Groom Crying Video: ವಧು ಮಂಟಪಕ್ಕೆ ಬರ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವರ: ಕಣ್ಸನ್ನೆಯಲ್ಲೇ ಮದುಮಗಳು ಹೇಳಿದ್ದು…!

Groom Crying Viral Video: ತನ್ನ ವಧು ಸರ್ವಾಲಂಕಾರ ಭೂಷಿತೆಯಾಗಿ ಮಂಟಪಕ್ಕೆ ಬರುವುದನ್ನು ಕಂಡ ವರ ಕಣ್ಣೀರು ಸುರಿಸಿದ್ದಾನೆ. ವಧು ಸುಂದರ ಲೆಹೆಂಗಾವನ್ನು ನೋಡಿದ ವರನು ಅತಿಥಿಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾನೆ. ವೀಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋ ನಿಜಕ್ಕೂ ತುಂಬಾ ಮುದ್ದಾಗಿದೆ.

Written by - Bhavishya Shetty | Last Updated : Jun 21, 2023, 09:17 AM IST
    • ವಧು ಸರ್ವಾಲಂಕಾರ ಭೂಷಿತೆಯಾಗಿ ಮಂಟಪಕ್ಕೆ ಬರುವುದನ್ನು ಕಂಡ ವರ ಕಣ್ಣೀರು ಸುರಿಸಿದ್ದಾನೆ
    • ವಧು ಸುಂದರ ಲೆಹೆಂಗಾವನ್ನು ನೋಡಿದ ವರನು ಅತಿಥಿಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾನೆ.
    • ವಿಡಿಯೋದಲ್ಲಿ ವಧು ಮಂಟಪಕ್ಕೆ ಬರುತ್ತಿದ್ದಂತೆ, ಸಂತೋಷದಿಂದ ವರ ಕಣ್ಣೀರು ಹಾಕಿದ್ದಾನೆ
Groom Crying Video: ವಧು ಮಂಟಪಕ್ಕೆ ಬರ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತ ವರ: ಕಣ್ಸನ್ನೆಯಲ್ಲೇ ಮದುಮಗಳು ಹೇಳಿದ್ದು…! title=
Groom Crying Viral Video

Groom Crying Viral Video: ಮದುವೆಯ ದಿನದಂದು ವಧು-ವರರನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಂದವಾಗಿ ರೆಡಿಯಾಗುವ ಅವರನ್ನು ನೋಡಲೆಂದೇ ಅನೇಕರು ಕಾಯುತ್ತಿರುತ್ತಾರೆ. ಇದೀಗ ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ವಧು ಮಂಟಪಕ್ಕೆ ಬರುತ್ತಿದ್ದಂತೆ, ಸಂತೋಷದಿಂದ ವರ ಕಣ್ಣೀರು ಹಾಕಿದ್ದಾನೆ.

ಇದನ್ನೂ ಓದಿ: ಈ ರಾಶಿಯವರ ಜಾತಕದಲ್ಲಿ ರಾಜಯೋಗ ಶುರು! ಹರಿದುಬರಲಿದೆ ಅಪಾರ ಧನಸಂಪತ್ತು-ಅದೃಷ್ಟವೇ ಬದಲು

ತನ್ನ ವಧು ಸರ್ವಾಲಂಕಾರ ಭೂಷಿತೆಯಾಗಿ ಮಂಟಪಕ್ಕೆ ಬರುವುದನ್ನು ಕಂಡ ವರ ಕಣ್ಣೀರು ಸುರಿಸಿದ್ದಾನೆ. ವಧು ಸುಂದರ ಲೆಹೆಂಗಾವನ್ನು ನೋಡಿದ ವರನು ಅತಿಥಿಗಳ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾನೆ. ವೀಡಿಯೊವನ್ನು 3 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲದೆ ಈ ವಿಡಿಯೋ ನಿಜಕ್ಕೂ ತುಂಬಾ ಮುದ್ದಾಗಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವರನು ತನ್ನ ವಧುವನ್ನು ಮದುವೆಯ ಅಲಂಕಾರ ಮತ್ತು ಆಭರಣಗಳಲ್ಲಿ ಕಂಗೊಳಿಸುತ್ತಿರುವುದನ್ನು ನೋಡಿ ಆನಂದ ಭಾಷ್ಪ ಸುರಿಸಿದ್ದಾನೆ.

ವಿಡಿಯೋದಲ್ಲಿ ಏನಿದೆ?

ವೇದಿಕೆಯ ಮೇಲೆ ನಿಂತಿದ್ದ ವರನು ಮದುವೆಯ ಡ್ರೆಸ್‌ ನಲ್ಲಿ ತನ್ನ ವಧುವನ್ನು ನೋಡಿ ದಿಗ್ಭ್ರಮೆಗೊಂಡಿದ್ದಾನೆ. ತನ್ನ ಪ್ರೀತಿಯು ಪತ್ನಿಯ ಸ್ಥಾನವನ್ನು ತುಂಬಲು ಹೊರಟಿದ್ದಾಳೆ ಎಂಬುದನ್ನು ಆತನಿಂದ ನಂಬಲು ಸಾಧ್ಯವಾಗಲಿಲ್ಲ. ವೇದಿಕೆಯ ಮೇಲೆ ಅವಳನ್ನು ಸ್ವಾಗತಿಸಲು ಅವನು ತನ್ನ ಮೊಣಕಾಲುಗಳ ಮೇಲೆ ಕುಳಿತುಕೊಂಡು ಕೈ ಚಾಚುವುದನ್ನು ಕಾಣಬಹುದು. ವಧು ವರನಿಗೆ ಅಳಬೇಡ ಎಂದು ಸನ್ನೆ ಮಾಡುವುದನ್ನು ಕೂಡ ಕಾಣಬಹುದು. ಮದುವೆಯ ಮಂಟಪಕ್ಕೆ ಬರುತ್ತಿದ್ದಂತೆ, ವಧು ವರನಿಗೆ ಗುಲಾಬಿಗಳ ಸಣ್ಣ ಪುಷ್ಪಗುಚ್ಛವನ್ನು ನೀಡುತ್ತಾಳೆ. ನಂತರ ದಂಪತಿಗಳು ಒಬ್ಬರನ್ನೊಬ್ಬರು ತಬ್ಬಿಕೊಳ್ಳುತ್ತಿರುವಾಗ ಅವರ ಸ್ನೇಹಿತರು ಮತ್ತು ಕುಟುಂಬದವರು ಅವರನ್ನು ಹುರಿದುಂಬಿಸುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Weddingz.in (@weddingz.in)

 

 

ಇದನ್ನೂ ಓದಿ: ಈ ಹೂವುಗಳು ಲಕ್ಷ್ಮೀ ದೇವಿಗೆ ಬಲುಪ್ರೀತಿ.. ಮನೆಯಲ್ಲಿದ್ದರೆ ಸಂತೋಷ, ಸಂಪತ್ತು ವೃದ್ಧಿಯಾಗುತ್ತೆ!

ಭಾವನಾತ್ಮಕ ವಿಡಿಯೋಗೆ ಜನರು ಪ್ರತಿಕ್ರಿಯೆ:

Weddingz.in ಇನ್‌ ಸ್ಟಾಗ್ರಾಂ ಪೇಜ್ ಮೂಲಕ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಾಮೆಂಟ್ ಬಾಕ್ಸ್‌ ನಲ್ಲಿ ಈ ವೀಡಿಯೊಗೆ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇಂತಹ ವಧು-ವರರ ಜೋಡಿ ಅಪರೂಪಕ್ಕೆ ಕಾಣಸಿಗುತ್ತದೆ. ಹೀಗಿರುವಾಗ ಜನ ಕೂಡ ಇಬ್ಬರ ಮೇಲೆ ಅಪಾರ ಪ್ರೀತಿಯ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರ ಹೃದಯದ ಇಮೋಜಿ ಕಳುಹಿಸಿದರೆ, ಮತ್ತೊಬ್ಬರು, “ನನ್ನ ಮದುವೆಯಲ್ಲಿ ನನ್ನ ಪತಿ ಈ ರೀತಿ ಅಳದಿದ್ದರೆ ನಾನು ಅಲ್ಲಿಂದ ಹೊರಟು ಹೋಗುತ್ತೇನೆ” ಎಂದು ಹಂಚಿಕೊಂಡಿದ್ದಾರೆ. ಮೂರನೇ ವ್ಯಕ್ತಿ "ಯಾರೋ ತುಂಬಾ ಅದೃಷ್ಟವಂತರು" ಎಂದರೆ ನಾಲ್ಕನೇ ಬಳಕೆದಾರರು "Awwwwww ಇದು ತುಂಬಾ ಮುದ್ದಾಗಿದೆ" ಎಂದು ಹೇಳಿಕೊಂಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News