ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ, ಬೆಳೆ ಪರಿಸ್ಥಿತಿ ವರದಿ ಸಲ್ಲಿಕೆಗೆ ಸೂಚನೆ

ರಾಜ್ಯಾದ್ಯಂತ ಮಳೆ ಕೊರತೆ ಹಿನ್ನಲೆಯಲ್ಲಿ ಬರ ಘೋಷಣೆಗೆ ಪೂರಕವಾಗಿ ಅಗತ್ಯವಿರುವ  ಬೆಳೆ ಪರಿಸ್ಥಿತಿ ವಾಸ್ತವ ವರದಿಯನ್ನು (ಗ್ರೌಂಡ್ ಟ್ರುಥ್ ವೆರಿಫಿಕೇಷನ್ ರಿಪೋ) ಮಾಸಂತ್ಯದ ಒಳಗೆ ಒದಗಿಸುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.

Written by - Prashobh Devanahalli | Edited by - Manjunath N | Last Updated : Aug 25, 2023, 05:38 PM IST
  • ರಾಜ್ಯದ 29 ಜಿಲ್ಲೆಗಳಲ್ಲಿ ಆಗಷ್ಟ್ ನಲ್ಲಿ ತೀವೃ ಮಳೆ ಕೊರತೆ ಉಂಟಾಗಿದ್ದುಸತತ ಮೂರು ವಾರ ಮಳೆ ಬಿದ್ದಿಲ್ಲ.
  • ಅಲ್ಲದೆ ಬಾಗಲಕೋಟೆ ,ಗದಗ ತುಮಕೂರು ಬೆಳಗಾವಿ ಸೇರಿ ದಂತೆ ಒಟ್ಟು 4 ಜಿಲ್ಲೆಗಳ 194 ಗ್ರಾಮಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ
  • ಹಾಗಾಗಿ 35209 ರೈತರಿಗೆ 35 ಕೋಟಿ ಬೆಳೆ ವಿಮೆಯನ್ನು ಶೀಘ್ರವಾಗಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚನೆ ನೀಡಿದರು
ರಾಜ್ಯಾದ್ಯಂತ ಮಳೆ ಕೊರತೆ ಹಿನ್ನೆಲೆ, ಬೆಳೆ ಪರಿಸ್ಥಿತಿ ವರದಿ ಸಲ್ಲಿಕೆಗೆ ಸೂಚನೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ಮಳೆ ಕೊರತೆ ಹಿನ್ನಲೆಯಲ್ಲಿ ಬರ ಘೋಷಣೆಗೆ ಪೂರಕವಾಗಿ ಅಗತ್ಯವಿರುವ  ಬೆಳೆ ಪರಿಸ್ಥಿತಿ ವಾಸ್ತವ ವರದಿಯನ್ನು (ಗ್ರೌಂಡ್ ಟ್ರುಥ್ ವೆರಿಫಿಕೇಷನ್ ರಿಪೋ) ಮಾಸಂತ್ಯದ ಒಳಗೆ ಒದಗಿಸುವಂತೆ ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ  ನಡೆಸಿದ ಸಚಿವರು  ತೀವ್ರ ಸ್ವರೂಪದ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ತಾಲ್ಲೂಕುಗಳಲ್ಲಿ ಕೂಡಲೇ ಆಯ್ದ ಗ್ರಾಮಗಳ ಬೆಳೆ ಪರಿಸ್ಥಿತಿ ನೈಜ ವರದಿ   ಪಡೆದು ಕ್ರೋಢೀಕರಿಸಿ ತಕ್ಷಣ ಸಲ್ಲಿಸುವಂತೆ ಸೂಚಿಸಿದರು.ಬರ ಪರಿಸ್ಥಿತಿ ಇರುವುದರಿಂದ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂರದೇ ರೈತರ ಜಮೀನಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿ ಸಲಹೆ, ಸಹಕಾರ ನೀಡವುದರ ಜೊತೆಗೆ  ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವಂತೆ ಕೆಳಹಂತದ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡುವಂತೆ ಅವರು ತಿಳಿಸಿದರು.

ಇದನ್ನೂ ಓದಿ: ರಾಜ್ಯದೆಲ್ಲೆಡೆ ಅದ್ದೂರಿ ವರ ಮಹಾಲಕ್ಷ್ಮೀ ಹಬ್ಬ ಆಚರಣೆ

ನಿಯೋಜಿತ  ನೋಡಲ್ ಅಧಿಕಾರಿಗಳು  ಆಗಿಂದಾಗ್ಗೆ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ,ಇಲಾಖಾ‌ ಯೋಜನೆಗಳ. ಅನುಷ್ಠಾನದ ಬಗ್ಗೆ  ಪರಿಶೀಲನೆ  ಕೆಳಹಂತದ ಅಧಿಕಾರಿಗಳಿಗೆ  ಸಲಹೆ ಸೂಚನೆ ನೀಡಿವಂತೆ ಹಾಗೂ ಕೈಗೊಂಡ ಕೆಲಸದ ಬಗ್ಗೆ  ಕಾಲಕಾಲಕ್ಕೆ  ತಮಗೆ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜ್ಯದ 29 ಜಿಲ್ಲೆಗಳಲ್ಲಿ  ಆಗಷ್ಟ್ ನಲ್ಲಿ ತೀವೃ ಮಳೆ ಕೊರತೆ ಉಂಟಾಗಿದ್ದುಸತತ ಮೂರು ವಾರ ಮಳೆ ಬಿದ್ದಿಲ್ಲ. ಅಲ್ಲದೆ ಬಾಗಲಕೋಟೆ ,ಗದಗ ತುಮಕೂರು ಬೆಳಗಾವಿ ಸೇರಿ ದಂತೆ ಒಟ್ಟು 4 ಜಿಲ್ಲೆಗಳ  194 ಗ್ರಾಮಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ ಹಾಗಾಗಿ  35209 ರೈತರಿಗೆ  35 ಕೋಟಿ ಬೆಳೆ ವಿಮೆಯನ್ನು ಶೀಘ್ರವಾಗಿ  ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು  ಸೂಚನೆ ನೀಡಿದರು.ಮುಂದಿನ ವಾರದಿಂದ  ತಾವು ಜಿಲ್ಲೆಗಳ ಭೇಟಿ ,ಬೆಳೆ ಪರಿಸ್ಥಿತಿ ಪರಿಶೀಲನೆ,ಅಧಿಕಾರಿಗಳೊಂದಿಗೆ ಸಭೆ ,ವಿಡಿಯೋ ‌ಸಂವಾದದ ನಡೆಸಿ ಪರಿಸ್ಥಿತಿ ಅವಲೋಕಿಸಿ ಮೇಲ್ವಿಚಾರಣೆ ‌ಮಾಡುವುದಾಗಿ ತಿಳಿಸಿದ ಸಚಿವರು ಹಿರಿಯ ಅಧಿಕಾರಿಗಳೂ ಜಿಲ್ಲೆಗಳಿಗೆ ಭೇಟಿ ನೀಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಅನಧಿಕೃತ ಒಎಪ್‌ಸಿ ಕೇಬಲ್ ತೆರವಿಗೆ ಬೆಸ್ಕಾಂ ಕಟ್ಟು ನಿಟ್ಟಿನ ಕ್ರಮ !

ಈ ವರ್ಷ 16 ಲಕ್ಷ ರೈತರು ವಿಮೆಗೆ ನೊಂದಣಿ ಮಾಡಿದ್ದಾರೆ.ಈ ಬಾರಿ ವಿಮೆ ನೊಂದಣಿ  ಪ್ರಾರಂಭ ತಡವಾದ ಕಾರಣ ಹಾಗೂ ಮಳೆ ಇಲ್ಲದೆ ಬಿತ್ತನೆ ವಿಳಂಬವಾದ ಕಾರಣ  ವಿಮೆ ನೊಂದಣಿ ಕಡಿಮೆಯಾಗಿದೆ ಅದರೆ ಎಲ್ಲಾ ನೋಂದಾಯಿತ ರೈತರಿಗೆ ವಿಮೆ ಕ್ಲೈಮ್ ಸಿಗುವಂತೆ ನೊಡಿಕೊಳ್ಳಿ‌ ಎಂದು ಚಲುವರಾಯಸ್ವಾಮಿ ಹೇಳಿದರು.ರೈತರಿಗೆ ನ್ಯಾನೋ ಯೂರಿಯಾ ,ನ್ಯಾನೋ ಡಿ.ಎ.ಪಿ ಬಳಕೆ ಹೆಚ್ಚು ಲಾಭದಾಯಕವಾಗಿರಿವುದರಿಂದ ಒಂದೆರೆಡು ವರ್ಷ ಬೆಳೆಗಳ ಪ್ರಯೋಗ ಮಾಡಿ, ಕೃಷಿ ವಿಶ್ವ ವಿದ್ಯಾನಿಲಯ ಹಂತದಲ್ಲಿಯೂ ಪರೀಕ್ಷೆ ಮಾಡಿ ಫಲಿತಾಂಶ ನೋಡಿದ ಪೂರಕವಾಗಿದ್ದರೆ ನ್ಯಾನೋ ಯೂರಿಯ ಬಳಕೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕ್ರಮ ವಹಿಸಿ ಎಂದು ಸಚಿವರು ಹೇಳಿದರು.

ಅಂತರ್ಜಲ ವೃದ್ದಿ ,ನೀರಿನ‌ ಸಂಗ್ರಹ  ಮಾಡಿ,  ಇಂಗಿಸು ಪ್ರಕ್ರಿಯೆ ನಡೆಸಲು ಕೃಷಿ ಭಾಗ್ಯ ಯೋಜನೆಯಡಿ  ಹೆಚ್ಚಿನ ಕೃಷಿ ಹೊಂಡಗಳ ನಿರ್ಮಾಣ ಮಾಡಬೇಕಿದೆ. ಕೇಂದ್ರ ಪುರಸ್ಕೃತ ಯೋಜನೆಗಳು‌ ಹಾಗೂ ಇತರ ಯೋಜನೆಗಳನ್ನು ಸಂಯೋಜಿಸಿ ಇದನ್ನು ಪರಿಣಾಮಕಾರಿಯಾಗಿ ಇದನ್ನು ಅನುಷ್ಠಾನ ಗೊಳಿಸಿ‌ ಎಂದು ಸಚಿವರು ತಿಳಿಸಿದರು.

ನವೋದ್ಯಮ ಯೋಜನೆಯಡಿ  300 ಹಾರ್ವೆಸ್ಟರ್ ಹಬ್ ಸ್ಥಾಪಿಸಲು ನಿರ್ಧರಿಸಲಾಗಿದೆ ಈ ಸಾಲಿನಲ್ಲಿ 100 ಹಬ್ ಗಳನ್ನು ಬೇಗ ಪ್ರಾರಂಭಿಸಿ ರೈತರ ಬಳಕೆಗೆ ಅವಕಾಶ ಕಲ್ಪಿಸಿ ಎಂದು ಚಲುವರಾಯಸ್ವಾಮಿ ಹೇಳಿದರು.ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸಭೆಯಲ್ಲಿ ಬರ ನಿರ್ವಹಣೆ ಹಾಗೂ ಕೃಷಿ ಇಲಾಖೆ ಯೋಜನೆಗಳ ಅನುಷ್ಠಾನದ ಬಗ್ಗೆ ಹಲವು ಸಲಹೆ ಸೂಚನೆಗಳನ್ನು ನೀಡಿದರು.

ಕೃಷಿ ಉತ್ಪಾದಕರ ಸಂಘಗಳ ಬಲವರ್ಧನೆ, ವಿಸ್ತರಣೆ, ಅವರ ಉತ್ಪನ್ನಗಳ ಮೌಲ್ಯವರ್ಧನೆಗೆ ಅನುಸರಿದಬೇಕಾಗ ಕ್ರಮಗಳ ಬಗ್ಗೆ ಸಚಿವರ ಗಮನ ಸೇಳೆದ ಕಾರ್ಯದರ್ಶಿಯವರು, ಇದರಲ್ಲಿ ತಳಮಟ್ಟದ ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದರು.ಕೃಷಿ ಯಾಂತ್ರಿಕರಣ, ವಿಸ್ತರಣೆ ಜೊತೆಗೆ ಸಹಕಾರಿ ಬೇಸಾಯ ಪದ್ಧತಿ, ಕೃಷಿ ನವೋದ್ಯಮ, ಹಾಗೂ ಕೃಷಿ ಭಾಗ್ಯ ಯೋಜನೆ ಪರಿಣಾಮಕಾರಿ ಅನುಷ್ಟಾನದ ಬಗ್ಗೆ ಅವರು ಸಲಹೆಗಳನ್ನು ನೀಡಿದರು.

ಇಲಾಖೆಯ ಆಯುಕ್ತರಾದ ವೈ.ಎಸ್.ಪಾಟೀಲ್ ರವರು ಇಲಾಖೆಯ ಹವಾಮಾನ, ಮಳೆ,ಬೆಳೆ ಪರಿಸ್ಥಿತಿ, ಇಲಾಖೆ ಯೋಜನೆಗಳ ಅನುಷ್ಠಾನ ಬಗೆಗಿನ ವಿವರಗಳನ್ನು ಸಭೆಗೆ ಮಂಡಿಸಿದರು.ಕೃಷಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಇಲಾಖೆ ನಿರ್ದೇಶಕರಾದ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ ಗಿರೀಶ್, ನಿರ್ದೇಶಕ ಶ್ರೀನಿವಾಸ್, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜು ಸೇರಿದಂತೆ ಇತರ ಹಿರಿಯ ಅಧಿಕಾರಿಗಳು  ಭಾಗವಹಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News