Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

Yoga At Work Place: ಇನ್ನು ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ತಾವು ಕುಳಿತ ಕುರ್ಚಿಯಿಂದಲೇ ಅಲ್ಪಾವಧಿಯ ಯೋಗಾಭ್ಯಾಸ ಮಾಡಬಹುದಾಗಿದ್ದು, ಅದಕ್ಕೆ 'ವೈ-ಬ್ರೇಕ್ ಅಟ್ ವರ್ಕ್‌ಪ್ಲೇಸ್ ಯೋಗ' ಎಂದು ಹೆಸರಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉದ್ಯೋಗಿಗಳು ಒತ್ತಡ ಮುಕ್ತ ಮತ್ತು ಉಲ್ಲಾಸವನ್ನು ಅನುಭವಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ, ಇದರಿಂದ ಅವರು ಉತ್ತಮ ರೀತಿಯಲ್ಲಿ ಕೆಲಸದ ಮೇಲೆ ಗಮನ ಕೇಂದ್ರೀಕರಿಸಬಹುದು ಎಂದು ಹೇಳಲಾಗಿದೆ.  

Written by - Nitin Tabib | Last Updated : Jun 13, 2023, 10:13 PM IST
  • ಯೋಗದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮತ್ತೊಮ್ಮೆ ಪ್ರಶಸ್ತಿ ಘೋಷಣೆ ಆರಂಭಿಸುವುದಾಗಿ ಹೇಳಿದೆ.
  • ಭಾರತ ಮತ್ತು ವಿದೇಶಗಳಲ್ಲಿ ಯೋಗದ ಪ್ರಚಾರದಲ್ಲಿ ಮಾಧ್ಯಮದ ಪಾತ್ರವನ್ನು ಶ್ಲಾಘಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವಿಧ ಶ್ರೇಣಿಗಳಾಗಿರುವ
  • ಪ್ರಿಂಟ್ ಮಾಧ್ಯಮ, ಟಿವಿ ಮಾಧ್ಯಮ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಇಂಗ್ಲೀಷ್ ಹಾಗೂ 22 ಇತರ ಭಾಷೆಗಳಲ್ಲಿ ಒಟ್ಟು 33 ಪ್ರಶಸ್ತಿಗಳನ್ನು ಪ್ರದಾನ ಮಾಡಲಿದೆ.
  • ಇದು ಈ ರೀತಿಯ ಪುರಸ್ಕಾರದ ಎರಡನೇ ಆವೃತ್ತಿಯಾಗಿದ್ದು, ಕೋವಿಡ್-19 ಮಹಾಮಾರಿಯ ಕಾರಣ ಇದನ್ನು ಸ್ಥಗಿತಗೊಳಿಸಲಾಗಿತ್ತು.
Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ title=

Yoga At Office: ಕೇಂದ್ರದ ನರೇಂದ್ರ ಮೋದಿ ಸರ್ಕಾರ ನೌಕರರನ್ನು ಒತ್ತಡ ಮುಕ್ತವಾಗಿಡಲು ಯೋಜನೆ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಒತ್ತಡವನ್ನು ನಿವಾರಿಸಲು ಮತ್ತು ಅವರಿಗೆ ತಾಜಾತನದ ಅನುಭವವನ್ನು ನೀಡಲು ಸಣ್ಣ 'ವೈ-ಬ್ರೇಕ್ಸ್' (ಯೋಗ ವಿರಾಮಗಳು) ತೆಗೆದುಕೊಳ್ಳುವಂತೆ ಹೇಳಿದೆ. ಸರ್ಕಾರಿ ನೌಕರರು ಉತ್ತಮ ರೀತಿಯಲ್ಲಿ ಕೆಲಸದತ್ತ ಗಮನ ಹರಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

'ವೈ-ಬ್ರೇಕ್' ಎಂದರೆ ಕಚೇರಿಯಲ್ಲಿ ನಿಮ್ಮ ಕುರ್ಚಿಯ ಮೇಲೆ ಕುಳಿತು ಯೋಗ ಮಾಡುವುದು ಎಂದರ್ಥ. ಈ ಕುರಿತು ಆದೇಶ ಹೊರಡಿಸಿರುವ ಸಿಬ್ಬಂದಿ ಸಚಿವಾಲಯ ಆದೇಶದಲ್ಲಿ, ಕೆಲಸದ ಸ್ಥಳದಲ್ಲಿ ಜನರಿಗೆ ಈ ಹೊಸ ಯೋಗ ಮಾರ್ಗಸೂಚಿಯನ್ನು ಜಾರಿಗೊಳಿಸಲು ಮತ್ತು ಯೋಗವನ್ನು ಉತ್ತೇಜಿಸಲು ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳು/ಇಲಾಖೆಗಳನ್ನು ಕೇಳಿಕೊಂಡಿದೆ.

ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ, 'ಆಯುಷ್ ಸಚಿವಾಲಯವು ಕೆಲಸದ ಸ್ಥಳದಲ್ಲಿ ವೈ-ಬ್ರೇಕ್ ಅನ್ನು ಪ್ರಾರಂಭಿಸುತ್ತಿದ್ದು, ಸಿಬ್ಬಂದಿಯ ಒತ್ತಡವನ್ನು ನಿವಾರಿಸುವ ಮತ್ತು ಅವರನ್ನು ರಿಫ್ರೆಶ್ ಮಾಡುವ ಉದ್ದೇಶ ಅವರು ಉತ್ತಮ ರೀತಿಯಲ್ಲಿ ಕೆಲಸದಲ್ಲಿ ಗಮನಹರಿಸುವುದಾಗಿದೆ. ಇದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ತುಂಬಾ ಉತ್ತೇಜನಕಾರಿಯಾಗಿದೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಹೊರಗೆ ಹೋಗಿ ಯೋಗಾಭ್ಯಾಸ ಮಾಡಲು ಸಾಧ್ಯವಾಗದ ಅಧಿಕಾರಿಗಳಿಗೆ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ಮತ್ತು ಆಯುಷ್ ಸಚಿವಾಲಯವು ಹೊಸ ಸೌಲಭ್ಯಗಳನ್ನು ತಂದಿದೆ.

ಇನ್ನು ಅಧಿಕಾರಿಗಳು ತಮ್ಮ ಕಚೇರಿಯ ಕುರ್ಚಿಯಲ್ಲಿ ಕುಳಿತು ಅಲ್ಪಾವಧಿಯ ಯೋಗಾಭ್ಯಾಸ ಮಾಡಬಹುದಾಗಿದ್ದು, ಅದಕ್ಕೆ 'ವೈ-ಬ್ರೇಕ್ ಅಟ್ ವರ್ಕ್‌ಪ್ಲೇಸ್ ಯೋಗ' ಎಂದು ಹೆಸರಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಉದ್ಯೋಗಿಗಳು ಒತ್ತಡ ಮುಕ್ತತೆ ಮತ್ತು ಉಲ್ಲಾಸವನ್ನು ಅನುಭವಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ, ಇದರಿಂದ ಅವರು ಉತ್ತಮ ರೀತಿಯಲ್ಲಿ ಕೆಲಸದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬಹುದು.

ಇದನ್ನೂ ಓದಿ-Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!

ಯೋಗದ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಮತ್ತೊಮ್ಮೆ ಪ್ರಶಸ್ತಿ ಘೋಷಣೆ ಆರಂಭಿಸುವುದಾಗಿ ಹೇಳಿದೆ. ಭಾರತ ಮತ್ತು ವಿದೇಶಗಳಲ್ಲಿ ಯೋಗದ ಪ್ರಚಾರದಲ್ಲಿ ಮಾಧ್ಯಮದ ಪಾತ್ರವನ್ನು ಶ್ಲಾಘಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ವಿವಿಧ ಶ್ರೇಣಿಗಳಾಗಿರುವ ಪ್ರಿಂಟ್ ಮಾಧ್ಯಮ, ಟಿವಿ ಮಾಧ್ಯಮ ಹಾಗೂ ರೇಡಿಯೋ ಮಾಧ್ಯಮಗಳಲ್ಲಿ ಇಂಗ್ಲೀಷ್ ಹಾಗೂ 22 ಇತರ ಭಾಷೆಗಳಲ್ಲಿ ಒಟ್ಟು 33 ಪ್ರಶಸ್ತಿಗಳನ್ನು ಪ್ರದಾನ ಮಾಡಲಿದೆ. ಇದು ಈ ರೀತಿಯ ಪುರಸ್ಕಾರದ ಎರಡನೇ ಆವೃತ್ತಿಯಾಗಿದ್ದು, ಕೋವಿಡ್-19 ಮಹಾಮಾರಿಯ ಕಾರಣ ಇದನ್ನು ಸ್ಥಗಿತಗೊಳಿಸಲಾಗಿತ್ತು. 

ಇದನ್ನೂ ಓದಿ-Jammu-Kashmir: ಕುಪವಾಡಾದ ಗಡಿ ನಿಯಂತ್ರಣ ರೇಖೆ ಬಳಿ 2 ಉಗ್ರರನ್ನು ಮಟ್ಟಹಾಕಿದ ಭದ್ರತಾ ಪಡೆ, ಮುಂದುವರೆದ ಕಾರ್ಯಾಚರಣೆ

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 22 ಭಾರತೀಯ ಭಾಷೆಗಳಲ್ಲಿ 33 ಸಮ್ಮಾನ್‌ಗಳನ್ನು ಮತ್ತು ಮುದ್ರಣ ಮಾಧ್ಯಮ, ದೂರದರ್ಶನ ಮತ್ತು ರೇಡಿಯೋ ಎಂಬ ಮೂರು ವಿಭಾಗಗಳಲ್ಲಿ ಇಂಗ್ಲಿಷ್ ಅನ್ನು ನೀಡುತ್ತದೆ. ಇದು ಈ ಪ್ರಶಸ್ತಿಗಳ ಎರಡನೇ ಆವೃತ್ತಿಯಾಗಿದ್ದು, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮುಂದೂಡಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News