ಚಹಾ ಜೊತೆ ಈ ಮೂರು ವಸ್ತು ಸೇವಿಸಿದರೆ ದೇಹ ಸೇರಿದ ಮೇಲೆ ವಿಷದಂತೆಯೇ ಮಾಡುವುದು ಕೆಲಸ ! ಶತ್ರುಗಳಿಗೂ ನೀಡದಿರಿ !

Never Mix These Food Items With Tea:ಚಹಾದ ಜೊತೆ ಮೂರೂ ವಸ್ತುಗಳನ್ನು ಎಂದಿಗೂ  ಸೇವಿಸಲೇ ಬಾರದು. ಯಾಕೆಂದರೆ ಇದರಿಂದ ಚಹಾ ಅಪಾಯಕಾರಿ ಪಾನೀಯವಾಗಿ ಪರಿಣಮಿಸಿ ಬಿಡುತ್ತದೆಯಂತೆ. 

Written by - Ranjitha R K | Last Updated : Nov 29, 2024, 01:12 PM IST
  • ಭಾರತೀಯರಿಗೂ ಚಹಾಗೂ ಅವಿನಾಭಾವ ಸಂಬಂಧ.
  • ಚಹಾ ಕುಡಿಯುವಾಗ ಇರಲಿ ಎಚ್ಚರ
  • ಚಹಾದ ಜೊತೆ ಈ ವಸ್ತುಗಳು ಬೇಡ
ಚಹಾ ಜೊತೆ ಈ ಮೂರು ವಸ್ತು ಸೇವಿಸಿದರೆ ದೇಹ ಸೇರಿದ ಮೇಲೆ ವಿಷದಂತೆಯೇ ಮಾಡುವುದು ಕೆಲಸ ! ಶತ್ರುಗಳಿಗೂ ನೀಡದಿರಿ !  title=

Never Mix These Food Items With Tea: ಭಾರತೀಯರಿಗೂ ಚಹಾಗೂ ಅವಿನಾಭಾವ ಸಂಬಂಧ. ನೀರಿನ ನಂತರ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸುವ ಪಾನೀಯವೆಂದರೆ ಅದು ಚಹಾ. ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಚಹಾ ಇಲ್ಲ ಎಂದಾದರೆ ಯಾವ ಕೆಲಸವೂ ಮುಂದೆ ಸಾಗುವುದೇ ಇಲ್ಲ. ಇವರ ಜೀವನದಲ್ಲಿ ಚಹಾ ಒಂದು ರೀತಿಯ ಎನರ್ಜಿ ಬೂಸ್ಟರ್ ಅಂದರೆ ತಪ್ಪಲ್ಲ.

ಚಹಾ ಕುಡಿಯುವಾಗ ಇರಲಿ ಎಚ್ಚರ :
ಸಾಮಾನ್ಯವಾಗಿ ಚಹಾ ಕುಡಿಯುವಾಗ ಅದರ ಜೊತೆ ಕೆಲವು ತಿನಿಸುಗಳನ್ನು ಕೂಡಾ ಸೇವಿಸುತ್ತೇವೆ. ಚಹಾದ ಜೊತೆ ಮೂರೂ ವಸ್ತುಗಳನ್ನು ಎಂದಿಗೂ  ಸೇವಿಸಲೇ ಬಾರದು. ಯಾಕೆಂದರೆ ಇದರಿಂದ ಚಹಾ ಅಪಾಯಕಾರಿ ಪಾನೀಯವಾಗಿ ಪರಿಣಮಿಸಿ ಬಿಡುತ್ತದೆಯಂತೆ.  

ಇದನ್ನೂ ಓದಿ : ಚಳಿಗಾಲದಲ್ಲಿ ಟೀ ಅಥವಾ ಕಾಫಿ ಇವೆರಡರಲ್ಲಿ ಯಾವುದು ಉತ್ತಮ?  ತಜ್ಞರು ಹೇಳುವುದೇನು ಗೊತ್ತಾ?

ಆಯುರ್ವೇದ ತಜ್ಞ ಡಾ.ರಾಬಿನ್ ಶರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗೆಗಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಚಹಾ ಅನೇಕ ರೋಗಗಳಿಗೆ ಮೂಲವಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನು ಕುಡಿಯುವುದರಿಂದ ದೇಹ ರೋಗಗಳ ಆಗರವಾಗಿರುವುದಾಗಿ ಹೇಳಿದ್ದಾರೆ. 

ಚಹಾದ ಜೊತೆ ಈ ವಸ್ತುಗಳು ಬೇಡ: 
1. ಹಾಲು ಮತ್ತು ಸಕ್ಕರೆ : ಚಹಾಕ್ಕೆ ಹಾಲು ಮತ್ತು ಸಕ್ಕರೆ ಸೇರಿಸದಿದ್ದರೆ ಮಾತ್ರ ಚಹಾ ಆರೋಗ್ಯಕರವಾಗಿರುತ್ತದೆ ಎಂದು ಡಾ.ರಾಬಿನ್ ಹೇಳಿದ್ದಾರೆ. ಆದರೆ ಚಹಾಕ್ಕೆ ಹಾಲು ಮತ್ತು ಸಕ್ಕರೆ ಹಾಕದಿದ್ದರೆ ರುಚಿ ಕೆಡುತ್ತದೆ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಜನರು ಹಾಲು ಮತ್ತು ಸಕ್ಕರೆ ಬೆರೆಸುತ್ತಾರೆ. 

2. ಬೆಲ್ಲ : ಚಹಾಕ್ಕೆ ಸಕ್ಕರೆ ಮಾತ್ರವಲ್ಲ ಬೆಲ್ಲ ಕೂಡಾ ಸೇರಿಸಬಾರದು. ಇದು   ಅಜೀರ್ಣ ಮತ್ತು ಮಧುಮೇಹದ ಅಪಾಯವನ್ನು ಉಂಟುಮಾಡುತ್ತದೆ. 

3. ಉಪ್ಪಾಗಿರುವ ತಿಂಡಿಗಳು: ಚಹಾದೊಂದಿಗೆ ಉಪ್ಪು ತಿಂಡಿ, ಸಮೋಸಾ ಅಥವಾ ಚಾಟ್-ಪಕೋಡಿ ತಿನ್ನಬಾರದು.

‘ಆ್ಯಂಟಿ ಡಯಟ್’ನ ಅನಾನುಕೂಲಗಳು:
‘ಆ್ಯಂಟಿ ಡಯಟ್’ ಎಂದೂ ಕರೆಯಲ್ಪಡುವ ಕೆಟ್ಟ ಕಾಂಬಿನೇಷನ್ ಇರುವ ಆಹಾರ ಪದಾರ್ಥಗಳು  ಆಟೊ ಇಮ್ಯುನ್ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ಡಾ.ರಾಬಿನ್ ಹೇಳಿದರು. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಹೆಲ್ತ್‌ಲೈನ್ ಪ್ರಕಾರ ಆಟೋಇಮ್ಯೂನ್ ರೋಗಗಳ ಪಟ್ಟಿ :
1. ಟೈಪ್ 1 ಮಧುಮೇಹ
2. ರುಮಟಾಯ್ಡ್ ಸಂಧಿವಾತ (ಆರ್ಎ)
3. ಸೋರಿಯಾಟಿಕ್ ಸಂಧಿವಾತ
4. ಮಲ್ಟಿಪಲ್ ಸ್ಕ್ಲೆರೋಸಿಸ್
5. ಇನ್ಫ್ಲಮೇಟರಿ  ಬೌಲ್ ಡಿಸೀಸ್ 
6. ಗ್ರೇವ್ಸ್ ಡಿಸೀಸ್ 
7. ಸ್ಜೋಗ್ರೆನ್ಸ್ ಕಾಯಿಲೆ
8. ಮೈಸ್ತೇನಿಯಾ ಗ್ರ್ಯಾವಿಸ್
9. ಸೆಲಿಯಾಸಿಯಸ್

 

(ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News