ದಿನಭವಿಷ್ಯ : 19 ಡಿಸೆಂಬರ್ 2023ರ ಮಂಗಳವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯ ಜನರ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿ:
ಮೇಷ ರಾಶಿಯವರಿಗೆ ಇಂದು ಆತ್ಮಾವಲೋಕನಕ್ಕೆ ಸೂಕ್ತ ದಿನ. ನಿಮ್ಮ ವೈಯಕ್ತಿಕ ಬೆಳವಣಿಗೆಗಾಗಿ ಸಮಯ ಮೀಸಲಿಡಿ. ಇದರಿಂದ ಕೌಶಲ್ಯ ವೃದ್ಧಿಯಾಗುವುದರ ಜೊತೆಗೆ ಹಣಕಾಸಿನ ಫಲವನ್ನೂ ನಿರೀಕ್ಷಿಸಬಹುದು.
ವೃಷಭ ರಾಶಿ:
ವೃಷಭ ರಾಶಿಯವರಿಗೆ ದೀರ್ಘ ಸಮಯದಿಂದ ಬಾಧಿಸುತ್ತಿದ್ದ ಸವಾಲುಗಳಿಂದ ಮುಕ್ತಿ ದೊರೆಯಲಿದೆ. ನಿಮ್ಮ ಸ್ಪರ್ಧಾತ್ಮಕ ಮನೋಭಾವವು ಚೈತನ್ಯವನ್ನು ತುಂಬಲಿದೆ. ಆದಾಗ್ಯೂ, ಸಂಭಾವ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದಿರಿ.
ಮಿಥುನ ರಾಶಿ:
ಮಿಥುನ ರಾಶಿಯವರು ನಿಮ್ಮ ಗುರಿ ಮುಟ್ಟಲು ದೃಢಸಂಕಲ್ಪದೊಂದಿಗೆ ಮುಂದುವರೆಯಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭ ನಿರೀಕ್ಷೆ ಇದೆ. ಆದಾಗ್ಯೂ, ನಿಮ್ಮ ಸುತ್ತಲೂ ಇರುವ ಹಿತ ಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರಿಗೆ ಸ್ಪಷ್ಟ ಪ್ರತಿಫಲದೊಂದಿಗೆ ನಿಮ್ಮ ವೃತ್ತಿಪರ ಶ್ರೇಷ್ಠತೆಯು ನಿಮಗಾಗಿ ಕಾಯುತ್ತಿದೆ. ಇಂದು ಬುದ್ದಿವಂತಿಕೆಯಿಂದ ಮಾಡಿದ ಯಾವುದೇ ಕೆಲಸ ಕಾರ್ಯಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ- Shani Gochar: 2024ರಲ್ಲಿ ಮೂರು ಬಾರಿ ಪಥ ಬದಲಿಸಲಿರುವ ಶನಿ, ಈ ರಾಶಿಯವರಿಗೆ ಸುವರ್ಣ ಯುಗ
ಸಿಂಹ ರಾಶಿ:
ಸಿಂಹ ರಾಶಿಯವರೇ ನಿಮ್ಮ ಕನಸನ್ನು ಸಾಕಾರಗೊಳಿಸುವತ್ತ ಗಮನಹರಿಸಿ. ನಿಮ್ಮ ಪ್ರತಿಭೆಗೆ ಗೌರವ, ಮನ್ನಣೆ ಸಿಗಲಿದೆ. ಇದು ಆದಾಯವನ್ನೂ ಹೆಚ್ಚಿಸಲಿದ್ದು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ಇಂದು ನಿಮ್ಮ ಪ್ರೀತಿ ಪಾತ್ರರ ಮಾತು ಮನಸ್ಸಿಗೆ ನೋವುಂಟು ಮಾಡಬಹುದು. ಆದಾಗ್ಯೂ, ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ, ದೃಢವಾಗಿರಿ. ಯಾವುದೇ ನಕಾರಾತ್ಮಕ ಮಾತುಗಳಿಗೆ ಕಿವಿಗೊಡಬೇಡಿ.
ತುಲಾ ರಾಶಿ:
ತುಲಾ ರಾಶಿಯವರಿಗೆ ಇಂದು ನಿರೀಕ್ಷೆಯಂತೆ ಕೆಲಸಕಾರ್ಯಗಳು ನಡೆಯದೆ ಇರಬಹುದು. ಆದರೆ, ಹತಾಶರಾಗಬೇಡಿ. ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಅಗತ್ಯವಾಗಿರುವುದನ್ನು ಮಾಡಲು ಹಿಂಜರಿಯಬೇಡಿ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಇಂದು ಸ್ನೇಹಿತರು, ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಆದಾಗ್ಯೂ, ಕ್ಷುಲ್ಲಕ ವಿಷಯಗಳಿಗೆ ಒತ್ತಡ ತೆಗೆದುಕೊಳ್ಳುವುದನ್ನು ತಪ್ಪಿಸಿ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳಿ.
ಇದನ್ನೂ ಓದಿ- Budh Asta: ಧನು ರಾಶಿಯಲ್ಲಿ ಬುಧ ಅಸ್ತ- ಯಾವ ರಾಶಿಯವರಿಗೆ ಏನು ಫಲ
ಧನು ರಾಶಿ:
ಧನು ರಾಶಿಯವರಿಗೆ ಇಂದು ನಿಮ್ಮ ಆಪ್ತರೊಂದಿಗೆ ತಪ್ಪು ತಿಳುವಳಿಕೆಯು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಇದು ಉದ್ವಿಗ್ನತೆಗೂ ಕಾರಣವಾಗಬಹುದು. ಸಾಧ್ಯವಾದಷ್ಟು ಕೋಪದ ಕೈಗೆ ಬುದ್ದಿ ನೀಡುವುದನ್ನು ತಪ್ಪಿಸಿ.
ಮಕರ ರಾಶಿ:
ಮಕರ ರಾಶಿಯವರು ಇಂದು ನಿಮ್ಮ ಸಂಗಾತಿಯಿಂದ ಗುಡ್ ನ್ಯೂಸ್ ಪಡೆಯಲಿದ್ದೀರಿ. ಇದು ನಿಮ್ಮ ದಿನವನ್ನು ತುಂಬಾ ಖುಷಿಯಾಗಿರಿಸುತ್ತದೆ. ದೀರ್ಘಕಾಲದಿಂದ ದೂರ ಸರಿದಿದ್ದ ಸ್ನೇಹಿತರು, ಸಂಬಂಧಿಕರು ಇಂದು ಮತ್ತೆ ನಿಮ್ಮನ್ನು ಸಂಪರ್ಕಿಸಬಹುದು.
ಕುಂಭ ರಾಶಿ:
ಕುಂಭ ರಾಶಿಯವರಿಗೆ ಇಂದು ಆರ್ಥಿಕವಾಗಿ ತುಂಬಾ ಶುಭದಿಂದ. ನಿಮ್ಮ ಆಲೋಚನೆ ಮತ್ತು ನಡವಳಿಕೆಯಲ್ಲಿನ ಬದಲಾವಣೆಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಧ್ಯವಾದಷ್ಟು ಯಾರನ್ನೂ ಭಾವನಾತ್ಮಕವಾಗಿ ಹೆಚ್ಚು ಹಚ್ಚಿಕೊಳ್ಳಬೇಡಿ.
ಮೀನ ರಾಶಿ:
ಮೀನ ರಾಶಿಯವರು ಕೆಲಸದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದರಿಂದ ಉತ್ತಮ ಫಲವನ್ನು ನಿರೀಕ್ಷಿಸಬಹುದು. ದಿನದ ಅಂತ್ಯದ ವೇಳೆಗೆ ಕುಟುಂಬಸ್ಥರಿಂದ ಶುಭ ಸುದ್ದಿಯು ಮನಸ್ಸಿಗೆ ಸಂತೋಷವನ್ನು ನೀಡಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.