Bigg Boss Kannada Season 10 : ಬಿಗ್ ಬಾಸ್ ಕನ್ನಡ ಸೀಸನ್ 10 ದಿನ ಕಳೆದಂತೆ ಹೆಚ್ಚು ಇಂಟರೆಸ್ಟಿಂಗ್ ಆಗುತ್ತಿದೆ. ಕಠಿಣ ಸ್ಪರ್ಧೆ ಶುರುವಾಗುತ್ತಿದೆ. ತೀವ್ರ ಪೈಪೋಟಿಯ ನಡುವೆ ಅತಿ ಹೆಚ್ಚು ವೋಟ್ ಪಡೆದ ಸ್ಪರ್ಧಿ ಬಗ್ಗೆ ಕಿಚ್ಚ ಸುದೀಪ್ ವೀಕೆಂಡ್ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಇದನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಗೆಲ್ಲುವ ಸ್ಪರ್ಧಿ ಯಾರೆಂದು ಜನರು ಚರ್ಚೆ ಶುರು ಮಾಡಿದ್ದಾರೆ. ಇದೇ ವಿಚಾರವಾಗಿ ಕಳೆದ ವಾರ ಮನೆಯಲ್ಲಿ ಸ್ಪರ್ಧಿಗಳ ನಡುವೆಯೂ ಮಾತುಕತೆ ನಡೆದಿತ್ತು. ಮನೆಯ ಸ್ಪರ್ಧಿಗಳು ಯಾರ ಆಟಕ್ಕೆ ವಿರಾಮ (Pause) ನೀಡಲು ಬಯಸುವಿರಿ ಎಂದು ಬಿಗ್ ಬಾಸ್ ಕೇಳಿದ್ದರು. ಅವರ ಹೆಸರನ್ನು ಸೂಕ್ತ ಕಾರಣಗಳೊಂದಿಗೆ ಹೇಳ ಬೇಕಿತ್ತು. ಈ ವೇಳೆ ಮನೆಯ ಬಹುತೇಕ ಜನರು ವರ್ತೂರ್ ಸಂತೋಷ್ ಅವರ ಹೆಸರನ್ನೇ ಹೇಳಿದರು.
ಈ ವೇಳೆ ಕಾರ್ತಿಕ್ ಆಡಿದ ಮಾತಿಗೆ ವರ್ತೂರ್ ಅಸಮಾಧಾನಗೊಂಡರು. ಕಳಪೆ ಪಟ್ಟ ಪಡೆದು ವರ್ತೂರ್ ಜೈಲು ಸೇರಿದರು. ನಾನು ಇಲ್ಲಿ ಯಾರಿಗೂ ಕ್ಲಾರಿಟಿ ಕೊಡಬೇಕಿಲ್ಲ. ನಾನು ಇರೋದೇ ಹೀಗೆ. ಜನ ನನಗೆ ಉಳಿಸಿದ್ದಾರೆ. ಜನರ ವೋಟ್ ಮುಖ್ಯ. ಜನರಿಗೆ ನಾನು ಕ್ಲಾರಿಟಿ ಕೊಟ್ಟರೆ ಸಾಕು ಎಂದು ವರ್ತೂರ್ ಹೇಳಿದ್ದರು.
ಇದನ್ನೂ ಓದಿ : Seetha Raama : ಸೀತಾ ಪಾಲಿಗೆ ರಾಮನೇ ಶ್ರೀರಕ್ಷೆ.. ರುದ್ರಪ್ರತಾಪ್ ಜೊತೆ ಮುರಿದು ಬಿತ್ತು ಮದುವೆ!
ಇದೇ ವಿಚಾರ ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲೂ ಪ್ರಸ್ತಾಪವಾಯಿತು. ಆಗ ಕಾರ್ತಿಕ್ ಮಹೇಶ್, ಏನು ಕೇಳಿದರು ನಾನು ನಿಮಗೆ ಕ್ಲಾರಿಟಿ ಕೊಡಬೇಕಿಲ್ಲ, ಜನರಿಗೆ ಕ್ಲಾರಿಟಿ ಕೊಟ್ಟರೆ ಸಾಕು ಎನ್ನುತ್ತಾರೆ ಎಂದು ಹೇಳಿದರು.
ವರ್ತೂರ್ ಅವರ ಈ ವರ್ತನೆಯ ಬಗ್ಗೆ ಸುದೀಪ್ ಸಹ ಮಾತನಾಡಿದರು. ನಾನು ಹೇಗೆ ಆಟವಾಡಿದರು ಜನ ವೋಟ್ ಮಾಡುತ್ತಾರೆ, ಜನ ನನ್ನನ್ನು ಗೆಲ್ಲಿಸ್ತಾರೆ ಎಂಬ ಭ್ರಮೆಯಲ್ಲಿ ಇದ್ದೀರಿ ಅಂತ ಅನಿಸುತ್ತಿದೆ ಎಂದು ಸುದೀಪ್ ಹೇಳಿದರು. ಇದೇ ವೇಳೆ ಅತಿ ಹೆಚ್ಚು ವೋಟ್ ಯಾರು ಪಡೆದಿದ್ದಾರೆ ಎಂಬ ವಿಚಾರವನ್ನು ಸಹ ರಿವೀಲ್ ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಯೊಬ್ಬರು 72.83 ಲಕ್ಷ ಮತಗಳನ್ನು ತೆಗೆದುಕೊಂಡು ಸೇವ್ ಆಗಿದ್ದಾರೆ. ಆದರೆ ಈ ಮತಗಳು ಬಂದಿರುವುದು ನಿಮಗೆ ಅಲ್ಲ ಎಂದರು.
ಸುದೀಪ್ ಈ ಮಾತಿನ ಬಳಿಕ ಹಲವು ಚರ್ಚೆಗಳು ಶುರುವಾಗಿವೆ. ಬಿಗ್ ಬಾಸ್ ಸೀಸನ್ 10 ರಲ್ಲಿ ಟಾಪ್ 1 ನಲ್ಲಿ ಇರುವ ಸ್ಪರ್ಧಿ ಹೆಸರು ವೈರಲ್ ಆಗುತ್ತಿದೆ. ಬಹುತೇಕ ಜನರು ಡ್ರೋನ್ ಪ್ರತಾಪ್ ಅವರೇ ಈ ಬಾರಿ ಬಿಗ್ ಬಾಸ್ ವಿನ್ನರ್ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಈ ಬಾರಿ ವಿನಯ್ ಅಥವಾ ಕಾರ್ತಿಕ್ ಬಿಗ್ ಬಾಸ್ ಗೆಲ್ತಾರೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈ ಬಾರಿ ಗೆಲ್ಲೋದು ಲೇಡಿ ಕಂಟೆಸ್ಟಂಟ್ ಎನ್ನುತ್ತಿದ್ದು, ಸಂಗೀತಾ ಹೆಸರು ಕೇಳಿಬರುತ್ತಿದೆ.
ಇದನ್ನೂ ಓದಿ : Prabhas dinner cost: ಪ್ರಭಾಸ್ 1 ದಿನದ ಊಟಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಾರೆ ಗೊತ್ತಾ..!
ಈ ಬಾರಿ ಮೊದಲು ತುಕಾಲಿ ಸಂತೋಷ್, ಆ ನಂತರ ವಿನಯ್ ಸೇವ್ ಆಗಿದ್ದಾರೆ. ಇವರ ಜೊತೆ ಕಾರ್ತಿಕ್ ಮಹೇಶ್, ವರ್ತೂರು ಸಂತೋಷ್, ಸಂಗೀತಾ ಶೃಂಗೇರಿ, ಸಿರಿ, ಮೈಕೆಲ್, ತನಿಷಾ ಕೂಡ ನಾಮಿನೇಟ್ ಆಗಿದ್ದಾರೆ. ಅನೇಕರ ಅಂದಾಜಿನ ಪ್ರಕಾರ 72.83 ಲಕ್ಷ ಮತ ಪಡೆದ ಸ್ಪರ್ಧಿ ಸಂಗೀತಾ ಶೃಂಗೇರಿ ಎನ್ನಲಾಗುತ್ತಿದೆ. ಇವರೇ ಸದ್ಯದ ಟಾಪ್ 1 ಕಂಟೆಸ್ಟಂಟ್ ಎಂದು ಹಲವರು ಊಹಿಸುತ್ತಿದ್ದಾರೆ. ಆದರೆ ಈ ಬಗ್ಗೆ ಬಿಗ್ ಬಾಸ್ ತಂಡವಾಗಲಿ, ಸುದೀಪ್ ಆಗಲಿ ಯಾರ ಹೆಸರನ್ನು ಬಹಿರಂಗ ಪಡಿಸಿಲ್ಲ. ಹೀಗಾಗಿ ಈ ಸ್ಪರ್ಧಿ ಯಾರೆಂಬ ಕುತೂಹಲ ಹೆಚ್ಚಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.