ನೋಯ್ಡಾದಲ್ಲಿ Coronavirus ಅಲರ್ಟ್

ನೋಟಿಸ್‌ನಲ್ಲಿ, ಎಲ್ಲಾ ಕಂಪೆನಿಗಳು ತಮ್ಮ ಉದ್ಯೋಗಿಗಳಲ್ಲಿ ಯಾರಾದರೂ ವಿದೇಶಕ್ಕೆ ಹೋಗಿದ್ದರೆ, ಅವರು ಭಾರತಕ್ಕೆ ಮರಳಿದ ನಂತರ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ತಿಳಿಸಲಾಗಿದೆ.

Last Updated : Mar 3, 2020, 12:02 PM IST
ನೋಯ್ಡಾದಲ್ಲಿ Coronavirus ಅಲರ್ಟ್ title=

ನೋಯ್ಡಾ: ಕೊರೊನಾವೈರಸ್ ಈಗ ಚೀನಾದಿಂದ ಪ್ರಪಂಚದಾದ್ಯಂತ ಹರಡುತ್ತಿದೆ. ಇರಾನ್, ಜರ್ಮನಿ ಮತ್ತು ಇಟಲಿಯ ನಂತರ, ಇದುವರೆಗೆ ಭಾರತದಲ್ಲಿ 5 ಕರೋನಾ ವೈರಸ್ ಪ್ರಕರಣಗಳು ಸಕಾರಾತ್ಮಕವಾಗಿ ಕಂಡುಬಂದಿವೆ. ಎರಡು ದಿನಗಳ ಹಿಂದೆ ಭಾರತದಲ್ಲಿ ಎರಡು ಹೊಸ ಕರೋನಾ ವೈರಸ್ ಪ್ರಕರಣಗಳನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಖಚಿತಪಡಿಸಿದ್ದರು. ಇದರ ನಂತರ, ಕರೋನಾ ವೈರಸ್ ಬಗ್ಗೆ ನೋಯ್ಡಾದಲ್ಲಿ ಎಚ್ಚರಿಕೆ ನೀಡಲಾಗಿದೆ.

1000 ಕಂಪನಿಗಳಿಗೆ ನೋಟಿಸ್:
ಗೌತಮ್ ಬುದ್ಧ ನಗರ ಸಿಎಂಒ ಅನುರಾಗ್ ಭಾರ್ಗವ ಮಾತನಾಡಿ, ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ 1000 ಕ್ಕೂ ಹೆಚ್ಚು ಕಂಪನಿಗಳಿಗೆ ಕರೋನಾ ವೈರಸ್ ಅಲರ್ಟ್ ಬಗ್ಗೆ ನೋಟಿಸ್ ನೀಡಲಾಗಿದೆ. ನೋಟಿಸ್‌ನಲ್ಲಿ, ಎಲ್ಲಾ ಕಂಪೆನಿಗಳು ತಮ್ಮ ಉದ್ಯೋಗಿಗಳಲ್ಲಿ ಯಾರಾದರೂ ವಿದೇಶಕ್ಕೆ ಹೋಗಿದ್ದರೆ, ಅವರು ಭಾರತಕ್ಕೆ ಮರಳಿದ ನಂತರ ಆರೋಗ್ಯ ಇಲಾಖೆಗೆ ತಿಳಿಸಬೇಕು ಎಂದು ತಿಳಿಸಲಾಗಿದೆ. ಗೌತಮ್ ಬುದ್ಧ ನಗರ ಸಿಎಂಒ ಇರಾನ್, ಸಿಂಗಾಪುರ್, ಚೀನಾ ಸೇರಿದಂತೆ 13 ದೇಶಗಳಿಂದ ಹಿಂದಿರುಗಿದ ಜನರನ್ನು ಪರೀಕ್ಷಿಸಲು ಆದೇಶಿಸಿದೆ. ಇನ್ನು ಕರೋನಾ ವೈರಸ್ ಬಗ್ಗೆ ಮುಂಜಾಗೃತಾ ಕ್ರಮವಾಗಿ ಒಂದು ಶಾಲೆಯನ್ನು ಸಹ ಮುಚ್ಚಲಾಗಿದೆ ಎಂದು ವರದಿಯಾಗಿದೆ.

ಇಟಲಿಯ ವ್ಯಕ್ತಿಯಲ್ಲಿ ಕರೋನಾ ವೈರಸ್:
ದೆಹಲಿಯಲ್ಲಿ ವಾಸಿಸುವ ವ್ಯಕ್ತಿಯಲ್ಲಿ ಕರೋನಾ ವೈರಸ್ ಸೋಂಕು ಕಂಡುಬಂದಿದೆ. ಫೆಬ್ರವರಿ 25 ರಂದು ಅವರು ಇಟಲಿಯಿಂದ ಭಾರತಕ್ಕೆ ಮರಳಿದರು. ಈ ವ್ಯಕ್ತಿಯನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ನೋಡಲ್ ಕೇಂದ್ರದಲ್ಲಿ ಇರಿಸಲಾಗಿದೆ. ಆ ವ್ಯಕ್ತಿಯ ಪರಿಸ್ಥಿತಿ ಸ್ಥಿರವಾಗಿದೆ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ವ್ಯಕ್ತಿಯು ಭಾರತಕ್ಕೆ ಬಂದ ವಿಮಾನದ ಎಲ್ಲಾ ಸಿಬ್ಬಂದಿಗಳಿಗೆ 14 ದಿನಗಳವರೆಗೆ ಜನರೊಂದಿಗೆ ಸಂಪರ್ಕಕ್ಕೆ ಬಾರದಂತೆ ತಿಳಿಸಲಾಗಿದೆ. ಅಲ್ಲದೆ, ಕರೋನದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ತಿಳಿಸುವಂತೆ ಅವರಿಗೆ ಸೂಚಿಸಲಾಗಿದೆ.

Trending News