Post Office Scheme : ಭಾರತೀಯ ಅಂಚೆ ಕಚೇರಿಯು ವಿವಿಧ ಉಳಿತಾಯ ಯೋಜನೆಗಳನ್ನು ನಿರ್ವಹಿಸುತ್ತದೆ. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಲಕ್ಷಾಂತರ ಜನರು ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ. ಅದಕ್ಕಾಗಿಯೇ ಜನರು ಅಂಚೆ ಕಚೇರಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. ಪೋಸ್ಟ್ ಆಫೀಸ್‌ನಲ್ಲಿ ಹಣವನ್ನು ಹೂಡಿಕೆ ಮಾಡುವುದು ಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ.
ಜನರು ತಮ್ಮ ಹಣವನ್ನು ಸುರಕ್ಷಿತ ಮತ್ತು ಉತ್ತಮ ರಿಟರ್ನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಅಂಚೆ ಕಚೇರಿಯ ಅಂತಹ ಒಂದು ಯೋಜನೆಯೇ ಗ್ರಾಮ ಸುರಕ್ಷಾ ಯೋಜನೆ. ಈ ಯೋಜನೆಯಲ್ಲಿ ನೀವು ಕೇವಲ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ಗಳಿಸಬಹುದು.
ಇದನ್ನೂ ಓದಿ: ATM PF Withdrawal: ಎಟಿಎಂನಿಂದ ಯಾರು ಮತ್ತು ಹೇಗೆ ಪಿಎಫ್ ಹಣ ಪಡೆಯಲು ಸಾಧ್ಯವಾಗುತ್ತದೆ.. ಸಂಪೂರ್ಣ ಮಾಹಿತಿ ಇಲ್ಲಿದೆ
ಗ್ರಾಮ ಸುರಕ್ಷಾ ಯೋಜನೆಯು ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಯ ಒಂದು ಭಾಗವಾಗಿದೆ. ಈ ವಿಮಾ ಪಾಲಿಸಿಯನ್ನು ದೇಶದ ಗ್ರಾಮೀಣ ಜನರಿಗಾಗಿ 1995 ರಲ್ಲಿ ಪ್ರಾರಂಭಿಸಲಾಯಿತು.
19 ರಿಂದ 55 ವರ್ಷದೊಳಗಿನ ಜನರು ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ 10 ಸಾವಿರದಿಂದ 10 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಸಲು ಹಲವಾರು ಆಯ್ಕೆಗಳಿವೆ.
ನೀವು ಪ್ರೀಮಿಯಂ ಅನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕವಾಗಿ ಪಾವತಿಸಬಹುದು. ಗ್ರಾಮ ಸುರಕ್ಷಾ ಯೋಜನೆಯ ಬಗ್ಗೆ ಒದಗಿಸಿದ ಮಾಹಿತಿಯ ಪ್ರಕಾರ, ಈ ಯೋಜನೆಯಡಿ ಒಬ್ಬ ವ್ಯಕ್ತಿಯು ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿದರೆ 35 ಲಕ್ಷ ವರೆಗೆ ಲಾಭ ಪಡೆಯಬಹುದು. ನೀವು 19 ನೇ ವಯಸ್ಸಿನಲ್ಲಿ ಗ್ರಾಮ ಸುರಕ್ಷಾ ಯೋಜನೆಯನ್ನು ಮಾಡಿದರೆ 60 ವರ್ಷ ವಯಸ್ಸಿನವರೆಗೆ ಹೂಡಿಕೆ ಮಾಡುವುದರಿಂದ ನಿಮಗೆ 34.60 ಲಕ್ಷ ರೂಪಾಯಿ ಲಾಭ ಸಿಗುತ್ತದೆ.
ಇದನ್ನೂ ಓದಿ: Income Tax Alert: ನೀವು ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದಿದ್ದರೂ ಐಟಿಆರ್ ಫೈಲ್ ಮಾಡಿ, ಈ 10 ಪ್ರಯೋಜನಗಳು ಸಿಗುತ್ತವೆ..!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.