Actress Arrest: ಗೆಳತಿ ಮನೆಯಲ್ಲೇ ಚಿನ್ನ ಕದ್ದ ಖ್ಯಾತ ನಟಿ ಅರೆಸ್ಟ್.!

Tollywood Film Actress Arrested : ಬೆಳ್ಳಿತೆರೆಯಲ್ಲಿ ಮಿಂಚುತ್ತಿರುವ ಈ ನಟಿ ಇದೀಗ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಹತ್ತಾರು ಚಿತ್ರಗಳಲ್ಲಿ ನಟಿಸಿದ ಈ ಖ್ಯಾತ ನಟಿಯ ವಿರುದ್ಧ ಕಳ್ಳತನ ಪ್ರಕರಣದಲ್ಲಿ ದಾಖಲಾಗಿದೆ. 

Written by - Chetana Devarmani | Last Updated : Mar 4, 2024, 07:27 PM IST
  • ಟಾಲಿವುಡ್‌ ನಟಿ ವಿರುದ್ಧ ಕಳ್ಳತನ ಪ್ರಕರಣ
  • ಗೆಳತಿ ಮನೆಯಲ್ಲೇ ಚಿನ್ನ ಕದ್ದ ಖ್ಯಾತ ನಟಿ
  • ಖ್ಯಾತ ನಟಿಯನ್ನು ಬಂಧಿಸಿದ ಪೊಲೀಸರು
Actress Arrest: ಗೆಳತಿ ಮನೆಯಲ್ಲೇ ಚಿನ್ನ ಕದ್ದ ಖ್ಯಾತ ನಟಿ ಅರೆಸ್ಟ್.!  title=

Actress Arrested : ನಟಿ ಸೌಮ್ಯ ಶೆಟ್ಟಿ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ನಟಿ ಸೌಮ್ಯ ಕಳ್ಳತನ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ದೊಂಡಪರ್ತಿ ಬಾಲಾಜಿ ರೆಸಿಡೆನ್ಸಿಯಲ್ಲಿ ನೆಲೆಸಿದ್ದ ಪ್ರಸಾದ್ ಎಂಬ ಸೇನೆಯ ನಿವೃತ್ತ ಅಧಿಕಾರಿ ಮನೆಯಲ್ಲಿ ಕಳ್ಳತನವಾಗಿದ್ದು, ಈ ಪ್ರಕರಣದಲ್ಲಿ ಸೌಮ್ಯ ಶೆಟ್ಟಿ ಅವರನ್ನು ಬಂಧಿಸಲಾಗಿದೆ. 

ನಿವೃತ್ತ ಸೇನಾ ನೌಕರ ಪ್ರಸಾದ್ ಅವರ ಮಗಳ ಜೊತೆ ಸೌಮ್ಯ ಶೆಟ್ಟಿ ಸ್ನೇಹ ಬೆಳೆಸಿದ್ದರು. ಕಳೆದ ತಿಂಗಳು 23 ರಂದು ಮನೆಗೆ ನುಗ್ಗಿ ಪ್ರಸಾದ್ ಅವರ ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ ಎಗರಿಸಿಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ. ನಟಿ ಸೌಮ್ಯಶೆಟ್ಟಿ ಚಿನ್ನಾಭರಣಗಳೊಂದಿಗೆ ಗೋವಾಕ್ಕೆ ಪರಾರಿಯಾಗಿದ್ದಾರೆ ಆರೋಪಿಸಲಾಗಿದೆ. 

ಇದನ್ನೂ ಓದಿ: ದೀಪಿಕಾ - ರಣವೀರ್ ಮಗು ಜನಿಸುತ್ತಲೇ ಎಷ್ಟು ಕೋಟಿಯ ಆಸ್ತಿಗೆ ಒಡೆಯನಾಗುವುದು ಗೊತ್ತೇ!?

ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ವಿಷಯ ತಿಳಿದ ಪ್ರಸಾದ್ ಅವರು ಪೊಲೀಸರಿಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಸೌಮ್ಯಶೆಟ್ಟಿ ಬಂದು ಮನೆಯಿಂದ ಹೋದ ಬಳಿಕ ಚಿನ್ನಾಭರಣ ಕಾಣಿಸಿಲ್ಲ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಕಳ್ಳತನ ಆರೋಪದ ಮೇಲೆ ನಟಿ ಸೌಮ್ಯ ಶೆಟ್ಟಿಯವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. 

ನಟಿ ಸೌಮ್ಯಾ ಶೆಟ್ಟಿ ಸಿನಿಮಾಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದರು. ರೀಲ್ಸ್‌ ಮಾಡಲು ಹಣ ಬೇಕಾದ  ಕಾರಣ ಚಿನ್ನವನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಏಳು ವರ್ಷ ಈ ಹೀರೋಯಿನ್ ಜೊತೆ ಸಂಸಾರ.. ಬಳಿಕ ಇನ್ನೊಬ್ಬ ಸ್ಟಾರ್ ನಟಿಯನ್ನು ಮದುವೆಯಾದ ಸ್ಟಾರ್‌ ನಟ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News