ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ ತನ್ನ ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿದೆ. ಯಾವ ಗ್ರಾಹಕರು ದೀರ್ಘಕಾಲದವರೆಗೆ ತನ್ನ ಪ್ಯಾನ್, ಫಾರ್ಮ್ 60 ಅಥವಾ ಡೇಟ್ ಆಫ್ ಬರ್ತ್ ಅಪ್ಡೇಟ್ ಮಾಡಿಲ್ಲವೋ ಅವರು ಶೀಘ್ರದಲ್ಲಿಯೇ ಈ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಬೇಕು ಎಂದು ಹೇಳಿದೆ. ಒಂದು ವೇಳೆ ಈ ರೀತಿ ಮಾಡದೆ ಹೋದಲ್ಲಿ ಅಂತಹ ಗ್ರಾಹಕರ ಖಾತೆಯನ್ನು ಫ್ರೀಎಜ್ ಮಾಡಲಾಗುವುದು ಅಂದರೆ ಆ ಖಾತೆಗಳ ವ್ಯವಹಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಇದಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಕಳುಹಿಸಿರುವ ಸಂದೇಶದ ಪ್ರಕಾರ , ಮಾಹಿತಿ ಅಪ್ಡೇಟ್ ಕುರಿತು sms ಸಂದೇಶ ಸಿಕ್ಕ 15 ದಿನಗಳ ಒಳಗೆ ಗ್ರಾಹಕರು ಈ ಮಾಹಿತಿಯನ್ನು ಒದಗಿಸಬೇಕು. ಹೀಗೆ ಮಾಡದೆ ಹೋದಲ್ಲಿ 15 ದಿನಗಳಲ್ಲಿ ಖಾತೆ ಫ್ರೀಜ್ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಈ ಮಾಹಿತಿಗಳನ್ನು ಅಪ್ಡೇಟ್ ಮಾಡಿಸಲು ಗ್ರಾಹಕರು ತಮ್ಮ ಹೋಮ್ ಬ್ರಾಂಚ್ ನಲ್ಲಿ ವೋಟರ್ ಐಡಿ, ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ ಇರುವ ಲೇಟರ್, ಮನರೇಗಾ ಕಾರ್ಡ್, ಪಾಸ್ಪೋರ್ಟ್, NPR ಇತ್ಯಾದಿಗಳ ಫೋಟೋ ಕಾಪಿ ಸಲ್ಲಿಸಬೇಕು. ಆದರೆ ಈ ದಾಖಲೆಗಳಲ್ಲಿ ಜನನ ತಿಥಿ ಇರುವುದು ಅನಿವಾರ್ಯವಾಗಿದೆ.
SBI ವಿಲೀನ, ಬ್ಯಾಂಕ್ ಆಫ್ ಬರೋಡಾ ವಿಲೀನದ ಬಳಿಕ ಕೇಂದ್ರ ಸರ್ಕಾರ 10 ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಘೋಷಿಸಿದೆ. ಬ್ಯಾಂಕ್ ಆಫ್ ಬಡೋದಾನಲ್ಲಿ ಡೆನಾ ಬ್ಯಾಂಕ್ ಹಾಗೂ ವಿಜಯ್ ಬ್ಯಾಂಕ್ ಗಳು ವಿಲೀನಗೊಂಡಿವೆ. ಇದಾದ ಬಳಿಕ ಆರು ಬ್ಯಾಂಕ್ ಗಳಾಗಿರುವ ಆಂಧ್ರಾ ಬ್ಯಾಂಕ್, ಅಲಹಾಬಾದ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸಿಂಡಿಕೇಟ್ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಗಳು ವಿಲೀನ ಪ್ರಕ್ರಿಯೇ ನಡೆದಿತ್ತು.
ಕೊವಿಡ್ 19 ಮಹಾಮಾರಿಯ ಹಿನ್ನೆಲೆ ಬ್ಯಾಂಕ್ ಆಫ್ ಬಡೋದಾ ತನ್ನ ಗ್ರಾಹಕರಿಗಾಗಿ ಬಡೋದಾ ಪರ್ಸನಲ್ ಲೋನ್ ಕೊವಿಡ್ 19 ಬಿಡುಗಡೆಗೊಳಿಸಿದೆ. ಬ್ಯಾಂಕ್ ನ ಸದ್ಯದ ಗ್ರಾಹಕರಿಗೆ ಇದು ಲಿಕ್ವಿಡಿಟಿ ಸಪೋರ್ಟ್ ಒದಗಿಸಲಿದೆ. 5 ಲಕ್ಷ ರೂ.ಗಳ ಗರಿಷ್ಟ ಮಿತಿಯೊಂದಿಗೆ ಗ್ರಾಹಕರು ಈ ವೈಯಕ್ತಿಕ ಸಾಲ ಪಡೆಯಲು ತಮ್ಮ ಹೋಮ್ ಬ್ರಾಂಚ್ ಗೆ ಭೇಟಿ ನೀಡಬಹುದಾಗಿದೆ.
ಇದೊಂದು ವಿಶೇಷ ರೀತಿಯ ವೈಯಕ್ತಿಕ ಸಾಲವಾಗಿದ್ದು , ಇದಕ್ಕಾಗಿ ಬ್ಯಾಂಕ್ ನಿಯಮಿತ ಸಾಲ ಯೋಜನೆಯ ಹೋಲಿಕೆಯಲ್ಲಿ ಬಡ್ಡಿ ದರವನ್ನು ತುಂಬಾ ಕಡಿಮೆ ನಿಗದಿ ಪಡಿಸಿದೆ. ಸೆಪ್ಟೆಂಬರ್ 30ರವರೆಗೆ ಗ್ರಾಹಕರು ಈ ಸಾಲದ ಲಾಭ ಪಡೆಯಬಹುದು.