂ, ಸಾಂಸ್ಕೃತಿಕ ಪಾರಂಪರಿಕ ಬ್ರ್ಯಾಂಡ್‌ನ ಪಯಣದಲ್ಲಿ ಐತಿಹಾಸಿಕ ಕ್ಷಣ title=
Ramraj Cotton

ಬೆಂಗಳೂರು: ಇದು ಧೋತಿಗಳ ಬಗ್ಗೆ ಇದ್ದ ಗ್ರಹಿಕೆಯನ್ನು ಬದಲಾಯಿಸಿದ್ದಲ್ಲದೇ, ಅದಕ್ಕೊಂದು ಹೊಸ ರೂಪಕೊಟ್ಟು ಮೌಲ್ಯವನ್ನು ಆಸಾಧಾರಣ ಎತ್ತರಕ್ಕೆ ಏರಿಸಿದೆ. ಅದರಲ್ಲೂ ವಿಶೇಷವಾಗಿ ಯುವಕರು ಇಷ್ಟಪಡುವ ಸ್ಟೈಲ್ ಟ್ರೆಂಡ್ ಆಗಿಸಿದೆ. ಹಿರಿಮೆ-ಗರಿಮೆಗಳನ್ನು ಹೊಂದಿರುವ ರಾಮರಾಜ್ ಕಾಟಿನ್ ಇತ್ತೀಚೆಗೆ 40ನೇ ವಾರ್ಷಿಕೋತ್ಸವದ ಸಂಭ್ರಮ ಕಂಬಿಕೊಂಡಿದೆ. ದೇಶಾದ್ಯಂತ 250 ಕಂಪನಿ ಮಾಲೀಕತ್ವದ ಮಳಿಗೆಗಳನ್ನು ಹೊಂದಿರುವ ಕೆಲವೇ ಬ್ರಾಂಡಗಳಲ್ಲಿ ರಾಮರಾಜ್‌ ಕಾಟನ್ ಕೂಡ ಇಂದು ಗುರುತಿಸಿಕೊಳ್ಳುವ ಮೂಲಕ ಹೊಸ ಇತಿಹಾಸ ಬರೆದಿದೆ. ರಾಮರಾಜ್ ಕಾಟನ್‌ನ 250ನೇ ಮಳಿಗೆಯು ಜೂನ್ 1 ರಂದು ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಪಾರಂಭವಾಗುತ್ತಿದೆ. ತೆಲುಗಿನ ವರ್ಚಸ್ವಿ ಹಾಗೂ ಸ್ಟೈಲಿಶ್ ನಟ ವೆಂಕಟೇಶ್ ದಗ್ಗುಬಾಟ ಅರ್ಥಾತ್ "ವಿಕ್ಟರಿ ವೆಂಕಟೇಶ್" ನೂತನ ಮಳಿಗೆಯನ್ನು ಉದ್ಘಾಟಿಸುತ್ತಿದ್ದು ಕಾರ್ಯಕ್ರಮಕ್ಕೆ ಮೆರುಗು ಬರಲಿದೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಬೇಕಾದಂತ ಬಗೆಬಗೆಯ ಸಾಂಪ್ರದಾಯಿಕ ವಸ್ತಗಳು: ರಾಮರಾಜ್ ಕಾಟನ್ ನಲ್ಲಿ ದೊರೆಯುತ್ತಿದ್ದು, ಇದುವೇ ಒಂದು ವಿಶೇಷ ರಾಮರಾಜ್ ಮಳಿಗೆಗಳಲ್ಲಿ ಎಲ್ಲಾ ವಯಸ್ಸಿನವರಿಗೆ ದೋತಿಗಳು, ಶರ್ಟ್ ಇತ್ಯಾದಿಗಳು ಲಭ್ಯ, ಅತ್ಯಂತ ಸಾಂಪ್ರದಾಯಿಕ ಧೋತಿಗಳ ಜತೆಜತೆಗೆ ಇತ್ತೀಚಿನ ಮತ್ತು ಹೊಸ ಪೀಳಿಗೆ ಬಯಸುವ ನವೀನ ಮಾದಲಯ ಧೋತಿಗಳ ಸಂಗಮವಿರುತ್ತದೆ. ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಉಡುಗೆ ಧೋತಿಗಳೂ ಇಲ್ಲಿವೆ. ಅಲ್ಲದೇ ನಮ್ಮ ಸಂಗ್ರಹಗಳಲ್ಲಿ ರೂ.1,00,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ಕೆಲವು ಆಯ್ತ ಉತ್ಪನ್ನಗಳೊಂದಿಗೆ ಪ್ರೀಮಿಯಂ ಬೆಲೆ ಶ್ರೇಣಿಯಲ್ಲಿ ಐಷಾರಾಮಿ ಸಾಂಪ್ರದಾಯಿಕ ಮನಮೋಹಕ ರೇಷ್ಮೆ ಧೋತಿಗಳು ಮತ್ತು ಶರ್ಟ್‌ಗಳಲೂ ಇದ್ದು, ಗ್ರಾಹಕರ ಮೆಚ್ಚುಗೆಯ ಖರೀದಿ ತಾಣವೆನಿಸಿದೆ.

ಇದನ್ನೂ ಓದಿ: Shocking Video: ಅಪಾಯಕಾರಿ ಹಾವನ್ನು ಕಚ್ಚಿ ತಿನ್ನುವ ಜಿಂಕೆ, ವಿಡಿಯೋ ನೋಡಿ ಶಾಕ್‌ ಆಗ್ತೀರಾ

ಅಪ್ಪಟ ದೇಸಿ ಚಿಂತನೆಯೊಂದಿಗೆ ಸ್ವದೇಶಿ ಬ್ಯಾಂಡ್ 1983ರಲ್ಲಿ ತನ್ನ ಪಯಣ ಆರಂಭಿಸಿತು, ಸಂಸ್ಕೃತಿ, ಸಂಪ್ರದಾಯ, ನಾವೀನ್ಯತೆ ಮತ್ತು ಥರಹೇವಾರಿ ಉತ್ಪನ್ನಗಳ ಸಮ್ಮಿಳಿತದೊಂದಿಗೆ ಜವಳಿ ಉದ್ಯಮಕ್ಕೊಂದು ಹೊಸ ರೂಪ ಕೊಟ್ಟಿದೆ. ದಕ್ಷಿಣ ಭಾರತದಲ್ಲಿ ಧೋತಿ, ಶರ್ಟ್, ಇನರ್‌ವೇ‌ (ಒಳ ಉಡುಪುಗಳು), ನಿಟ್ ವೇರ್, ಫ್ಯಾಬ್ರಿಕ್ಸ್ ಮತ್ತು ಕಿಡ್ & ವುಮೆನ್ಸ್ ವೇ‌ನ ಅತಿದೊಡ್ಡ ತಯಾರಕ, ಪೂರೈಕೆದಾರ ಮತ್ತು ರಫ್ತುದಾರರಲ್ಲಿ ಒಂದೆನಿಸಿಕೊಂಡಿರುವ ರಾಮರಾಜ್' ಜವಳಿ ಉದ್ಯಮದಲ್ಲಿ ಅತ್ಯುನ್ನತ ಮಾನದಂಡವನ್ನು ಹುಟ್ಟುಹಾಕಿದೆ. ಸಾಂಪ್ರದಾಯಿಕ ಧೋತಿಗಳನ್ನು ತಯಾರಿಸುವಲ್ಲಿ ಮುಂಚೂಣಿಯಲ್ಲಿರುವ ರಾಮರಾಜ್‌ ಕಾಟನ್ 2,500 ಬಗೆಯ ಧೋತಿಗಳನ್ನು ಉತ್ಪಾದಿಸುತ್ತಿದೆ. ಅಲ್ಲದೇ, ಸ್ಥಳೀಯ ಅಪ್ಪಟ ಸಂಸ್ಕೃತಿ ಮತ್ತು ಜನರ ಉಡುಗೆಗಳನ್ನು ಉತ್ತೇಜಿಸುವ ಅತಿದೊಡ್ಡ ಬ್ರಾಂಡ್ ಆಗಿದೆ. ರಾಮರಾಜ್ ಕಾಟನ್, ಕಾಲಾನುಕ್ರಮದಲ್ಲಿ ಅನೇಕ ಪುರಸ್ಕಾರಗಳನ್ನು ಹಾಗೂ ಲಕ್ಷಾಂತರ ಗ್ರಾಹಕರ ಹೃದಯ ಗೆದ್ದಿದೆ.

ವರ್ಷಗಳು ಕಳೆದಂತೆ, ರಾಮರಾಜ್ ಕೇವಲ ಜನರ ಸಾಮಾನ್ಯ ಉಡುಪುಗಳಿಗಷ್ಟೇ ಅಲ್ಲದೇ, ಹೆಚ್ಚು ಆದ್ಯತೆಯ ಬ್ಯಾಂಡ್ ಆಗಿಯೂ ಗಮನಸೆಳೆದಿದೆ. ಸಾಂಪ್ರದಾಯಿಕ ಧೋತಿಗಳನ್ನು ತಯಾರಿಸುವಲ್ಲಿ ಮುಂಚೂಣಿ ಸಂಸ್ಥೆ ಎನಿಸಿಕೊಂಡಿರುವ ರಾಮರಾಜ್‌ ರಾಮರಾಜ್ ಕಾಟನ್ ಇಂದು ವೈವಿಧ್ಯಮಯ ಉತ್ಪನ್ನಗಳ ಸಂಗ್ರಹ ಹೊಂದಿದೆ. ಮಳಿಗೆಯು ಪ್ರತಿದಿನ ಧರಿಸುವ ಕಾಟನ್ ಧೋತಿಗಳಿಂದ ಹಿಡಿದು ಪೀಮಿಯಂ ರೇಷ್ಮೆ ಧೋತಿಗಳು, ಕಾಟನ್, ಲೆನಿನ್ ಮತ್ತು ಶುದ್ಧ ರೇಷ್ಮೆ ಶರ್ಟ್‌ಗಳು ಹಾಗೂ ಎಲ್ಲಾ ವಯಸ್ಸಿನವರ ಅಗತ್ಯಕ್ಕೆ ತಕ್ಕ ಕುರ್ತಾಗಳು, ಪುರುಷರು ಮತ್ತು ಮಹಿಳೆಯರಿಗೆ ಒಳ ಉಡುಪುಗಳು ಹೀಗೆ ವೈವಿಧ್ಯಮಯ ಉತ್ಪನ್ನಗಳ ಆಗರವೆನಿಸಿದೆ. 20ಕ್ಕೂ ಹೆಚ್ಚು ಬ್ಯಾಂಡ್ ವಿಸ್ತರಣೆಗಳೊಂದಿಗೆ ಬಾತ್ ಟವೆಲ್ ಸೇರಿದಂತೆ ಬಾತೂಮ್ ಪರಿಕರಗಳೂ ಸಿಗುತ್ತವೆ.

ವಿನಮ್ರ ಭಾವದೊಂದಿಗೆ ಶುರುವಾದ ರಾಮರಾಜ್ ಕಾಟನ್ ಸಂಸ್ಥೆಯು ತಳಮಟ್ಟದ ಶ್ರಮದ ಮೂಲಕ ಇಂದಿನ ಕ್ರಿಯಾತ್ಮಕ ಮತ್ತು ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ. ಸರಿಸಾಟಿಯಿಲ್ಲದ ಪ್ರಬಲ ಬ್ಯಾಂಡ್ ಆಗಿದೆ. ಇದೆಲ್ಲವೂ ಸಾಧ್ಯವಾಗಿಸಿದ್ದು, ದೂರದೃಷ್ಟಿಯುಳ್ಳ ಶ್ರೀಯುತ ಕೆ.ಆರ್. ನಾಗರಾಜನ್ ಅವರ ಕನಸುಗಳು ಮತ್ತು ಸಾಧಿಸಬೇಕೆಂಬ ಅದಮ್ಯ ಆಕಾಂಕ್ಷೆ, ಅವರು ಯಶಸ್ವಿ ಉದ್ಯಮಿ ಮಾತ್ರವಲ್ಲ, ಭಾರತದ ಮೊಟ್ಟಮೊದಲ 'ಸಾಂಸ್ಕೃತಿಕ ಉದ್ಯಮಿ' (ಕಲ್ಟ‌ ಪಿನರ್), ಎಲ್ಲ ಬ್ಯಾಂಡಗಳಂತೆ, ರಾಮರಾಜ್‌ ಕಾಟನ್ ಕೂಡ ಕೇವಲ ಹೆಸರು, ಖ್ಯಾತಿ ಮತ್ತು ವ್ಯವಹಾರವಷ್ಟೇ ಅಲ್ಲದೇ ಅದಕ್ಕೂ ಮೀರಿದ ದೂರದೃಷ್ಟಿ ಮತ್ತು ಪ್ರಯತ್ನಗಳೊಂದಿಗೆ ತನ್ನ ಪ್ರಯಾಣ ಆರಂಭಿಸಿತು. ನೇಕಾರರು ಮತ್ತು ಅವರ ಕುಟುಂಬಗಳ ಯೋಗಕ್ಷೇಮ ಮತ್ತು ಉನ್ನತಿಯನ್ನು ಸದಾ ಬಯಸಿದೆ. 4 ದಶಕಗಳ ಸುದೀರ್ಘ ಪಯಣದ ನಂತರವೂ ಸಂಸ್ಥೆಯ 50,000) ನೇಕಾರ ಕುಟುಂಬಗಳ ಹಿತಾಸಕ್ತಿಗಳನ್ನು ರಕ್ಷಿಸುವ ಮೂಲಕ ಎತ್ತರಕ್ಕೇರಿದೆ. ರಾಮರಾಜ್ ಸಂಸ್ಥೆಯು, ದಕ್ಷಿಣ ಭಾರತದಾದ್ಯಂತ 11 000ಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಅವಕಾಶಗಳನ್ನು ನೀಡಿದೆ.

ಇದನ್ನೂ ಓದಿ:  ಈ ದೇಶದಲ್ಲಿ ಕುಳಿತು ಅಮೆರಿಕಾದ ಮೇಲೆ ಬೇಹುಗಾರಿಕೆ ನಡೆಸುತ್ತಿತ್ತು ಚೀನಾ!

ರಾಮರಾಜ್ ಬ್ಯಾಂಡ್‌ನ ಖ್ಯಾತಿ ದಿನೇದಿನೇ ವೃದ್ಧಿಯಾಗಲು ನಂಬಿಕೆ ಮತ್ತು ಬೆಳವಣಿಗೆಯ ಬಲವಾದ ನೆಟ್ ಪ್ರಮುಖ ಕಾರಣವಾಗಿದೆ. ದಕ್ಷಿಣ ಭಾರತದ ಮಾರುಕಟ್ಟೆಗಳಲ್ಲಿ ಬಲವಾದ ಹೆಜ್ಜೆಗುರುತನ್ನು ಹೊಂದಿರುವ ಈ ಬ್ಯಾಂಡ್ ನೇರವಾಗಿ ಮತ್ತು ಸುಸಜ್ಜಿತ ವಿತರಣಾ ವ್ಯವಸ್ಥೆಯ ಮೂಲಕ 15000ಕ್ಕೂ ಹೆಚ್ಚು ಎಂಬಿಒಗಳಿಗೆ ಸೇವೆ ಸಲ್ಲಿಸುತ್ತದೆ. ಅಲ್ಲದೆ, ಕಂಪನಿಯು ದಕ್ಷಿಣ ಭಾರತದ ರಾಜ್ಯಗಳ ಹೆಚ್ಚಿನ ನಗರಗಳು ಮತ್ತು ಉಪನಗರಗಳಲ್ಲಿ ಮಳಿಗೆಗಳು ಮತ್ತು ಶೋರೂಂಗಳೊಂದಿಗೆ 250 ವಿಶೇಷ: ಬ್ಯಾಂಡ್‌ ರಿಟೇಲ್ ಔಟ್‌ ಲೆಟ್‌ಗಳನ್ನು ನಿರ್ವಹಿಸುತ್ತಿದೆ. ಧೋತಿ ಹಾಗೂ ಜನರಲ್ಲಿ ಸಾಂಪ್ರದಾಯಿಕ ಉಡುಪುಗಳ ಬಗೆಗಿರುವ ಸದಭಿರುಚಿಯ ಸಂಸ್ಕೃತಿಯನ್ನು ಉತ್ತೇಜಿಸುವ ಮತ್ತು ಪರಿಸರ ಸ್ನೇಹಿ ಕ್ರಮಗಳ ಅಳವಡಿಕೆ ಮೂಲಕ ರಾಮರಾಜ್ ದಕ್ಷಿಣ ಭಾರತದಾದ್ಯಂತ ಸಾವಿರಾರು ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸಿದ್ದು, ಶ್ವೇತವರ್ಣದ ವೀರ ಯೋಧನಂತೆ ಕಂಗೊಳಿಸುತ್ತಿದೆ

ದೂರದೃಷ್ಟಿಯುಳ್ಳ ಉದ್ಯಮಿ ಹಾಗೂ ಸಂಸ್ಥಾಪಕರೂ ಆಗಿರುವ ಅಧ್ಯಕ್ಷ ಶ್ರೀಯುತ ಕೆ. ಆರ್. ನಾಗರಾಜನ್ ಅವರ ಆಶ್ರಯದಲ್ಲಿ ಬೆಳೆದುಬಂದ ರಾಮರಾಜ್, ಕಾಟನ್‌ನ ಈ ಯಶಸ್ಸಿನ ಹಿಂದೆ 4 ದಶಕಗಳ ಅಚಲ ಸಮರ್ಪಣೆ ಮತ್ತು ಸ೦ಟಿಯಿಲ್ಲದ ಬದ್ಧತೆ ಮತ್ತು ಮಾರುಕಟ್ಟೆ ನೈಪುಣ್ಯತೆಯ ಶ್ರಮವಿದೆ. ಸಿಬ್ಬಂದಿಯ ಅಚಲ ಬೆಂಬಲದಿಂದ ಈ ಮಟ್ಟಿಗೆ ಬೆಳೆದುಬಂದಿರುವ ರಾಮರಾಜ್ ಕಾಟನ್ ವಿಜಯವಾಡದಲ್ಲಿ ಹೆಗ್ಗುರುತಿನ 250ನೇ ಶೋರೂಂ ಉದ್ಘಾಟನೆಯೊಂದಿಗೆ ಇತಿಹಾಸ ಬರೆದಿದೆ. ದೇಸಿ ಸೊಗಡಿನ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಮತ್ತು ತನ್ನ ಎಲ್ಲಾ ಉತ್ಪನ್ನಗಳಲ್ಲಿ ಸಂಪ್ರದಾಯವನ್ನು ಮಿಳಿತಗೊಳಿಸುತ್ತಿರುವ ರಾಮರಾಜ್ ಬ್ಯಾಂಡನ ಪಯಣದಲ್ಲಿ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಹೆಮ್ಮೆಯ 150ನೇ ಮಳಿಗೆಯನ್ನು ತೆಲುಗಿನ ಸ್ಟೈಲಿಶ್ ಹಾಗೂ ವರ್ಚಸ್ವಿ ನಟ ವೆಂಕಟೇಶ್ ದಗ್ಗುಬಾಟಿ ಅರ್ಥಾತ್ ವಿಕ್ಟರಿ ವೆಂಕಟೇಶ ಅವರು ಉದ್ಘಾಟಿಸುತ್ತಿರುವುದು ವಿಶೇಷ. ಬಹುಮುಖ ಪ್ರತಿಭೆಯ ವೆಂಕಟೇಶ್ ಅವರು ವಿಭಿನ್ನ ಪಾತ್ರಗಳ ಮೂಲಕ ಹೆಸರು ಮಾಡಿದವರು. ಇವರು ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ರಾಮರಾಜ್ ಧೋತಿ, ಮತ್ತು ಶರ್ಟ್‌ಗಳ ಬ್ಯಾಂಡ್ ಅಂಬಾಸಿಡರ್.

ಈ ಸಾಧನೆಯ ಮೈಲುಗಲ್ಲು ರಾಮರಾಜ್ ಕಾಟನ್‌ನ ಭವಿಷ್ಯವನ್ನು ಇನ್ನಷ್ಟು ಭರವಸೆದಾಯಕವಾಗಿಸಿದೆ. ದಕ್ಷಿಣ ಭಾರತದಲ್ಲಿ ಈ ಬ್ಯಾಂಡ್, ಮಾರುಕಟ್ಟೆಯ ಮುಂಚೂಣಿ ನಾಗಿ ಹೊರಹೊಮ್ಮಿದೆ. ಈಗ ತನ್ನ ವೈವಿಧ್ಯಮಯ ಅಸಾಧಾರಣ: ಉತ್ಪನ್ನಗಳೊಂದಿಗೆ ಪ್ಯಾನ್ ಇಂಡಿಯಾ ಉಪಸ್ಥಿತಿಯ ಮಹತ್ವಾಕಾಂಕ್ಷೆಯನ್ನು

ಹೊಂದಿದೆ. ಉತ್ಪಾದನೆ ಹೆಚ್ಚಳ, ತಂತ್ರಜ್ಞಾನದಲ್ಲಿ ಸುಧಾರಣೆ, ನಿರಂತರವಾದ ಮಾರಾಟ ಜಾಲ ವಿಸ್ತರಣೆ, ಜಾಹೀರಾತು ನೀಡುವಿಕೆ ಹೀಗೆ ಎಲ್ಲ ಬಗೆಯಲ್ಲೂ ಸಂಸ್ಥೆಯು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ಇಂದಿನ ಕ್ರಿಯಾತ್ಮಕ ಮಾರುಕಟ್ಟೆಗೆ ಸೂಕ್ತವಾದ ದೃಷ್ಟಿಕೋನದೊಂದಿಗೆ ದೇಶಾದ್ಯಂತದ ಗ್ರಾಹಕರನ್ನು ಸೆಳೆದು ಅವರ ಅಗತ್ಯಗಳನ್ನು ಪೂರೈಸಲು ಇರುವ ಯಾವುದೇ ಅವಕಾಶವನ್ನು ರಾಮರಾಜ್ ಕಾಟನ್ ಮಿಸ್ ಮಾಡಿಕೊಳ್ಳುವುದಿಲ್ಲ. ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸಲು ಮತ್ತು ವಿಜಯದ ಹೊಸ ಪಟಗಳನ್ನು ತೆರೆಯಲು ಸಜ್ಜಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News