“ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಕಾರ್ತಿಕ್ ಬಳಿ ಸತ್ಯ ಬಾಯ್ಬಿಟ್ಟ ವಿನಯ್

Vinay Gowda on sangeetha sringeri: ದೋಸ್ತಿ ಎಂದೇ ಹೇಳಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ಕೂಡ ಸಂಗೀತಾರಿಂದ ದೂರವಾಗಿದ್ದಾರೆ. ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಈ ಹಿಂದೆ ಸಂಗೀತಾ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ತಿಳಿದ ಕಾರ್ತಿಕ್ ಬೇಸರಗೊಂಡಿದ್ದು, ಆಕೆಯ ಸಹವಾಸವೇ ಬೇಡ ಎಂದು ದೂರವಿದ್ದಾರೆ.

Written by - Bhavishya Shetty | Last Updated : Dec 19, 2023, 05:18 PM IST
    • ಬಿಗ್ ಬಾಸ್’ನಲ್ಲಿ ಅತೀ ಹೆಚ್ಚು ಕಿತ್ತಾಡಿಕೊಂಡಿರೋದು ಸಂಗೀತಾ ಮತ್ತು ವಿನಯ್ ಗೌಡ.
    • ಸಂಗೀತಾ ಕಂಡರೆ ನಾನ್ಯಾಕೆ ಉರಿದು ಬೀಳ್ತೀನಿ ಗೊತ್ತಾ?
    • ಕಾರ್ತಿಕ್ ಮುಂದೆ ಸತ್ಯ ಹೇಳಿದ ವಿನಯ್ ಗೌಡ
“ಇದೇ ಕಾರಣಕ್ಕೆ ಸಂಗೀತಾನ ನೋಡಿದ್ರೆ ನಾನು ಅಷ್ಟೊಂದು ಉರ್ಕೊಳ್ಳೋದು”- ಕಾರ್ತಿಕ್ ಬಳಿ ಸತ್ಯ ಬಾಯ್ಬಿಟ್ಟ ವಿನಯ್  title=
Vinay Gowda on sangeetha sringeri

Vinay Gowda on sangeetha sringeri: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಅತೀ ಹೆಚ್ಚು ಕಿತ್ತಾಡಿಕೊಂಡಿರೋದು ಸಂಗೀತಾ ಮತ್ತು ವಿನಯ್ ಗೌಡ. ಇವರಲ್ಲಿ ಒಬ್ಬರು ಉತ್ತರ, ಮತ್ತೊಬ್ಬರು ದಕ್ಷಿಣ. ಒಬ್ಬರಿಗೊಬ್ಬರು ತಮ್ಮ ತಪ್ಪು-ಮನಸ್ತಾಪಗಳನ್ನು ಕೂತು ಬಗೆಹರಿಸಿಕೊಳ್ಳುವ ಗೋಜಿಗೇ ಹೋಗುತ್ತಿಲ್ಲ. ಇದೇ ಕಾರಣದಿಂದೇನೋ ಇವರಿಬ್ಬರ ನಡುವೆ ಕೋಪ ದಿನೇದಿನೇ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಐಪಿಎಲ್ ಇತಿಹಾಸದ ಮೊದಲ ಮಹಿಳಾ ಹರಾಜುಗಾರ್ತಿ ಯಾರು ಗೊತ್ತಾ?

ಇದೀಗ ದೋಸ್ತಿ ಎಂದೇ ಹೇಳಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ಕೂಡ ಸಂಗೀತಾರಿಂದ ದೂರವಾಗಿದ್ದಾರೆ. ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾರೆ ಎಂದು ಈ ಹಿಂದೆ ಸಂಗೀತಾ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ತಿಳಿದ ಕಾರ್ತಿಕ್ ಬೇಸರಗೊಂಡಿದ್ದು, ಆಕೆಯ ಸಹವಾಸವೇ ಬೇಡ ಎಂದು ದೂರವಿದ್ದಾರೆ. ಇದೀಗ ದೊಡ್ಮನೆಯಲ್ಲಿ ಸಂಗೀತಾ ಒಬ್ಬಂಟಿಯಾಗುತ್ತಿದ್ದಾರೆ.

ಇದನ್ನೂ ಓದಿ: ಪೋಸ್ಟ್ ಶೇರ್ ಮಾಡಿ “ಗುಡ್ ನ್ಯೂಸ್” ಎಂದ ಅನುಷ್ಕಾ: 2ನೇ ಮಗುವಿಗೆ ತಾಯಿಯಾಗ್ತಿರೋದು ಕನ್ಫರ್ಮ್!

ಈ ಮಧ್ಯೆ ಸಂಗೀತಾ ಕಂಡರೆ ನಾನ್ಯಾಕೆ ಉರಿದು ಬೀಳ್ತೀನಿ ಗೊತ್ತಾ ಅಂತ ವಿನಯ್ ಗೌಡ ಕಾರ್ತಿಕ್ ಮುಂದೆ ಕೇಳಿದ್ದಾರೆ. “ನಾನು ಅವಳನ್ನ ಕಂಡರೆ ಯಾಕೆ ಅಷ್ಟು ಉರ್ಕೊಳ್ತೀನಿ ಅಂತ ನೀನು ಅಂದುಕೊಳ್ಳಬಹುದು. ನಮ್ಮನ್ನ ಫಾಲೋ ಮಾಡೋ ಜನರು ಇರ್ತಾರೆ. ಅಷ್ಟು ಜನರ ಮುಂದೆ ಈ ರೀತಿ ಡ್ಯಾಮೇಜಿಂಗ್ ಸ್ಟೇಟ್‌’ಮೆಂಟ್ ಕೊಟ್ರೆ ಜನರಿಗೆ ಏನು ಇವನು.. ಹೀಗೇ, ಇರಬಹುದಾ ಅಂತ ಅಂದುಕೊಳ್ಳಬಹುದು. ಅದನ್ನೆಲ್ಲಾ ನೆನಪಿಸಿಕೊಂಡ್ರೆ ಸಿಕ್ಕಾಪಟ್ಟೆ ಬೇಜಾರಾಗುತ್ತೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News