ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿಗೆ ಮಹಾಬಲಿಪುರಂ ಆಯ್ಕೆ ಮಾಡಿಕೊಂಡಿದ್ದೇಕೆ ಗೊತ್ತೇ?

ಎರಡನೇ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಆತಿಥ್ಯಕ್ಕೆ ಈಗ ತಮಿಳುನಾಡಿನ ಮಹಾಬಲಿಪುರಂನ್ನು ಈಗ ಇಬ್ಬರು ಏಷ್ಯಾದ ಮಹಾನ್ ನಾಯಕರ ಭೇಟಿಯ ಕೇಂದ್ರವನ್ನಾಗಿ ನಿಗದಿಪಡಿಸಲಾಗಿದೆ. ಆದರೆ ಸ್ಥಳದ ಆಯ್ಕೆ ಹಿನ್ನಲೆಯನ್ನು ಗಮನಿಸುತ್ತಾ ಹೋದಾಗ ನಮಗೆ ಮಹಾಬಲಿಪುರಂ ಚೀನಾ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಪರ್ಕ ತಾಣವಾಗಿ ಪರಿಣಮಿಸುತ್ತದೆ.

Last Updated : Oct 10, 2019, 01:05 PM IST
ಮೋದಿ-ಕ್ಸಿ ಜಿನ್‌ಪಿಂಗ್ ಭೇಟಿಗೆ ಮಹಾಬಲಿಪುರಂ ಆಯ್ಕೆ ಮಾಡಿಕೊಂಡಿದ್ದೇಕೆ ಗೊತ್ತೇ?  title=
file photo

ನವದೆಹಲಿ: ಎರಡನೇ ಭಾರತ-ಚೀನಾ ಅನೌಪಚಾರಿಕ ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಆತಿಥ್ಯಕ್ಕೆ ಈಗ ತಮಿಳುನಾಡಿನ ಮಹಾಬಲಿಪುರಂನ್ನು ಈಗ ಇಬ್ಬರು ಏಷ್ಯಾದ ಮಹಾನ್ ನಾಯಕರ ಭೇಟಿಯ ಕೇಂದ್ರವನ್ನಾಗಿ ನಿಗದಿಪಡಿಸಲಾಗಿದೆ. ಆದರೆ ಸ್ಥಳದ ಆಯ್ಕೆ ಹಿನ್ನಲೆಯನ್ನು ಗಮನಿಸುತ್ತಾ ಹೋದಾಗ ನಮಗೆ ಮಹಾಬಲಿಪುರಂ ಚೀನಾ ಮತ್ತು ಭಾರತದ ನಡುವಿನ ಐತಿಹಾಸಿಕ ಸಂಪರ್ಕ ತಾಣವಾಗಿ ಪರಿಣಮಿಸುತ್ತದೆ.

ಇನ್ನೊಂದು ವಿಶೇಷವೆಂದರೆ ಈ ಭಾರತದ ಅಧಿಕಾರಿಗಳು ಇದಕ್ಕೂ ಮೊದಲು ಹಲವಾರು ಸ್ಥಳಗಳನ್ನು ಹುಡುಕಿದರಾದರೂ ಕೂಡ ಕೊನೆಗೆ ದಕ್ಷಿಣ ಭಾರತದ ಭಾಗವನ್ನು ಚೀನಾದ ನಾಯಕನಿಗೆ ತೋರಿಸುವ ನಿಟ್ಟಿನಲ್ಲಿ ಈ ಸ್ಥಳವನ್ನು ಆಯ್ಕೆ ಮಾಡಲಾಯಿತು. ವಿಶ್ವಪರಂಪರೆ ಸ್ಥಾನವನ್ನು ಹೊಂದಿರುವ ಮಹಾಬಲಿಪುರಂ ಚೀನಾದೊಂದಿಗೆ ಸಂಪರ್ಕವನ್ನು ಹೊಂದಿದೆ. ಇನ್ನೊಂದು ವಿಶೇಷವೆಂದರೆ  ಸಾಂಸ್ಕೃತಿಕ ಮತ್ತು ಐತಿಹಾಸಿಕ ವಿಚಾರಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಕ್ಸಿ ಜಿನ್ಪಿಂಗ್ ಅವರ ಭೇಟಿಗೆ ಈ ಸ್ಥಳವನ್ನು ನಿಗದಿ ಮಾಡಲಾಯಿತು.

ಏಳನೇ ಶತಮಾನದಲ್ಲಿ ಪಲ್ಲವ ರಾಜವಂಶದ ಅವಧಿಯಲ್ಲಿ ಚೀನಾದ ಬೌದ್ಧ ಸನ್ಯಾಸಿ ಕ್ಸುವಾನ್‌ಜಾಂಗ್ ಕಾಂಚಿಪುರಂಗೆ ಭೇಟಿ ನೀಡಿದ್ದರು ಮತ್ತು ಭೇಟಿಯ ಬಗ್ಗೆ ವಿಸ್ತಾರವಾಗಿ ಬರೆದಿದ್ದಾರೆ.ಪಲ್ಲವ ಸಾಮ್ರಾಜ್ಯದ ಅವಧಿಯಲ್ಲಿ ಮಹಾಬಲಿಪುರಂ ಒಂದು ಪ್ರಮುಖ ಬಂದರು ನಗರವಾಗಿದೆ. ಜೆನ್ ಬೌದ್ಧಧರ್ಮವನ್ನು ಚೀನಾಕ್ಕೆ ಹರಡಿದ ಬೋಧಿಧರ್ಮಾ ತಮಿಳುನಾಡಿನ ಕರಾವಳಿಯಿಂದ ಪಯಣಿಸಿ ಇಂದಿನ ಗುವಾಂಗ್‌ಡಾಂಗ್ (ಕ್ಯಾಂಟನ್) ಪ್ರಾಂತ್ಯಕ್ಕೆ ಬಂದಿಳಿದಿದ್ದರು. ಅವರು ಇಳಿದ ಸ್ಥಳದಲ್ಲಿ ಒಂದು ಸಣ್ಣ ದೇವಾಲಯವನ್ನು ನಿರ್ಮಿಸಲಾಗಿದೆ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2016 ರಲ್ಲಿ ಅಲ್ಲಿಗೆ ಭೇಟಿ ನೀಡಿದ್ದರು.

ವಿಶೇಷವಾಗಿ ಹಿಂದಿನಿಂದಲೂ ಈ ಪ್ರದೇಶದ ಚೀನಾದ ಆಗ್ನೇಯ ಕರಾವಳಿಯೊಂದಿಗೆ ದಕ್ಷಿಣ ಭಾರತದ ಪಲ್ಲವ ಮತ್ತು ಚೋಳ ಸಾಮ್ರಾಜ್ಯಗಳ ನಡುವೆ ಪ್ರಮುಖ ವ್ಯಾಪಾರ ಸಂಪರ್ಕವನ್ನು ಹೊಂದಿದೆ. ಚೀನಾದ ಸಾಂಗ್ ರಾಜವಂಶದ ನಾಣ್ಯಗಳು ಮತ್ತು ಕುಂಬಾರಿಕೆಗಳಂತಹ ಭೌತಿಕ ಸಾಕ್ಷ್ಯಗಳು ಮಹಾಬಲಿಪುರಂನಲ್ಲಿ ಪತ್ತೆಯಾಗಿವೆ. ಚೀನಾದ ಸಾಂಗ್ ರಾಜವಂಶವು ಚೋಳ ಸಾಮ್ರಾಜ್ಯದೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಉಳಿಸಿಕೊಂಡಿದ್ದನ್ನು ನಾವು ಇತಿಹಾಸದ ದಾಖಲೆಗಳ ಮೂಲಕ ತಿಳಿಯಬಹುದಾಗಿದೆ 

ಮೂಲಗಳು ಹೇಳುವಂತೆ 'ನಾವು ರಾಷ್ಟ್ರ ರಾಜಧಾನಿಯ ಹೊರಗೆ ಸ್ಥಳವನ್ನು ಹುಡುಕಲು ಎಂದು ನಮಗೆ ಸ್ಪಷ್ಟ ಮಾರ್ಗದರ್ಶನ ನೀಡಲಾಗಿದೆ. ರಾಷ್ಟ್ರ ರಾಜಧಾನಿಯ ಹೊರಗೆ ವಿದೇಶಿ ಗಣ್ಯರನ್ನು ಕರೆದೊಯ್ಯುವ ಮತ್ತು ಭಾರತದ ಇತರ ಭಾಗಗಳನ್ನು ಪ್ರದರ್ಶಿಸುವ ಅಭ್ಯಾಸವನ್ನು ಪ್ರಧಾನಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿಯಂತಹ ಜಾಗತಿಕ ನಾಯಕರನ್ನು ಈ ಹಿಂದೆ ಅಹಮದಾಬಾದ್‌ಗೆ ಕರೆದೊಯ್ಯಲಾಗಿದೆ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೊನ್ ವಾರಣಾಸಿಗೆ, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ, ಜಪಾನಿನ ಪ್ರಧಾನಿ ಶಿಂಜೊ ಅಬೆ ಅಹಮದಾಬಾದ್ ಮತ್ತು ವಾರಣಾಸಿ ಭೇಟಿ ನೀಡಿರುವುದು ಈ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

Trending News