ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ

ಕಳೆದ ವಾರಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಚ್ಚರಿಯ ಪುನರಾಗಮನಕ್ಕೆ ಪ್ರಮುಖ ಕಾರಣವಾದ ಅಜಿತ್ ಪವಾರ್ ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

Last Updated : Nov 26, 2019, 04:01 PM IST
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ರಾಜೀನಾಮೆ title=

ನವದೆಹಲಿ: ಕಳೆದ ವಾರಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಚ್ಚರಿಯ ಪುನರಾಗಮನಕ್ಕೆ ಪ್ರಮುಖ ಕಾರಣವಾದ ಅಜಿತ್ ಪವಾರ್ ಮಂಗಳವಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಈಗ ಸಿಎಂ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ್ದಾರೆ.

ನಾಳೆ ತನ್ನ ಬಹುಮತವನ್ನು ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ದೇವೇಂದ್ರ ಫಡ್ನವೀಸ್  ಸರ್ಕಾರಕ್ಕೆ ಆದೇಶಿಸಿದ ಕೆಲವೇ ಗಂಟೆಗಳ ನಂತರ ಅವರು ರಾಜೀನಾಮೆ ನೀಡಿದ್ದಾರೆ. ಇನ್ನೊಂದೆಡೆಗೆ ಶಿವಸೇನೆ ಸಂಜಯ್ ರೌತ್ ಮಾತನಾಡಿ 'ಅಜಿತ್ ಪವಾರ್ ನಮ್ಮೊಂದಿಗಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ ಅಚ್ಚರಿಯ ಸರ್ಕಾರ ರಚನೆಯನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ ತೀರ್ಪು ನೀಡಿ ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರ್ಕಾರವು ನಾಳೆಯೊಳಗೆ ಬಹುಮತವನ್ನು ಸಾಬೀತುಪಡಿಸಬೇಕೆಂದು ಹೇಳಿದೆ.

ಇಂದು ಐತಿಹಾಸಿಕ ತೀರ್ಪನ್ನು ನೀಡಿದ ಪ್ರಕಟಿಸಿದ ನ್ಯಾ. ರಮಣ ನೇತೃತ್ವದ ಪೀಠ, ನ್ಯಾಯಾಲಯ ಮತ್ತು ಶಾಸಕಾಂಗದ ಅಧಿಕಾರದ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕು ಮತ್ತು ಜನರಿಗೆ ಉತ್ತಮ ಆಡಳಿತದ ಹಕ್ಕಿದೆ. ಈ ಪ್ರಕರಣವು ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದಂತೆ ಬಹಳ ಮುಖ್ಯವಾದ ಸಾಂವಿಧಾನಿಕ ವಿಷಯವನ್ನು ಎತ್ತಿದೆ ಎಂದು ಹೇಳಿತು. ಈ ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಹಿಂದಿನ ಕರ್ನಾಟಕ ಮತ್ತು ಉತ್ತರಾಖಂಡದ ಪ್ರಕರಣಗಳನ್ನೂ ಪೀಠವು ಉಲ್ಲೇಖಿಸಿತು. 

 

Trending News