ಆ ಕಾರಣದಿಂದಾಗಿ ಆರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ..! ʼಅಪ್ಪಾಜಿʼ ಚಿತ್ರ ನಟಿ ಶಾಕಿಂಗ್‌ ಹೇಳಿಕೆ

Aamani life story : ಹಿರಿಯ ನಟಿ ಅಮಾನಿ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ತಾವು ಆರು ಬಾರಿ ಗರ್ಭಪಾತಕ್ಕೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ನೋಡಿ..

Written by - Krishna N K | Last Updated : Jun 28, 2024, 07:02 PM IST
    • ನಟಿ ಅಮಾನಿ ತಮ್ಮ ವೈಯಕ್ತಿಕ ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.
    • ʼಅಪ್ಪಾಜಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಅಮಾನಿ
    • ಅಮಾನಿ ಕೌಟುಂಬಿಕ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
ಆ ಕಾರಣದಿಂದಾಗಿ ಆರು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದೇನೆ..! ʼಅಪ್ಪಾಜಿʼ ಚಿತ್ರ ನಟಿ ಶಾಕಿಂಗ್‌ ಹೇಳಿಕೆ title=
aamani

Actress Aamani abortion : ಸಾಹಸಸಿಂಹ ವಿಷ್ಣುವರ್ಧನ್‌ ನಟನೆಯ ʼಅಪ್ಪಾಜಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಅಮಾನಿ ಕೌಟುಂಬಿಕ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಕಾಮಿಡಿ ಫ್ಯಾಮಿಲಿ ಎಂಟರ್ ಟೈನರ್ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ ಅಮಾನಿ.. ಸಧ್ಯ ನಟಿ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಬಹಿರಂಗಗೊಳಿಸಿದ್ದಾರೆ..

ಅಮಾನಿ 1990 ರಲ್ಲಿ ತಮಿಳಿನ 'ಪುತಿಯಕಾಟ್ರು' ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದರು. 1996ರಲ್ಲಿ ಬಾಳಿನ ಜ್ಯೋತಿ ಮತ್ತು ಅಪ್ಪಾಜಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಮದುವೆಯಾದ ನಂತರ ಕೆಲವು ವರ್ಷಗಳ ಕಾಲ ಸಿನಿಮಾದಿಂದ ವಿರಾಮ ತೆಗೆದುಕೊಂಡರು. 

ಇದನ್ನೂ ಓದಿ: ʼವಾರಾಹಿ ದೀಕ್ಷೆʼಯಲ್ಲಿ ಪವನ್ ಕಲ್ಯಾಣ್..! ಈ ವ್ರತದ ಮಹತ್ವ.. ಮಾತೆ ʼವಾರಾಹಿ ದೇವಿʼ ಯಾರು ಗೊತ್ತೆ..?

ಸುಮಾರು ಎಂಟು ವರ್ಷಗಳ ಕಾಲ ಸಿನಿಮಾದಿಂದ ದೂರವಿದ್ದ ನಟಿ, 2012ರಲ್ಲಿ ನಟಿಯಾಗಿ ರೀ ಎಂಟ್ರಿ ಕೊಟ್ಟು ಈಗ ಮುಂದುವರೆದಿದ್ದಾರೆ. ದೊಡ್ಡ ಮತ್ತು ಸಣ್ಣ ಎಲ್ಲ ರೀತಿಯ ಸಿನಿಮಾಗಳನ್ನು ಮಾಡುತ್ತಾರೆ. ಇತ್ತೀಚೆಗಷ್ಟೇ ‘ಮ್ಯೂಸಿಕ್ ಶಾಪ್ ಮೂರ್ತಿ’ ಸಿನಿಮಾದಲ್ಲಿ ಅಮಾನಿ ಮಿಂಚಿದ್ದರು. 

ಈ ಮಧ್ಯ ಸಂದರ್ಶವೊಂದರಲ್ಲಿ ಅಮಾನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದರು. ಅದರ ಭಾಗವಾಗಿ, ಅವರು ತಮ್ಮ ಗರ್ಭಪಾತದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ತನಗೆ ಒಂದೇ ಬಾರಿ ಆರು ಗರ್ಭಪಾತವಾಗಿದೆ ಎಂದು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ:ದರ್ಶನ್ ಒಳ್ಳೆಯವರು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ..! ನಟ ನಾಗ ಶೌರ್ಯ

ನಾಯಕಿಯಾಗಿ ನಟಿಸುವಾಗ ಹೆಚ್ಚು ಡಯಟ್ ಮಾಡುತ್ತಿದ್ದರು. ತುಂಬಾ ಕಡಿಮೆ ತಿನ್ನುವುದು. ಬೆಳಿಗ್ಗೆ ಕೇವಲ ಜ್ಯೂಸ್ ಕುಡಿಯುವುದು ಮಾಡುತ್ತಿದ್ದರಂತೆ. ಅಲ್ಲದೆ, ಹಿರಿಯ ನಿರ್ದೇಶಕ ದಾಸರಿ ನಾರಾಯಣ ರಾವ್ ಕೂಡ ಅವರ ಆಹಾರ ಕ್ರಮದ ಬಗ್ಗೆ ಗದರಿಸುತ್ತಿದ್ದರಂತೆ. ಇದರಿಂದ ಅವರಿಗೆ ರಕ್ತದ ಕೊರತೆ ಉಂಟಾಗಿತ್ತು, ಪ್ರೋಟೀನ್ ಎಸ್ ಕಡಿಮೆಯಾಯಿತು.. ಆಗ ಗೊತ್ತಿರಲಿಲ್ಲ, ಯಾವ ವೈದ್ಯರೂ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ ನಂತರ ವೈದ್ಯರನ್ನು ನನ್ನ ಆರೋಗ್ಯ ಸಮಸ್ಯೆ ಗುರುತಿಸಿದರು ಎಂದು ಅಮಾನಿ ಹೇಳಿದರು. ಆ ಸಮಸ್ಯೆ ಪತ್ತೆಯಾಗುವವರೆಗೂ ನಾನು ಮಕ್ಕಳಿಗಾಗಿ ಹಲವಾರು ದೇವರ ಮೊರೆ ಹೋಗಿದ್ದೆ, ಸಮಸ್ಯೆ ಪರಿಹಾರದ ನಂತರ ಚಿಕಿತ್ಸೆ ಪಡೆದೆ, ಮಕ್ಕಳು ಜನಿಸಿದರು ಎಂದು ಅಮಾನಿ ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News