Guru Chandal Yog: ಗ್ರಹಗಳ ಸಂಕ್ರಮಣದ ಜೊತೆಗೆ ಅನೇಕ ಶುಭ ಮತ್ತು ಅಶುಭ ಯೋಗಗಳು ಸೃಷ್ಟಿಯಾಗುತ್ತವೆ. ಗುರು ಮತ್ತು ರಾಹುವಿನ ಸಂಯೋಜನೆಯಿಂದ ರೂಪುಗೊಂಡ ಚಂಡಾಲ ದೋಷ ಕೆಲವರಿಗೆ ಕಷ್ಟಗಳ ಸರಮಾಲೆ ನೀಡುತ್ತದೆ. ಇದೀಗ ಗುರು ಮತ್ತು ರಾಹುವಿನ ಮೈತ್ರಿ ಮುರಿಯಲಿದೆ.
Jupiter Transit: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಲೇ ಇರುತ್ತವೆ. ಒಂದು ಗ್ರಹವು ಸ್ಥಾನ ಬದಲಾಯಿಸಿದಾಗ ಬೇರೆ ಗ್ರಹಗಳು ಒಟ್ಟಿಗೆ ಸೇರುತ್ತವೆ. ಈ ಸ್ಥಿತಿಯನ್ನು ಗ್ರಹಗಳ ಸಂಯೋಗ ಎಂದು ಕರೆಯಲಾಗುತ್ತದೆ. ಗ್ರಹಗಳ ಮೈತ್ರಿಯು ಶುಭ ಮತ್ತು ಅಶುಭ ಯೋಗಗಳನ್ನು ರೂಪಿಸುತ್ತವೆ. ಈ ದಿನಗಳಲ್ಲಿ ಗುರು ಮತ್ತು ರಾಹುವಿನ ಸಂಯೋಜನೆಯಿಂದ ಗುರು ಚಂಡಾಲ ಯೋಗವು ರೂಪುಗೊಳ್ಳುತ್ತದೆ. ಈ ಯೋಗ ಜ್ಯೋತಿಷ್ಯದಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಈಗ ಗುರು ಅಶ್ವನಿ ನಕ್ಷತ್ರವನ್ನು ತೊರೆದು ಭರಣಿ ನಕ್ಷತ್ರಕ್ಕೆ ಪ್ರವೇಶಿಸುವರು. ಇದರಿಂದ ಗುರು ಮತ್ತು ರಾಹುವಿನ ಮೈತ್ರಿ ಮುರಿದು ಗುರು ಚಂಡಾಲ ದೋಷ ಕರಗುತ್ತದೆ. ಈ ದೋಷ ಕರಗಿದ ಕೂಡಲೇ ಈ 5 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ.
ಗುರು ಚಂಡಾಲ ದೋಷ ನಿವಾರಣೆಯಿಂದ ಧನು ರಾಶಿಯವರಿಗೆ ವರದಾನದಂತೆ. ಹೂಡಿಕೆ ಮಾಡಲು ಇದು ಶುಭ ಸಮಯ ಮತ್ತು ನೀವು ಉತ್ತಮ ಆದಾಯವನ್ನು ಪಡೆಯುತ್ತೀರಿ. ವಿದೇಶದಲ್ಲಿ ವ್ಯಾಸಂಗ ಮಾಡುವ ಕನಸು ನನಸಾಗಲಿದೆ.
ಗುರು ಚಂಡಾಲ ದೋಷ ನಿವಾರಣೆಯಾಗುವುದು ಬಹಳ ಪ್ರಯೋಜನಕಾರಿ. ಈ ಸಮಯದಲ್ಲಿ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಮತ್ತು ದೀರ್ಘಕಾಲ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಹೊಸ ಉದ್ಯಮ ಆರಂಭಿಸುವ ಆಲೋಚನೆಯಲ್ಲಿರುವ ಉದ್ಯಮಿಗಳ ಕನಸು ಈಡೇರಲಿದೆ.
ಅದೃಷ್ಟವು ಹೊಳೆಯಲಾರಂಭಿಸುತ್ತದೆ. ಮಿಥುನ ರಾಶಿಯ ಜಾತಕದಲ್ಲಿ ಗುರುವಿನ ಸ್ಥಾನ ಬದಲಾದ ತಕ್ಷಣ ಬುಧಾದಿತ್ಯ ಮತ್ತು ಭದ್ರ ರಾಜಯೋಗವು ರೂಪುಗೊಳ್ಳುತ್ತದೆ. ಇದು ಎಲ್ಲಾ ಕೆಲಸದ ಕ್ಷೇತ್ರಗಳಲ್ಲಿ ಯಶಸ್ಸನ್ನು ನೀಡುತ್ತದೆ. ಕೆಲಸದ ಸ್ಥಳದಲ್ಲಿ ಗೌರವ ಹೆಚ್ಚಾಗುತ್ತದೆ.
ಕೆಲಸದ ಸ್ಥಳದಲ್ಲಿ ಲಾಭವಾಗಲಿದೆ. ಅತ್ಯುತ್ತಮ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕಛೇರಿಯಲ್ಲಿರುವ ಬಾಸ್ ನಿಮ್ಮ ಕೆಲಸದಿಂದ ಸಂತುಷ್ಟರಾಗಿ ನಿಮ್ಮನ್ನು ಹೊಗಳುತ್ತಾರೆ. ಧನಲಾಭದಿಂದ ಆರ್ಥಿಕ ಸ್ಥಿತಿ ಸದೃಢವಾಗುತ್ತದೆ.
ಈ ರಾಶಿಯವರ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಗಳಿಸಬಹುದು. ಉದ್ಯೋಗದಲ್ಲಿ ಬಡ್ತಿಗಾಗಿ ಕಾಯುತ್ತಿದ್ದವರ ಕನಸು ಈಡೇರಲಿದೆ.