Good News: ಹಿಟ್ಟು-ಅಕ್ಕಿ ಬಳಿಕ ಇದೀಗ ಮೋದಿ ಸರ್ಕಾರದ ವತಿಯಿಂದ ಅಗ್ಗದ 'ಭಾರತ್ ಮಸೂರಿ ಬೇಳೆ' ಮಾರಾಟ!

Cheapest Masoor Dal: ಅಗ್ಗದ ಅಕ್ಕಿ ಮತ್ತು ಹಿಟ್ಟು ಮಾರಾಟದ ಬಳಿಕ ಇದೀಗ ಕೇಂದ್ರ ಸರ್ಕಾರ ಅಗ್ಗದ ದರದಲ್ಲಿ ಭಾರತ್ ಬ್ರಾಂಡ್ ಅಡಿ ಮಸೂರಿ ಬೇಳೆ ಮಾರಾಟ ನಡೆಸಲು ನಿರ್ಧರಿಸಿದೆ. NAFED ಮತ್ತು NCCF ಮೂಲಕ ಈ ಮಾರಾಟ ಮಾಡಲಾಗುವುದು. ಕೇಂದ್ರೀಯ ಭಾಂಡಾರ ಮತ್ತು ಸಫಲ್‌ನ ಚಿಲ್ಲರೆ ಅಂಗಡಿಗಳ ಮೂಲಕ ಬೇಳೆಕಾಳುಗಳನ್ನು ಸರ್ಕಾರ ಮಾರಾಟ ಮಾಡುವ ನಿರೀಕ್ಷೆಯಿದೆ. Business News In Kannada  

Written by - Nitin Tabib | Last Updated : Mar 1, 2024, 02:10 PM IST
  • ಸರ್ಕಾರವು ಯಾವುದೇ ರಿಯಾಯಿತಿ ಇಲ್ಲದೆ ಮಸೂರಿ ದಾಲ್ ಅನ್ನು ಕೆಜಿಗೆ 89 ರೂ ದರದಲ್ಲಿ ಮಾರಾಟ ಮಾಡಲಿದೆ.
  • ಹಣದುಬ್ಬರ ದರ ಇಳಿಕೆಯಾಗಿದ್ದರೂ, ಸರ್ಕಾರಿ ದಾಸ್ತಾನಿನಲ್ಲಿ ಅಪಾರ ಪ್ರಮಾಣದ
  • ಉದ್ದಿನಬೇಳೆ ಬೆಲೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Good News: ಹಿಟ್ಟು-ಅಕ್ಕಿ ಬಳಿಕ ಇದೀಗ ಮೋದಿ ಸರ್ಕಾರದ ವತಿಯಿಂದ ಅಗ್ಗದ 'ಭಾರತ್ ಮಸೂರಿ ಬೇಳೆ' ಮಾರಾಟ! title=

Cheapest Maroor Dal Sale: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ  ಹಣದುಬ್ಬರದ ನಿಯಂತ್ರಣಕ್ಕೆ ತರಲು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ, ಬೇಳೆಕಾಳುಗಳ ಬೆಲೆಗಳು ಈ ವರ್ಷ ದಾಖಲೆ ಮಟ್ಟಕ್ಕೆ ಏರಿಕೆ ಕಂಡಿವೆ. ಇದನ್ನು ನಿಯಂತ್ರಣಕ್ಕೆ ತರಲು ಸರ್ಕಾರ ಮೊದಲು, ಬೇಳೆ, ಗೋಧಿ ಹಿಟ್ಟು ಮತ್ತು ಅಕ್ಕಿಯನ್ನು ಭಾರತ್ ಬ್ರಾಂಡ್ ಅಡಿ ಬಿಡುಗಡೆ ಮಾಡಿತ್ತು, ಇದೀಗ ಸರ್ಕಾರ ಅದೇ ಬ್ರಾಂಡ್ ಅಡಿ ಅಗ್ಗದ ದರದಲ್ಲಿ 'ಭಾರತ್ ಮಸೂರಿ ಬೇಳೆ'ಯನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಚುನಾವಣಾ ವರ್ಷದಲ್ಲಿ ಸರ್ಕಾರ ಈ ಉಡುಗೊರೆ ನೀಡುವ ಉದ್ದೇಶ ಜನಸಾಮಾನ್ಯರಿಗೆ ಪರಿಹಾರ ನೀಡುವುದಾಗಿದ್ದು, ಇದು ಹಣದುಬ್ಬರಕ್ಕೂ ಕೂಡ ಕಡಿವಾಣ ಹಾಕಲಿದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಬ್ರಾಂಡೆಡ್ ತೊಗರಿ ಬೇಳೆ ಬೆಲೆ 125 ರೂ. ಆಗಿದ್ದು, ಅದಕ್ಕೆ ಪರ್ಯಾಯವಾಗಿ ಬಳಸಲಾಗುವ ಮಸೂರಿ ಬೇಳೆಯ ಅಖಿಲ ಭಾರತ ಸರಾಸರಿ ಚಿಲ್ಲರೆ ದರ ಕೆಜಿಗೆ 93.5 ರೂ.ಆಗಿದೆ. ಆದರೆ ಭಾರತ ಸರ್ಕಾರವು ತೊಗರಿ ಬೇಳೆಯನ್ನು ಕೆಜಿಗೆ 89 ರೂ.ನಂತೆ ಮಾರಾಟ ಮಾಡುತ್ತಿದೆ. ಮಾರ್ಚ್ ಮೊದಲ ವಾರದಿಂದ ಬೇಳೆಕಾಳುಗಳ ಮಾರಾಟ ಆರಂಭವಾಗುವ ನಿರೀಕ್ಷೆಯಿದೆ.Business News In Kannada

ಬೇಳೆಕಾಳುಗಳನ್ನು 'ಭಾರತ್ ಮಸೂರಿ ಬೇಳೆ' ಬ್ರ್ಯಾಂಡ್ ಅಡಿಯಲ್ಲಿ ಮಾರಾಟ ಮಾಡಲಾಗುವುದು.
ಭಾರತ್ ಹಿಟ್ಟು, ಭಾರತ್ ಅಕ್ಕಿ ಮತ್ತು ಭಾರತ್ ದಾಲ್ ಬಳಿಕ ಭಾರತ್ ಮಸೂಲ್ ದಾಲ್ ಅನ್ನು ಸಹ ಮಾರಾಟ ಮಾಡಲು ಸರ್ಕಾರ ಸಂಪೂರ್ಣ ಸಿದ್ಧತೆ ನಡೆಸಿದೆ. ಸರ್ಕಾರದ ಈ ಯೋಜನೆಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವ ಅಧಿಕಾರಿಯೊಬ್ಬರು, ಮೊದಲ ಹಂತದಲ್ಲಿ 25,000 ಟನ್ ಬೇಳೆಕಾಳುಗಳ ಸಂಸ್ಕರಣೆ ಮತ್ತು ಪ್ಯಾಕಿಂಗ್ ಅನ್ನು ನಾಫೇಡ್ ರಾಷ್ಟ್ರೀಯ ಕೃಷಿ ಸಹಕಾರಿ ಮಾರ್ಕೆಟಿಂಗ್ ನಾಫೇಡ್ ಮತ್ತು ಎನ್ಸಿಸಿಎಫ್ ಮಾಡಲಿದೆ ಎಂದು ಅವರು ಹೇಳಿದ್ದಾರೆ. ಇದಾದ ಬಳಿಕ ಕೇಂದ್ರ ಮಳಿಗೆಗಳ ಮೂಲಕ ದೇಶದಾದ್ಯಂತ ಬೇಳೆಕಾಳುಗಳನ್ನು ವಿತರಿಸಲಾಗುವುದು. ಚನಾ ದಾಲ್‌ನಂತೆ ಭಾರತ್ ಮಸೂರ್ ದಾಲ್ ಕೂಡ ಒಂದು ಕೆಜಿ ಪ್ಯಾಕ್‌ಗಳಲ್ಲಿ ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಅಗ್ಗದ ಬೇಳೆಕಾಳುಗಳು ಮತ್ತು ಅಕ್ಕಿಯ ಉಡುಗೊರೆ
ಹಣದುಬ್ಬರವನ್ನು ನಿಯಂತ್ರಿಸಲು, ಸರ್ಕಾರವು ಅಗ್ಗದ ಹಿಟ್ಟು, ಅಕ್ಕಿ ಮತ್ತು ಕಾಳುಗಳನ್ನು ಉಡುಗೊರೆಯಾಗಿ ನೀಡಿದೆ. ಜುಲೈ 2023 ರಲ್ಲಿ ಬೇಳೆಕಾಳುಗಳ ಬೆಲೆ ಗಗನಾಮುಖಿಯಾಗಿದ್ದವು. ಇದರ ನಂತರ, ಕೇಂದ್ರದ ಮೋದಿ ಸರ್ಕಾರವು ಜುಲೈ 17, 2023 ರಿಂದ ಭಾರತ್ ಬ್ರಾಂಡ್ ಹೆಸರಿನಡಿ ಬೇಳೆಕಾಳುಗಳ ಮಾರಾಟವನ್ನು ಆರಂಭಿಸಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೇಳೆಕಾಳು 60 ರೂ.ಗೆ ಲಭ್ಯವಿದೆ. ಆದರೆ 30 ಕೆಜಿಯ ಪ್ಯಾಕ್ ಅನ್ನು ಕೆಜಿಗೆ 55 ರೂ ದರದಲ್ಲಿ ನೀಡಲಾಗುತ್ತದೆ. ಇದರ ನಂತರ, ನವೆಂಬರ್ 2023 ರಲ್ಲಿ, 'ಭಾರತ್ ಅಟಾ' ಎಂಬ ಹೆಸರಿನಡಿ ಅಗ್ಗದ ಹಿಟ್ಟನ್ನು ಮಾರುಕಟ್ಟೆಗೆ ತರಲಾಯಿತು. ಇದರ 10 ಕೆಜಿ ಹಿಟ್ಟು 275 ರೂ.ಗೆ ಲಭ್ಯವಿದೆ. ಇದಲ್ಲದೇ ಸರಕಾರದಿಂದ ಕೆಜಿಗೆ 29 ರೂ.ನಂತೆ ಅಕ್ಕಿಯೂ ಮಾರಾಟ ಮಾಡಲಾಗುತ್ತಿದೆ.

ಬೇಳೆಕಾಳುಗಳನ್ನು ಯಾರು ಮಾರಾಟ ಮಾಡಲಿದ್ದಾರೆ
ಭಾರತವು ನಾಫೇಡ್ ಹಾಗೂ ಎನ್ಸಿಸಿಎಫ್ ಮೂಲಕ ಮಸೂರಿ ಬೇಳೆಯನ್ನು ಮಾರಾಟ ಮಾಡಲಿದೆ. ಈ ಬೇಳೆಯನ್ನು ಕೇಂದ್ರೀಯ ಭಾಂಡಾರ ಮತ್ತು ಸಫಲ್‌ನ ಚಿಲ್ಲರೆ ಅಂಗಡಿಗಳ ಮೂಲಕವೂ ಮಾರಾಟ ನಡೆಸುವ ಸಾಧ್ಯತೆಯನ್ನು ಕೂಡ ವರ್ತಿಸಲಾಗುತ್ತಿದೆ. ಭಾರತ್ ದಾಲ್ ಪ್ರಸ್ತುತ ರಿಲಯನ್ಸ್ ಸ್ಟೋರ್‌ಗಳಲ್ಲಿ ಮತ್ತು ಇತರೆಡೆ ಲಭ್ಯವಿರುವಂತೆ, ಭಾರತ್ ಮಸೂರ್ ದಾಲ್ ಕೂಡ ಅದೇ ರೀತಿಯಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ-Good News: ದೇಶದ ಕೋಟ್ಯಾಂತರ ರೈತರಿಗೆ ಮೋದಿ ಸರ್ಕಾರದ ಭರ್ಜರಿ ಉಡುಗೊರೆ, 24 ಸಾವಿರ ರೂ.ಗಳ ಸಬ್ಸಿಡಿಗೆ ಅನುಮೋದನೆ!

ಸರ್ಕಾರ ಅಗ್ಗದ ದರದಲ್ಲಿ ಹೇಗೆ ಬೇಳೆಕಾಳು ಮಾರಾಟ ಮಾಡುತ್ತದೆ
ಸರ್ಕಾರವು ಯಾವುದೇ ರಿಯಾಯಿತಿ ಇಲ್ಲದೆ ಮಸೂರಿ ದಾಲ್ ಅನ್ನು ಕೆಜಿಗೆ 89 ರೂ ದರದಲ್ಲಿ ಮಾರಾಟ ಮಾಡಲಿದೆ. ಹಣದುಬ್ಬರ ದರ ಇಳಿಕೆಯಾಗಿದ್ದರೂ, ಸರ್ಕಾರಿ ದಾಸ್ತಾನಿನಲ್ಲಿ ಅಪಾರ ಪ್ರಮಾಣದ ಉದ್ದಿನಬೇಳೆ ಬೆಲೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ 7,20,000 ಟನ್‌ ಉದ್ದಿನ ಬೇಳೆ ಸರ್ಕಾರಿ ದಾಸ್ತಾನಿನಲ್ಲಿದೆ ಎಂದು ಅವರು ಹೇಳಿದ್ದಾರೆ. ಮಾರ್ಚ್ ಮೊದಲ ವಾರದಿಂದ ಬೇಳೆಕಾಳುಗಳ ಮಾರಾಟ ಆರಂಭವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ-PM Surya Ghar Yojana 2024: ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್, ಸಬ್ಸಿಡಿ ಸೇರಿದಂತೆ ರೂ.15000 ಆದಾಯ, ಒಂದೇ ಯೋಜನೆ, ಲಾಭ ಹಲವು!

ಹಣದುಬ್ಬರವನ್ನು ನಿಯಂತ್ರಿಸುವ ಭರವಸೆ
ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಭಾರತವು ಸುಮಾರು 3.1 ಮಿಲಿಯನ್ ಟನ್ ಬೇಳೆಕಾಳುಗಳನ್ನು ಆಮದು ಮಾಡಿಕೊಂಡಿತ್ತು. ಇವುಗಳಲ್ಲಿ ಅರ್ಧದಷ್ಟು ಕೆನಡಾ ಮತ್ತು ಆಸ್ಟ್ರೇಲಿಯಾದಿಂದ ಬಂದಿವೆ. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರವು ಎನ್‌ಎಫ್‌ಇಡಿ, ಎನ್‌ಸಿಸಿಎಫ್ ಮತ್ತು ಕೇಂದ್ರೀಯ ಭಾಂಡಾರ ಮೂಲಕ ಭಾರತ್ ಅಕ್ಕಿಯನ್ನು ಕೆಜಿಗೆ 29 ರೂ.,ಗಳಂತೆ ಮಾರಾಟ ಮಾಡುತ್ತಿದೆ. ಭಾರತ್ ಹಿಟ್ಟು ಕೆಜಿಗೆ 27.50 ರೂ. ಮತ್ತು ಭಾರತ್ ಗ್ರಾಮ್ ದಾಲ್ ಅನ್ನು ಕೆಜಿಗೆ 60 ರೂ.ಗೆ ಮಾರಾಟ ಮಾಡುತ್ತಿದೆ. 2023ರಲ್ಲಿ ಹಣದುಬ್ಬರವನ್ನು ನಿಯಂತ್ರಿಸುವುದಾಗಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಇದಾದ ಬಳಿಕ ಹಣದುಬ್ಬರ ತಗ್ಗಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News