ಅಂದು ಆಂಕರ್‌.. ಇಂದು ಪ್ರಸಿದ್ಧ ನಟಿ :‌ ಕೋಟಿ ಕೋಟಿ ಸಂಪಾದಿಸುವ ಇವರು ಯಾರು ಬಲ್ಲಿರಾ?

Nayanathara Old Video : ನಯನತಾರಾ ಯಾರೆಂಬ ಪರಿಚಯದ ಅಗತ್ಯವಿಲ್ಲ. ಜವಾನ್ ಚಿತ್ರದಲ್ಲಿ ಶಾರುಖ್‌ ಖಾನ್‌ ಜೊತೆ ನಟಿಸಿ ಎಲ್ಲರ ಮನಗೆದ್ದಿದ್ದಾರೆ. ಹಳೆಯ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವರನ್ನು ಗುರುತಿಸುವುದೇ ಕಷ್ಟವಾಗಿದೆ.

Written by - Chetana Devarmani | Last Updated : Sep 26, 2023, 06:20 PM IST
  • ದಕ್ಷಿಣ ನಟಿ ನಯನತಾರಾ ತಮ್ಮ ವೃತ್ತಿಜೀವನವನ್ನು ಟಿವಿ ನಿರೂಪಕಿಯಾಗಿ ಪ್ರಾರಂಭಿಸಿದರು.
  • ಆ ದಿನಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
  • ಈ ವಿಡಿಯೋದಲ್ಲಿ ನಯನತಾರಾ ಗುರುತಿಸುವುದು ಕಷ್ಟ, ಅವರು ವಿಭಿನ್ನವಾಗಿ ಕಾಣುತ್ತಿದ್ದರು.
ಅಂದು ಆಂಕರ್‌.. ಇಂದು ಪ್ರಸಿದ್ಧ ನಟಿ :‌ ಕೋಟಿ ಕೋಟಿ ಸಂಪಾದಿಸುವ ಇವರು ಯಾರು ಬಲ್ಲಿರಾ?   title=

Nayanathara Anchoring Video : ನಟಿ ನಯನತಾರಾ 'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಕಾಣಿಸಿಕೊಂಡಿದ್ದರು. ಇವರು ಸೌತ್ ಫಿಲ್ಮ್ ಇಂಡಸ್ಟ್ರಿಯ ಖ್ಯಾತ ನಟಿ. ಆದರೆ ಅವರು ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ದಿನಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅದನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಂದಿಗೂ ಇಂದಿಗೂ ನಯನತಾರಾ ನಡುವೆ ಅಜಗಜಾಂತರ ವ್ಯತ್ಯಾಸವಿದೆ. 

 

 
 
 
 

 
 
 
 
 
 
 
 
 
 
 

A post shared by Entertainment Say (@entertainmentsay)

 

ಈ ವಿಡಿಯೋದಲ್ಲಿ ನಯನತಾರಾ ಟಿವಿ ಆ್ಯಂಕರ್ ಆಗಿ ಕಾಣಿಸಿಕೊಂಡಿದ್ದಾರೆ. ಟಿವಿಯಲ್ಲಿ ಅಭಿಮಾನಿಗಳಿಗಾಗಿ ಮಲಯಾಳಂ ಭಾಷೆಯಲ್ಲಿ ಸುದ್ದಿ ಓದುತ್ತಿರುವ ವಿಡಿಯೋ ವೈರಲ್‌ ಆಗುತ್ತಿದೆ. ನ ಟಿ  ನಯನತಾರಾ ಈ ಹಳೆಯ ವಿಡಿಯೋ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ. ಏಕೆಂದರೆ ಕಳೆದ ಕೆಲವು ವರ್ಷಗಳಲ್ಲಿ ಅವರ ಲುಕ್‌ ಸಾಕಷ್ಟು ಬದಲಾಗಿದೆ.

ಇದನ್ನೂ ಓದಿ : ‘ರಕ್ತಾಕ್ಷ’ ಸಿನಿಮಾದ ಬೆಂಕಿ ಹಾಡಿಗೆ ನೀವು ಸೊಂಟ ಕುಣಿಸೋದು ಪಕ್ಕಾ ಕಣ್ರೀ...! 

ನಯನತಾರಾ ಅವರ ಈ ವಿಡಿಯೋ ನೋಡಿದ ಮೇಲೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಣವು ಎಲ್ಲವನ್ನೂ ಬದಲಾಯಿಸುತ್ತದೆ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಒಬ್ಬ ಸಾಮಾನ್ಯ ಆಂಕರ್‌ನಿಂದ ಹಿಡಿದು ಅಸಾಧಾರಣ ಮಿಲಿಯನೇರ್ ನಟಿಯವರೆಗೆ ಸಮಯವು ಒಬ್ಬ ವ್ಯಕ್ತಿಗೆ ಏನು ಮಾಡುತ್ತದೆ ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. 

'ಜವಾನ್' ಚಿತ್ರದಲ್ಲಿ ಶಾರುಖ್ ಖಾನ್ ಅವರೊಂದಿಗೆ ತೆರೆ ಹಂಚಿಕೊಂಡ ನಂತರ, ಮುಂಬರುವ ಸೈಕೋ-ಥ್ರಿಲ್ಲರ್ ಇರೈವನ್ ನಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ. ಅವರು 16 ವರ್ಷಗಳ ನಂತರ ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ಹೊರಟಿದ್ದಾರೆ. ವರದಿಗಳ ಪ್ರಕಾರ, ಕಣ್ಣಪ್ಪ ಚಿತ್ರದಲ್ಲಿ ಪ್ರಭಾಸ್ ಶಿವನ ಪಾತ್ರದಲ್ಲಿ ಮತ್ತು ನಯನತಾರಾ ಪಾರ್ವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಪ್ರಭಾಸ್ ಮುಂದಿನ ಸಿನಿಮಾದಲ್ಲಿ ಶ್ರೀಲೀಲಾ! ಕಥೆ ಇದೇನಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News