ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮುನ್ನ ಜೈಲರ್ ಯಾಕೆ ಓಡುತ್ತಾರೆ

೨೦೧೨ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಮಂಗಳವಾರ ಪ್ರಕರಣದ ನಾಲ್ವರು ದೋಷಿಗಳ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಿದೆ. 

Last Updated : Jan 7, 2020, 06:50 PM IST
ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸುವ ಮುನ್ನ ಜೈಲರ್ ಯಾಕೆ ಓಡುತ್ತಾರೆ title=

ನವದೆಹಲಿ: ೨೦೧೨ರಲ್ಲಿ ನಡೆದ ನಿರ್ಭಯಾ ಹತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ನ್ಯಾಯಾಲಯ ಮಂಗಳವಾರ ಪ್ರಕರಣದ ನಾಲ್ವರು ದೋಷಿಗಳ ವಿರುದ್ಧ ಡೆತ್ ವಾರೆಂಟ್ ಜಾರಿಗೊಳಿಸಿದೆ. ಡೆತ್ ವಾರೆಂಟ್ ಹೊರಡಿಸಿದ 14 ದಿನಗಳ ಬಳಿಕ ಅಂದರೆ, ಜನವರಿ ೨೨ಕ್ಕೆ ಬೆಳಗ್ಗೆ ೭ಗಂಟೆಗೆ ಈ ನಾಲ್ವರು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತಿದೆ. ಡೆತ್ ವಾರಂಟ್ ಜಾರಿಗೊಳಿಸಿದ ಬಳಿಕ ಇದೀಗ ದೋಷಿಗಳಿಗೆ 14 ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ 14 ದಿನಗಳಲ್ಲಿ ಅಪರಾಧಿಗಳು ಜೈಲಿನ ಒಳಗೆ ತಮ್ಮ ಕುಟುಂಬ ಸದಸ್ಯರು ಹಾಗೂ ಬಂದುಗಳೊಂದಿಗೆ ಭೇಟಿ ಮಾಡಿ ತಮ್ಮ ಅಂತಿಮ ಕೋರಿಕೆಯನ್ನು ತಿಳಿಸಬಹುದಾಗಿದೆ. ಬಳಿಕ ಜನವರಿ ೨೨, ೨೦೨೦ ರಂದು ಬೆಳಗ್ಗೆ ೭ ಗಂಟೆಗೆ ಇವರಿಗೆ ಗಲ್ಲುಶಿಕ್ಷೆ ವಿಧಿಸಲಾಗುವುದು.

ಇದಕ್ಕೂ ಮೊದಲು ಪಟಿಯಾಲಾ ಹೌಸ್ ನ್ಯಾಯಾಲಯದ ನ್ಯಾಯಾಧೀಶರು ಈ ನಾಲ್ವರು ಆರೋಪಿಗಳ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮ ಪ್ರತಿನಿಧಿಗಳನ್ನು ಕೋರ್ಟ್ ರೂಮ್ ನಿಂದ ಹೊರಗೆ ಕಳುಹಿಸಲಾಗಿತ್ತು.  ವಿಚಾರಣೆಯ ವೇಳೆ ಕೋರ್ಟ್ ರೂಮ್ ನಲ್ಲಿದ್ದ ನಿರ್ಭಯಾ ತಾಯಿ ಹಾಗೂ ಅಪರಾಧಿ ಮುಕೇಶ್ ತಾಯಿ ಕಣ್ಣೀರು ಸುರಿಸಿದ್ದಾರೆ.

ಗಲ್ಲು ಶಿಕ್ಷೆಗೆ ಸಂಬಂಧಿಸಿದ ಈ ಮಹತ್ವದ ವಿಷಯ ನಿಮಗೆ ತಿಳಿದಿದೆಯೇ?
ಪ್ರಕರಣದ ದೋಷಿಗಳಿಗೆ ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ಜೈಲಿನ ಸುಪರಿಟೆಂಡೆಂಟ್ ಒಂದು ಬಾರಿ ತಮ್ಮ ಕಚೇರಿಗೆ ಧಾವಿಸುತ್ತಾರೆ ಎಂಬ ವಿಷಯ ನಿಮಗೆ ತಿಳಿದಿದೆಯೇ? ಹೌದು, ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ಜೈಲರ್ ಒಂದು ಬಾರಿ ತಮ್ಮ ಕಚೇರಿಗೆ ಧಾವಿಸುತ್ತಾರೆ. ನಿರ್ಭಯಾ ಪ್ರಕರಣದ ದೋಷಿಗಳಿಗೆ ಶಿಕ್ಷೆ ನೀಡುವುದಕ್ಕೆ ಮುನ್ನವೂ ಕೂಡ ಈ ಪ್ರಕ್ರಿಯೆ ನಡೆಯಲಿದೆ. ಬ್ಲಾಕ್ ವಾರೆಂಟ್ ಜಾರಿಯಾದ ಬಳಿಕ ನ್ಯಾಯಾಲಯ ನಿರ್ಧರಿಸಿದ ದಿನಾಂಕ ಹಾಗೂ ಸಮಯದಂದು ನಾಲ್ವರು ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಲಾಗುವುದು.

ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ಜೈಲರ್ ಯಾಕೆ ಓಡುತ್ತಾನೆ?
ಆದರೆ, ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ತಮ್ಮ ಕಚೇರಿಗೆ ಧಾವಿಸುವ ಜೈಲರ್ ಅಪರಾಧಿಗಳ ಗಲ್ಲು ಶಿಕ್ಷೆಯ ಕುರಿತು ಯಾವುದೇ ರೀತಿಯ ಸ್ಟೇ ಆರ್ಡರ್ ಬಂದಿದೆಯೇ ಎಂಬುದನ್ನು ಪರಿಶೀಲಿಸುತ್ತಾರೆ. ಈ ರೀತಿಯ ಯಾವುದೇ ಆದೇಶ ಬಂದಿಲ್ಲವಾದರೆ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ. ಅಷ್ಟೇ ಅಲ್ಲ ಗಲ್ಲುಶಿಕ್ಷೆ ನೀಡುವುದಕ್ಕೂ ಮುನ್ನ ಆರೋಪಿಗಳಿಗೆ ಸ್ನಾನ ಮಾಡಿಸಿ ಉಪಹಾರ ಕೂಡ ನೀಡಲಾಗುತ್ತದೆ.

ಬಳಿಕ ಅಪರಾಧಿಗಳ ಮುಖಕ್ಕೆ ಕಪ್ಪು ಬಣ್ಣದ ವಸ್ತ್ರ ತೊಡಿಸಿ ಅವರನ್ನು ನೇಣುಗಂಬಿನ ಬಳಿ ತರಲಾಗುತ್ತದೆ. ಈ ವೇಳೆ ಅವರ ಜೊತೆಗೆ ಒಟ್ಟು ೧೨ ಜನ ಭದ್ರತಾ ಸಿಬ್ಬಂದಿಗಳು ಇರುತ್ತಾರೆ ಹಾಗೂ ಗಲ್ಲುಶಿಕ್ಷೆ ನೀಡುವ ವೇಳೆ ನಾಲ್ವರು ಭದ್ರತಾ ಸಿಬ್ಬಂದಿಗಳು ಅವರ ಹಿಂದೆ ಇರುತ್ತಾರೆ. ಶಿಕ್ಷೆ ನೀಡಿದ ಬಳಿಕ ಸುಮಾರು ಅರ್ಧ ಗಂಟೆಯವರೆಗೆ ಅವರ ಶರೀರವನ್ನು ಹಾಗೆಯೇ ನೇತಾಡಲು ಬಿಡಲಾಗುತ್ತದೆ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅಪರಾಧಿಗಳ ಸಾವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

Trending News