ಬೆಂಗಳೂರು : ಅನಾರೋಗ್ಯಕರ ಆಹಾರ ಮತ್ತು ಒತ್ತಡ ತುಂಬಿದ ಜೀವನಶೈಲಿಯಿಂದಾಗಿ, ಜನರ ದೇಹದಲ್ಲಿ ಅನೇಕ ಸಮಸ್ಯೆಗಳು ಹೆಚ್ಚಾಗಲಾರಂಭಿಸಿವೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚುವುದು ಕೂಡಾ ಈ ಸಮಸ್ಯೆಗಳಲ್ಲಿ ಒಂದು. ಮೊದಲು ಕೆಲವೇ ಕೆಲವು ಮಂದಿ ಈ ಸಮಸ್ಯೆಯನ್ನು ಹೊಂದಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸಿದಾಗ, ಅದು ಕೀಲು ನೋವನ್ನು ಉಂಟುಮಾಡಬಹುದು. ಕಾಲ್ಬೆರಳುಗಳು, ಕೈಗಳು ಮತ್ತು ಮೊಣಕೈಗಳ ಕೀಲುಗಳ ಸುತ್ತ ಸೇರಿಕೊಂಡಿರುವ ಯೂರಿಕ್ ಆಮ್ಲದಿಂದಾಗಿ ಜನರು ತೀವ್ರವಾದ ನೋವನ್ನು ಅನುಭವಿಸಬೇಕಾಗಿ ಬರಬಹುದು.
ಯೂರಿಕ್ ಆಸಿಡ್ ಮಟ್ಟದಲ್ಲಿನ ಹೆಚ್ಚಳದಿಂದಾಗಿ, ಗಾಜಿನ ಆಕಾರದ ಹರಳುಗಳು ಬೆರಳುಗಳ ಕೀಲುಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದ ನಡೆದಾಡಲು, ಕುಳಿತಲ್ಲಿಂದ ಎದ್ದೇಳಲು ಕಷ್ಟವಾಗಬಹುದು. ಹೆಚ್ಚಿನ ಯೂರಿಕ್ ಆಮ್ಲದ ಮಟ್ಟವು ಮೂತ್ರಪಿಂಡಗಳಿಗೆ ಹಾನಿಯನ್ನು ಉಂಟುಮಾಡಬಹುದು. ಚಳಿಗಾಲದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವ ಅಪಾಯವೂ ಇದೆ.
ಇದನ್ನೂ ಓದಿ : ಬೆಳಗಿನ ಬಿಸಿಲಿನಲ್ಲಿ 20 ನಿಮಿಷ ವಾಕಿಂಗ್ ಮಾಡಿ ಈ 5 ಅದ್ಬುತ ಪ್ರಯೋಜನ ಪಡೆಯಿರಿ..!
ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಚಳಿಗಾಲದಲ್ಲಿ ಈ ಹಣ್ಣು ತಿನ್ನಿ :
ಪಪ್ಪಾಯ ಹಣ್ಣು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ . ಚಳಿಗಾಲದಲ್ಲಿ, ಹಸಿ ಪಪ್ಪಾಯ ಅಥವಾ ಮಾಗಿದ ಪಪ್ಪಾಯವನ್ನು ತಿನ್ನುವ ಮೂಲಕ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಪ್ಪಾಯ ಹಣ್ಣಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಸಿ ಜೊತೆಗೆ ಮೆಗ್ನೀಸಿಯಮ್ ಕಂಡುಬರುತ್ತದೆ. ಈ ಪೋಷಕಾಂಶಗಳು ದೇಹದಲ್ಲಿ ಯೂರಿಕ್ ಆಸಿಡ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಆಹಾರದೊಂದಿಗೆ ದೇಹವನ್ನು ತಲುಪುವ ಪ್ಯೂರಿನ್ಗಳು, ಪಿಷ್ಟ ಮತ್ತು ಕೊಬ್ಬುಗಳು ಯೂರಿಕ್ ಆಮ್ಲವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಬಹುದು. ಪಪ್ಪಾಯದಲ್ಲಿ ಜೀರ್ಣಕಾರಿ ಕಿಣ್ವಗಳು ಮತ್ತು ಫೈಬರ್ ಕೂಡಾ ಕಂಡುಬರುತ್ತದೆ. ಈ ಎಲ್ಲಾ ಅಂಶಗಳು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ, ಪಪ್ಪಾಯವನ್ನು ತಿನ್ನುವಾಗ, ಇದು ಪ್ಯೂರಿನ್ ಮತ್ತು ಟಾಕ್ಸಿನ್ ಗಳನ್ನು ಜೀರ್ಣಿಸಿಕೊಳ್ಳಲು ಮತ್ತು ದೇಹದಲ್ಲಿ ಸಂಗ್ರಹವಾಗದಂತೆ ತಡೆಯಲು ಸಹಾಯ ಮಾಡುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಪಪ್ಪಾಯವನ್ನು ಸೇವಿಸುವುದು ಹೇಗೆ ? :
೧.ಮಾಗಿದ ಅಂದರೆ ಹಣ್ಣಾದ ಪಪ್ಪಾಯ (ಬೆಳಗಿನ ಉಪಾಹಾರದಲ್ಲಿ ತಿನ್ನಿ)
೨. ಹಣ್ಣಾದ ಪಪ್ಪಾಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಬಹುದು .
೩, ಇದನ್ನು ಸ್ನಾಕ್ ರೂಪದಲ್ಲಿಯೂ ಸೇವಿಸಬಹುದು.
ಹಸಿ ಪಪ್ಪಾಯವನ್ನು ತಿನ್ನುವ ವಿಧಾನಗಳು :
ಹಸಿ ಪಪ್ಪಾಯದ ಪಲ್ಯ, ಪಪ್ಪಾಯ ಚಟ್ನಿ ಅಥವಾ ಪಪ್ಪಾಯ ಸಲಾಡ್ ಅನ್ನು ದಿನಕ್ಕೆ ಒಮ್ಮೆ ತಿನ್ನಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.