UI Song: ಯುಐ ಫಸ್ಟ್‌ ಸಾಂಗ್‌ ಔಟ್:‌ ಚೀಪ್‌ ಸಾಂಗ್‌ ಅಲ್ಲ ಟ್ರೋಲ್‌ ಸಾಂಗ್!

Troll Song: ಚಂದನವನದ ರಿಯಲ್‌ ಸ್ಟಾರ್‌ ಉಪೇಂದ್ರರವರು ಯುಐ ಸಿನಿಮಾ ಮೊದಲ ಹಾಡು ʻಟ್ರೋಲ್‌ ಸಾಂಗ್‌ʼ ಐದು ಭಾಷೆಗಳಲ್ಲಿ ರಿಲೀಸ್‌ ಮಾಡಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Mar 5, 2024, 12:51 PM IST
  • ಯುಐ ಚಿತ್ರತಂಡ ಚೀಪ್‌ ಸಾಂಗ್‌ ರಿಲೀಸ್‌ ಮಾಡದೇ, ಇದೀಗ ಟ್ರೋಲ್‌ ಸಾಂಗ್‌ ರಿಲೀಸ್‌ ಮಾಡಿದೆ. ಟ್ರೋಲ್‌ ಹಾಡು ಮಾರ್ಚ್‌ 4 ರಂದು ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ.
  • ಈ ಹಾಡಿಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಸಖತ್‌ ಆಗಿ ಹೆಜ್ಜೆ ಹಾಕುವುದರ ಜೊತೆಗೆ, ಸದ್ಯ ಈ ನಟಿಯ ಡ್ಯಾನ್ಸ್‌ಗೆ ಹಾಗೂ ಹಾಡಿದ ಸಾಲುಗಳಿಗೆ ಫ್ಯಾನ್ಸ್‌ ಕಳೆದು ಹೋಗಿದ್ದಾರೆ.
  • ಅಷ್ಟು ಮಾತ್ರವಲ್ಲದೇ ಈ ಸಾಂಗ್‌ನಲ್ಲಿ ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಕೂಡ ಬಳಕೆ ಆಗಿದ್ದು, ವಿಶೇಷಾಗಿಯೆ ಈ ಹಾಡನ್ನ ಟ್ರೋಲ್ ಪ್ರಿಯರಿಗೆ ಮಾಡಿಸಿದಂತೆ ಇದೆ.
UI Song: ಯುಐ ಫಸ್ಟ್‌ ಸಾಂಗ್‌ ಔಟ್:‌ ಚೀಪ್‌ ಸಾಂಗ್‌ ಅಲ್ಲ ಟ್ರೋಲ್‌ ಸಾಂಗ್! title=

UI Movie Troll Song: ಸ್ಯಾಂಡಲ್‌ವುಡ್‌ ನಟ-ನಿರ್ದೇಶಕ ರಿಯಲ್‌ ಸ್ಟಾರ್‌ ಉಪೇಂದ್ರರವರ ಯುಐ ಚಿತ್ರಸ ಫಸ್ಟ್‌ ಸಾಂಗ್‌ ರಿಲೀಸ್‌ ಆಗಿದೆ. ಎಲ್ಲಾರೂ ಯುಐ ಚಿತ್ರ ಚೀಪ್‌ ಸಾಂಗ್‌ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಾ ಕುಳಿತರೇ, ಇತ್ತ ಉಪ್ಪ ಮತ್ತೆ ಶಾಕ್ ಕೊಟ್ಟಿದ್ದಾರೆ. ಯುಐ ಚಿತ್ರತಂಡ ಚೀಪ್‌ ಸಾಂಗ್‌ ರಿಲೀಸ್‌ ಮಾಡದೇ, ಇದೀಗ ಟ್ರೋಲ್‌ ಸಾಂಗ್‌ ರಿಲೀಸ್‌ ಮಾಡಿದೆ. ಟ್ರೋಲ್‌ ಹಾಡು ಮಾರ್ಚ್‌ 4 ರಂದು ಐದು ಭಾಷೆಯಲ್ಲಿ ಬಿಡುಗಡೆಯಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರ ಪ್ರತಿ ಕಂಟೆಂಟ್‌ನಲ್ಲೂ ಒಂದು ಸ್ಪೆಷಲ್ ಎಲಿಮೆಂಟ್‌ ಇರುವಂತೆ ಮತ್ತೊಮ್ಮೆ ಹೊಸದೊಂದು ಚಮತ್ಕಾರ ಮಾಡಿದ್ದಾರೆ. ಈ ನಟ-ನಿರ್ದೇಶಕ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ  ಕಂಟೆಂಟ್ ಮೇಲೆ ಸಾಂಗ್ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಹಾಡಿಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಸಖತ್‌ ಆಗಿ ಹೆಜ್ಜೆ ಹಾಕುವುದರ ಜೊತೆಗೆ, ಸದ್ಯ ಈ ನಟಿಯ ಡ್ಯಾನ್ಸ್‌ಗೆ ಹಾಗೂ ಹಾಡಿದ ಸಾಲುಗಳಿಗೆ ಫ್ಯಾನ್ಸ್‌ ಕಳೆದು ಹೋಗಿದ್ದಾರೆ.

ಇದನ್ನೂ ಓದಿ: Thalapathy Vijay: 'ದಳಪತಿ' ವಿಜಯ್ ಕೊನೆಯ ಚಿತ್ರಕ್ಕೆ ಆಯ್ಕೆಯಾಗಿರುವ ನಟಿ ಯಾರು ಗೊತ್ತೇ.??

ಟ್ರೋಲ್‌ ಸಾಂಗ್‌ನಲ್ಲಿ ಬೆಳ್ಳುಳ್ಳಿ ಕಬಾಬ್‌, ಕರಿಮಣಿ ಮಾಲೀಕ, ಗುಮ್ಮಿಸಿಕೊಳ್ತೀಯಾ, ತಗಡು ಹೀಗೆ ಬೇರೆ ಬೇರೆ ರೀತಿ ವೈರಲ್‌ ಆದ ಪದಗಳನ್ನೇ ಬಳಸಿ ಹಾಡನ್ನ  ರಿಲೀಸ್‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಸಾಂಗ್‌ನಲ್ಲಿ ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಕೂಡ ಬಳಕೆ ಆಗಿದ್ದು, ವಿಶೇಷಾಗಿಯೆ ಈ ಹಾಡನ್ನ ಟ್ರೋಲ್ ಪ್ರಿಯರಿಗೆ ಮಾಡಿಸಿದಂತೆ ಇದೆ. ಇದರೊಂದು ಈ ಸಾಂಗ್‌ ಈಗಿನ ಹುಡುಗಿಯರಿಗೆ ಕನೆಕ್ಟ್‌ ಆಗುವಂತಿದೆ.

ಯುಐ ಚಿತ್ರದ ಈ ಹಾಡನ್ನು ಮುಂಬೈನ ಯುಟ್ಯೂಬ್ ಹೆಡ್ ಆಫೀಸ್‌ನಲ್ಲಿ ಈ ಸಾಂಗ್ ಲಾಂಚ್ ಮಾಡಲಾಗಿದ್ದು, ಐದು ಭಾಷೆಗಳಲ್ಲಿ ಸಿದ್ದವಾದ ಹಾಡಿಗೆ ಆಯಾ ಭಾಷೆಗೆ ಅನುಸಾರ ಟ್ರೋಲ್‌ಗಳನ್ನ ಕಂಟೆಂಟ್ ಆಗಿ ಬಳಸಲಾಗಿದೆ. ಈ ಸಾಂಗ್‌ರಲ್ಲಿ ಬರೋ ಧ್ವನಿಗಳಾದ ಗಾಯಕಿಯರಾದ ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ, ಐಶ್ವರ್ಯಾ ರಂಗರಾಜನ್ ಹಾಗೂ ಅಜನೀಶ್ ಲೋಕನಾಥ್, ಅನೂಪ್ ಭಂಡಾರಿ ಜೀವ ತುಂಬಿದ್ದು, ನರೇಶ್ ಕುಮಾರ್ ಬರೆದಿರೋ ಈ ಹಾಡಿನಲ್ಲಿ ಸಾಕಷ್ಟು ಮಜವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News