Sa Ri Ga Ma Pa: ಶೀಘ್ರದಲ್ಲೇ ಸರಿಗಮಪ ಸೀಸನ್ 20 World Wide Audition

Sa Ri Ga Ma Pa World Wide Auditions: 19 ಸೀಸನ್‌ಗಳನ್ನು ಅದ್ಭುತವಾಗಿ ಪೂರೈಸಿರುವ ಸರಿಗಮಪ ರಿಯಾಲಿಟಿ ಶೋ ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡದ ಸಂಗೀತ ಪ್ರೇಮಿಗಳಿಗೆ ಒಂದು ವಿಶೇಷ ಅವಕಾಶ ನೀಡಲು ಮುಂದಾಗಿದೆ.   

Written by - Nandish A.Huded | Last Updated : Jul 9, 2023, 01:10 PM IST
  • ಶೀಘ್ರದಲ್ಲೇ ಬರಲಿದೆ ಸರಿಗಮಪ ಸೀಸನ್ 20
  • ವಿದೇಶದಲ್ಲಿ ಸರಿಗಮಪ ಆಡಿಷನ್‌
  • ಜೀ ಕನ್ನಡ ವಾಹಿನಿಯ ಸಂಗೀತ ಕಾರ್ಯಕ್ರಮ ಸರಿಗಮಪ
Sa Ri Ga Ma Pa: ಶೀಘ್ರದಲ್ಲೇ ಸರಿಗಮಪ ಸೀಸನ್ 20 World Wide Audition  title=
Sa Ri Ga Ma Pa

Sa Ri Ga Ma Pa World Wide Auditions: ಕನ್ನಡದ ಹೆಸರಾಂತ ಸಂಗೀತ ಕಾರ್ಯಕ್ರಮ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಈಗಾಗಲೇ ತನ್ನ 19 ಸೀಸನ್‌ಗಳನ್ನು ಅದ್ಭುತವಾಗಿ ಪೂರೈಸಿದೆ. ತನ್ನ ಎಲ್ಲಾ ಸೀಸನ್‌ಗಳಲ್ಲಿ ನೂರಾರು ಅದ್ಭುತ ಸಂಗೀತಗಾರರನ್ನು ಜಗತ್ತಿಗೆ ಪರಿಚಯಿಸುವ ಈ ರಿಯಾಲಿಟಿ ಶೋ ಈಗ ಮತ್ತೊಂದು ದಾಪುಗಾಲು ಇಡಲು ಮುಂದಾಗಿದೆ.

2006 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಆರಂಭವಾದ ಸರಿಗಮಪ ಕಾರ್ಯಕ್ರಮ 2022 ರ ವರೆಗೆ 19 ಸೀಸನ್ ಗಳನ್ನು ಪೂರ್ಣಗೊಳಿಸಿ ಹಲವಾರು ಅದ್ಭುತ ಪ್ರತಿಭೆಗಳನ್ನು ಪರಿಚಯಿಸಿದೆ. ಸರಿಗಮಪ ತಂಡ ಪ್ರತಿ ಸೀಸನ್ ನಲ್ಲೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ Audition ನಡೆಸಿ ಸಂಗೀತ ಪ್ರತಿಭೆಗಳು ಹೆಕ್ಕಿ ತರುತ್ತಿತ್ತು. ಆದರೆ ಈಗ ಜೀ ಕನ್ನಡ ಸರಿಗಮಪ ತಂಡ ಈ ವಿಷಯದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲಿದೆ.

ಇದನ್ನೂ ಓದಿ: ಸಲಾರ್ ಸಿನಿಮಾದ ಮೇಲೆ ಹೆಚ್ಚಿದ ನಿರೀಕ್ಷೆ, 2000 ಕೋಟಿ ದಾಟುತ್ತಾ?

ವಿದೇಶಕ್ಕೆ ಹಾರಲು ಸಜ್ಜಾಗಿದೆ ಸರಿಗಮಪ ತಂಡ. ಬರೀ ನಮ್ಮ ರಾಜ್ಯದ ತುಂಬಾ ಪ್ರಯಾಣಿಸಿ ಸಂಗೀತ ಪ್ರತಿಭೆಗಳನ್ನು ಹುಡುಕಿ ತರುತ್ತಿದ್ದ ಜೀ ಸರಿಗಮಪ ತಂಡ, ವಿದೇಶದಲ್ಲಿ ವಾಸಿಸುತ್ತಿರುವ ಕನ್ನಡದ ಸಂಗೀತ ಪ್ರೇಮಿಗಳಿಗೆ ಒಂದು ವಿಶೇಷ ಅವಕಾಶ ನೀಡಲು ಮುಂದಾಗಿದೆ. 

 

 
 
 
 

 
 
 
 
 
 
 
 
 
 
 

A post shared by Zee Kannada (@zeekannada)

 

ಇದೇ ಮೊದಲ ಬಾರಿಗೆ ವಿದೇಶದಲ್ಲಿ ಆಡಿಷನ್‌ ನಡೆಸುತ್ತಿದೆ. ಇದು ಎಲ್ಲರ ಕುತೂಹಲ ಹೆಚ್ಚಿಸಿದೆ. ದೇಶದ ಬೇರೆ ಬೇರೆ ರಾಜ್ಯದ ಪ್ರತಿಭೆಗಳು ಕನ್ನಡದ ಕಾರ್ಯಕ್ರಮಕ್ಕೆ ಬಂದು ಹಾಡಿ ಎಲ್ಲರ ಮನೆ ಮಾತಾಗಿದ್ದಾರೆ. ನಮ್ಮ ರಾಜ್ಯದ ಹಳ್ಳಿಯಿಂದ ದೇಶದ ರಾಜಧಾನಿ ದೆಹಲಿ ವರೆಗೂ ತಲುಪಿ ಬೇರೆ ರಾಜ್ಯದ ಪ್ರತಿಭೆಗಳಾದ ಅಂಕಿತಾ ಕುಂಡು ನಂತಹ ಅನೇಕ ಪ್ರತಿಬೆಗಳುನ್ನು ರಾಜ್ಯಕ್ಕೆ ಪರಿಚಯಿಸಿದರು. ಕನ್ನಡಿಗರ ಮನಗೆದ್ದ ಸಂಗೀತ ಕಾರ್ಯಕ್ರಮ ಶೀಘ್ರದಲ್ಲೇ ವಿದೇಶಕ್ಕೆ ಹಾರಿ ಅಲ್ಲಿನ ಅದ್ಭುತ ಸಂಗೀತ ಪ್ರತಿಭೆಗಳನ್ನು ಆರಿಸಿ ಜಗತ್ತಿಗೆ ಪರಿಚಯಿಸಲಿದೆ. 

ಇದನ್ನೂ ಓದಿ: ಬಿಡುಗಡೆಗೆ ಸಜ್ಜಾಗಿದೆ ಮಹೇಶ್ ಬಾಬು ನಿರ್ದೇಶನ ʼಅಪರೂಪʼ ಚಿತ್ರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News