ಸಿಲಿಕಾನ್ ಸಿಟಿಯಲ್ಲಿ ನಯಾ ಟ್ರೆಂಡ್ : ಬಿಗ್‌ ಪೈಥಾನ್‌ಗೆ ಹೆಚ್ಚಿತು ಡಿಮ್ಯಾಂಡ್‌..! ಏಕೆ ಗೊತ್ತಾ..?

ಈ ಬಿಗ್ ಪೈಥಾನ್ ನೋಡಿದ್ರೆ ಎಂತಹವರಿಗೂ ಎದೆ ಝಲ್ ಅನ್ನಿಸುತ್ತೆ. ಆದ್ರೀಗ ಆ ತರ ಭಯ ಪಟ್ಟು ಕೊಳ್ಳೋ ಕಾಲ ಹೋಯ್ತು ಸ್ವಾಮಿ. ಯಾಕಂದ್ರೆ ಸಿಟಿ ಮಂದಿ ಈಗ ನಾಯಿ ಬೆಕ್ಕು ಸಾಕೋ ತರ ಹೆಬ್ಬಾವು ಸಾಕಲು ಶುರು ಮಾಡಿದ್ದಾರೆ.

Written by - Bhavya Sunil Bangera | Edited by - Krishna N K | Last Updated : Jul 19, 2023, 03:29 PM IST
  • ಸಿಲಿಕಾನ್ ಸಿಟಿಯಲ್ಲಿ ನಯಾ ಟ್ರೆಂಡ್ ಶುರುವಾಗಿದೆ.
  • ರಾಜಧಾನಿ ಜನರ ಈ ಹೊಸ ಕ್ರೇಜ್ ಹೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ..!
  • ಈ ಲೋಕದಲ್ಲಿ ಹೀರೋನೆ ಇಲ್ಲಿ ತಲೆ ಆಡಿಸುತ್ತಾ ಇದ್ದಾನಲ್ಲ ಬಿಗ್‌ ಪೈಥಾನ್..
ಸಿಲಿಕಾನ್ ಸಿಟಿಯಲ್ಲಿ ನಯಾ ಟ್ರೆಂಡ್ : ಬಿಗ್‌ ಪೈಥಾನ್‌ಗೆ ಹೆಚ್ಚಿತು ಡಿಮ್ಯಾಂಡ್‌..! ಏಕೆ ಗೊತ್ತಾ..? title=

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಯಾ ಟ್ರೆಂಡ್ ಶುರುವಾಗಿದೆ. ರಾಜಧಾನಿ ಜನರ ಈ ಹೊಸ ಕ್ರೇಜ್ ಹೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ..! ಇದು ಯಾವ ತರಹದ ಕ್ರೇಜ್ ಅಪ್ಪಾ ಅಂದ್ರಾ.. ಆಮೆ.. ಚಿಕ್ಕ ಪುಟ್ಟ ಪ್ರಾಣಿ, ಕ್ಯೂಟ್ ಕ್ಯೂಟ್ ಹಕ್ಕಿ.. ಅದ್ರ ಜೊತೆಗೆ ಅಬ್ಬಬ್ಬಾ ಎನಿಸೋ ದೊಡ್ಡ ಪೈಥಾನ್.. ಏನಪ್ಪಾ ಇದು ಚಿಕ್ಕ ಪ್ರಾಣಿ ಲೋಕ ಅಂದು ಕೊಂಡ್ರಾ ಈ ಲೋಕದಲ್ಲಿ ಹೀರೋನೆ ಇಲ್ಲಿ ತಲೆ ಆಡಿಸುತ್ತಾ ಇದ್ದಾನಲ್ಲ ಬಿಗ್‌ ಪೈಥಾನ್..

ಹೌದು.. ಈ ಬಿಗ್ ಪೈಥಾನ್ ನೋಡಿದ್ರೆ ಎಂತಹವರಿಗೂ ಎದೆ ಝಲ್ ಅನ್ನಿಸುತ್ತೆ. ಆದ್ರೀಗ ಆ ತರ ಭಯ ಪಟ್ಟು ಕೊಳ್ಳೋ ಕಾಲ ಹೋಯ್ತು ಸ್ವಾಮಿ. ಯಾಕಂದ್ರೆ ಸಿಟಿ ಮಂದಿ ಈಗ ನಾಯಿ ಬೆಕ್ಕು ಸಾಕೋ ತರ ಹೆಬ್ಬಾವು ಸಾಕಲು ಶುರು ಮಾಡಿದ್ದಾರೆ. ಹೆಬ್ಬಾವು ಈಗ ಜನರ ಪ್ರೀತಿಯ ಸಾಕು ಪ್ರಾಣಿ ಆಗಿದೆ.

ಇದನ್ನೂ ಓದಿ: ಕಳ್ಳರ ಕರಾಮತ್ತು, 20 ಮೋಟಾರ್ಗಳ ವೈರ್, ಸ್ಟಾಟರ್ ಉಡೀಸ್

ಅಂದೊಂದಿತ್ತು ಕಾಲ ಜನ ನಾಯಿ ಬೆಕ್ಕು ಸಾಕಿ ಫೋಟೋ ಹೊಡೆದು ಸ್ಟೇಟಸ್ ಹಾಕ್ತಾ ಇದ್ರು ಈಗ ಹೆಬ್ಬಾವಿನ ಜೊತೆ ಮುದ್ದು ಮಾಡ್ತಾ ಪ್ರೀತಿಯಿಂದ ಅದನ್ನ ಸಾಕಲು ಶುರು ಮಾಡಿದ್ದಾರಂತೆ, ಜಾಸ್ತಿ ಈಗ ಈ ಪೈಥಾನ್ ಗೆ ಬೇಡಿಕೆಯಂತೆ.. ಅಷ್ಟಕ್ಕೂ ಇದು ನಾವು ಹೇಳ್ತಾ ಇಲ್ಲ ಸ್ವಾಮಿ ಈ ಅನಿಮಲ್ ಶಾಪ್ ಓನರ್ ಹೇಳಿದ್ದಾರೆ ಕೇಳಿ.

ಅಷ್ಟಕ್ಕೂ ಮೈಂಟೆನೆನ್ಸ್ ಕಡಿಮೆ ಅಂತ  ಸಿಟಿ ಜನ ಈ ಹೆಬ್ಬಾವು ಸಾಕಲು ಶುರು ಮಾಡಿದ್ದಾರಾಂತೆ.. ಮಾಮೂಲಿ ಸಾಕು ಪ್ರಾಣಿಗಳು ತುಂಬಾ ಕ್ವಾಸ್ಟ್ಲಿ.. ಆದ್ರೆ ಹೆಬ್ಬಾವಿನ ತಿಂಗಳಿಗೆ 400 ರೂಪಾಯಿ ಅಷ್ಟೇ ಖರ್ಚಾಗುವುದು.. ಒಮ್ಮೆ ಆಹಾರ ಸೇರಿಸಿದರೆ ಒಂದು ವಾರ ಮತ್ತೆ ಸೇವಿಸಲ್ಲ ಅಂತೆ. ಆದ್ರೆ ಇದನ್ನ ನೀವು ಸುಮ್ಮ ಸುಮ್ಮನೆ ಪರ್ಚೆಸ್ ಮಾಡುವ ಹಾಗಿಲ್ಲ ತೆಗೆದು ಕೊಳ್ಳೋದಕ್ಕೆ ಕೂಡ ನಿಮಗೆ ಅರ್ಹತೆ ಇದ್ಯಾ ಅಂತ ಅಂಗಡಿಯವರು  ಪರಿಶೀಲನೆ ಮಾಡ್ತಾರೆ.

ಇದನ್ನೂ ಓದಿ: ದಿನೆದಿನೇ ತಾರಕಕ್ಕೇರುತ್ತಿದೆ ಕಿಚ್ಚ ವರ್ಸಸ್‌ ಕುಮಾರ್‌ ಕಾಳಗ

ಜೊತೆಗೆ ನಿಮ್ಮ ಬಳಿ ಆಧಾರ್ ಇಲ್ಲ ಪ್ಯಾನ್ ಕಾರ್ಡ್  ಜೊತೆಗೆ ಅಡ್ರೆಸ್ ಪ್ರೂಫ್ ಕಡ್ಡಾಯ ಆಗಿ ಇರಬೇಕು... ಇಷ್ಟೆಲ್ಲಾ ದಾಖಲೆ ಇದ್ರೆ ಮಾತ್ರ ಹೆಬ್ಬಾವು ಕೊಳ್ಳಬಹುದುಇಲ್ಲಿ 35 ಸಾವಿರದಿಂದ 12 ಲಕ್ಷದವರೆಗೆ ಪೈಥಾನ್ ಗೆ ಸಿಕ್ಕಪಟ್ಟೆ ಬೇಡಿಕೆ ಇದೆ.. ಇದ್ರ ಜೊತೆಗೆ ಆಮೆಗಳನ್ನು ಕೂಡ ಸಾಕಿದ್ರೆ ಮನೆಗೆ ಒಳ್ಳೆಯದಾಗುತ್ತೆ ಅಂತ ಜನ ಸಾಕಲು ಶುರು ಮಾಡಿದ್ದಾರಂತೆ.. ಒಟ್ಟಿನಲ್ಲಿ ಪೆಟ್ಸ್ ಅಂದ್ರೆ ನಾಯಿ ಬೆಕ್ಕು ನೆನಪಾಗೋ ಕಾಲ ಹೋಗಿ ಇನ್ಮುಂದೆ ಹೆಬ್ಬಾವು ಆಮೆ ನೆನಪಾಗುತ್ತೆ ಅನ್ನೋ ಅನುಮಾನ ಶುರುವಾಗಿರೋದು ಸತ್ಯ..

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News