BBK 11 : ಬಿಗ್ ಬಾಸ್ ಮನೆಗೆ ದರ್ಶನ್‌ ಕುಚುಕು ಧರ್ಮ ಕೀರ್ತಿರಾಜ್ ಎಂಟ್ರಿ..! ಕಣ್‌ ಕಟ್ಟಿ ಕಿಚಾಯಿಸಿದ ಕಿಚ್ಚ..

Dharma Keerthiraj in BBK 11 : ಬಿಗ್​ ಬಾಸ್​ ಕನ್ನಡ ಸೀಸನ್​ 11 ಪ್ರಾರಂಭವಾಗಿದೆ. ಕಿಚ್ಚ ಸುದೀಪ್​ ಅವರು ಹೊಸ ಸೀಸನ್​ನ ಸ್ಪರ್ಧಿಗಳನ್ನ ವೆಲ್‌ಕಮ್‌ ಮಾಡುತ್ತಿದ್ದಾರೆ. ಇದೀಗ 6ನೇ ಸ್ಪರ್ಧಿಯಾಗಿ ʼನವಗ್ರಹʼ ಸಿನಿಮಾ ಖ್ಯಾತಿಯ ನಟ ಧರ್ಮ ಕೀರ್ತಿರಾಜ್‌ ಎಂಟ್ರಿ ಕೊಟ್ಟಿದ್ದಾರೆ.. ಬರುವಾಗ ಒಬ್ಬರೆ ಅಲ್ಲ, ಜೋಡಿಯಾಗಿ ಬಂದಿದ್ದು ಗಮನಸೆಳೆಯಿತು.. 
 

1 /7

ಖ್ಯಾತ ವಿಲನ್​ ಧರ್ಮ ಕೀರ್ತಿರಾಜ್ ಅವರ ಪುತ್ರ ಕೀರ್ತಿರಾಜ್‌ ನವಗ್ರಹ ಸಿನಿಮಾದಲ್ಲಿ ಕ್ಯಾಡ್ಬರೀಸ್​ ಎಂಬ ಪಾತ್ರ ಮಾಡಿದ್ದರು. ಇದೀಗ ಬಿಗ್​ ಬಾಸ್​ ಕನ್ನಡ ಸೀಸನ್​ 11 6ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.  

2 /7

ಬಿಗ್​ ಬಾಸ್​ ಕನ್ನಡ ಸೀಸನ್​ 11 ಅದ್ದೂರಿಯಾಗಿ ಓಪನಿಂಗ್​ ಆಗಿದೆ. ನಿನ್ನೆ ಗೌತಮಿ ಜಾಧವ್​, ಲಾಯರ್​ ಜಗದೀಶ್, ಚೈತ್ರಾ ಕುಂದಾಪುರ, ಗೋಲ್ಡ್​ ಸುರೇಶ್​ ಅವರ ಹೆಸರುಗಳು ಬಹಿರಂಗ ಆಗಿದ್ದವು.   

3 /7

ಇಂದು ಇನ್ನುಳಿದ ಸ್ಪರ್ಧಿಗಳ ಎಂಟ್ರಿ ಆಗಿದೆ. ಈ ಪೈಕಿ ನಟ ಧರ್ಮ ಕೀರ್ತಿರಾಜ್​ ಅವರು ಕೂಡ ಬಿಗ್​ ಬಾಸ್​ ಕನ್ನಡ ಸೀಸನ್​ 11ರ ಸ್ಪರ್ಧಿ ಆಗಿ ದೊಡ್ಮನೆ ಪ್ರವೇಶ ಮಾಡಿದ್ದಾರೆ.  

4 /7

ಧರ್ಮ ಕೀರ್ತಿರಾಜ್‌ ತಂದೆ ಕೀರ್ತಿರಾಜ್​ ಸ್ಯಾಂಡಲ್​ವುಡ್​ನಲ್ಲಿ ಫೇಮಸ್​ ವಿಲನ್. ದರ್ಶನ್ ಆಪ್ತ ಬಳಗದಲ್ಲಿ ಧರ್ಮ ಕೀರ್ತಿರಾಜ್​ ಗುರುತಿಸಿಕೊಂಡಿದ್ದಾರೆ..  

5 /7

ನವಗ್ರಹ ಸಿನಿಮಾದ ಮೂಲಕ ಧರ್ಮ ಕೀರ್ತಿರಾಜ್ ಹೆಸರುವಾಸಿಯಾಗಿದ್ದರು.​ ಈ ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ ಜೊತೆ ಜೋಡಿಯಾಗಿ ನಟಿಸಿದರು. ಕಣ್ ಕಣ್ಣ ಸಲಿಗೆ.. ಎಂಬ ಹಾಡು ಸೂಪರ್‌ ಹಿಟ್‌ ಆಗಿತ್ತು.  

6 /7

ಧರ್ಮ ‘ಒಲವೇ ವಿಸ್ಮಯ’, ‘ಮುಮ್ತಾಜ್’, ‘ಕ್ಯಾಡ್ಬರಿಸ್’, ‘ರೋನಿ’, ‘ಖಡಕ್’, ‘ಓ ಮನಸೇ’, ‘ಚಾಣಾಕ್ಷ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಬಿಗ್​ ಬಾಸ್​ ಸ್ಪರ್ಧಿಯಾಗಿ ಎರಡನೇ ಇನ್ನಿಂಗ್ಸ್​ ಶುರು ಮಾಡಿದ್ದಾರೆ.  

7 /7

ನಟಿ ಅನುಷಾ ರೈ 5ನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ವೇದಿಕೆಗೆ ಬಂದರು. ಈ ವೇಳೆ ಅವರ ಕಣ್ಣು ಕಟ್ಟಿ ಧರ್ಮ ಕೀರ್ತಿಯಾಜ್‌ ಕೈ ಮುಟ್ಟಿಸಿ ಯಾರು ಅಂತ ಗೆಸ್‌ ಮಾಡುವಂತೆ ಕಿಚ್ಚ ಕಿಚಾಯಿಸಿದರು.. ಸಧ್ಯ  ಧರ್ಮ ಕೀರ್ತಿರಾಜ್ ಸ್ವರ್ಗದ ಮನೆಗೆ ಹೋಗಿದ್ದಾರೆ.