ಬಿಜೆಪಿ ಮನುಷ್ಯತ್ವ ಇಲ್ಲದ ಡೋಂಗಿ ಪಕ್ಷ-ಸಿದ್ದರಾಮಯ್ಯ

   

Last Updated : Feb 10, 2018, 07:58 PM IST
ಬಿಜೆಪಿ ಮನುಷ್ಯತ್ವ ಇಲ್ಲದ ಡೋಂಗಿ ಪಕ್ಷ-ಸಿದ್ದರಾಮಯ್ಯ  title=

ಹೊಸಪೇಟೆ: . ಬಿಜೆಪಿ ಪಕ್ಷವು ಮನುಷ್ಯತ್ವ ಇಲ್ಲದ ಡೋಂಗಿ ಪಕ್ಷ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸಪೇಟೆಯ ಮುನ್ಸಿಪಲ್ ಮೈದಾನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಮಾತನಾಡುತ್ತಾ ಬಿಜೆಪಿ ವಿರುದ್ದ ಮಾತಿನ ಚಾಟಿ ಬೀಸಿದರು. 

ನಮ್ಮ ಆಡಳಿತದಲ್ಲಿ ಜನರಿಗೆ ನೀಡಿರುವ ಎಲ್ಲ ಭರವಸೆಗಳನ್ನು ಈಡೆರಿಸಿದ್ದೇವೆ. ನಮ್ಮ ಸರ್ಕಾರದ ಯಾವ  ಕಾರ್ಯಕ್ರಮಗಳು ಯಾವುದೇ ಜಾತಿಗೆ ಸೀಮಿತವಾಗಿಲ್ಲ,ರಾಜ್ಯದ  90 ರಷ್ಟು ಜನರಿಗೆ ಒಂದಲ್ಲ ಒಂದು  ರೀತಿಯ ಕಾರ್ಯಕರ್ಮವನ್ನು ನೀಡುವುದರ  ಮೂಲಕ ಬಡವರಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಈ ಸಂದರ್ಭದಲ್ಲಿ ತಿಳಿಸಿದರು.

ಇನ್ನು ಮುಂದುವರೆದು ಮಾತನಾಡಿದ ಅವರು ಈ ನಾಡಿನ ಜನರು ಬಿಜೆಪಿಯ ಅಧಿಕಾರವನ್ನು ನೋಡಿದ್ದಾರೆ.ಈ ನಾಡಿನ ಸಂಪತ್ತನ್ನು ಲಜ್ಜೆಗೆಟ್ಟು ಲೂಟಿ ಹೊಡೆದ ಯಾವುದಾದರು ಸರ್ಕಾರ ಇದ್ದರೆ ಅದು ಬಿಜೆಪಿಯ ಸರ್ಕಾರ ಎಂದು ತಿಳಿಸಿದರು.  

ಮೋದಿ ಮೊನ್ನೆ ಬೆಂಗಳೂರಿಗೆ  ಬಂದಾಗ ಈ ದೇಶದ ಪ್ರಧಾನಿ ಮಂತ್ರಿಗಳ ರೀತಿ ಭಾಷಣ ಮಾಡಲಿಲ್ಲ ಬದಲಾಗಿ  ತಾವು ಪ್ರಧಾನಿಗಳು ಎನ್ನುವುದನ್ನು ಮರೆತು ಆಧಾರರಹಿತ ಆರೋಪಗಳನ್ನು ನಮ್ಮ ಸರ್ಕಾರಗಳ ಮೇಲೆ ಮಾಡಿದರು. ಪಕ್ಕದಲ್ಲೇ ಕುಳಿತಿದ್ದ ಭ್ರಷ್ಟಾಚಾರದ ಆರೋಪಗಳನ್ನು  ಹೊತ್ತಿದ್ದ ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ ಮರೆತಿದ್ದರು ಎಂದು ಕಿಡಿಕಾರಿದರು. 

ನರೇಂದ್ರ ಮೊದಿಯವರ್ರೆ ನೀವು ಮುಖ್ಯಮಂತ್ರಿಯಾಗಿದ್ದಾಗ ಗುಜರಾತನಲ್ಲಿ  ಏನಾಗಿತ್ತು ಉತ್ತರ ಪ್ರದೇಶದಲ್ಲಿಯಲ್ಲಿ ಏನಾಗುತ್ತಿದೆ,ಇವೆಲ್ಲಾ ನಿಮಗೆ ಕಾಣಿಸುತ್ತಿಲ್ಲವೇ? ಸುಳ್ಳಿನ ಕಂತೆಯನ್ನು ಬಿಡುವ ಪ್ರಯತ್ನ ಮಾಡುವುದರಲ್ಲೇ ಇದ್ದೀರಿ ಎಂದು ಆರೋಪಿಸಿದರು. ಅಮಿತ ಶಾ ಜೈಲಿಗೆ ಹೋಗಿರುವುದನ್ನು ಮರೆತು ಬಿಟ್ಟಿರೆ, ಗೊದ್ರಾವನ್ನು ಮರೆತು ಬಿಟ್ಟಿರೆ, ಕರ್ನಾಟಕದ  ಜನರು ಜ್ಯಾತ್ಯಾತೀತ ತತ್ವಕ್ಕೆ ಬದ್ದರಾದವರು ,ಬಸವಣ್ಣ, ಕುವೆಂಪು, ಕನಕದಾಸ್ ರ ನಾಡಿದು ಇಲ್ಲಿ ಧರ್ಮಗಳ ಮತ್ತು ಕೋಮುಗಳ ನಡುವೆ ಗಲಭೆ ಹಚ್ಚುವ ನಿಮ್ಮ ಪ್ರಯತ್ನ ಕೇವಲ ಒಂದು ಭ್ರಮೆ. ಅದೆಂದಿಗೂ ಕೂಡಾ ಈಡೆರಲು ಸಾದ್ಯವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಮ್ಮ ಸರ್ಕಾರದ ವಿರುದ್ದ ಯಾವುದೇ ಆಡಳಿತ ವಿರೋಧಿ ಅಲೆಯಿಲ್ಲ ಈ ಸಂಗತಿಯನ್ನು ನಾನು  ಒಂದು ತಿಂಗಳಲ್ಲಿ ನನ್ನ ಪ್ರವಾಸದ ವೇಳೆಯಲ್ಲಿ ಕಂಡಿದ್ದೇನೆ,ಆದ್ದರಿಂದ ಕರ್ನಾಟಕದ ಜನತೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಬಯಸಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಪಕ್ಷವು  ಮನುಷ್ಯತ್ವ ಇಲ್ಲದ ಪಕ್ಷ ಡೋಂಗಿ ಪಕ್ಷವಾದರೆ, ಕಾಂಗ್ರೆಸ್  ಪಕ್ಷವು ಎಲ್ಲ ಧರ್ಮ, ಜಾತಿ, ವರ್ಗಗಳ ಹಿತವನ್ನು ಬಯಸುವ ಪಕ್ಷ  ಎಂದು ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದರು. 

ಹುಬ್ಬಳ್ಳಿ-ಧಾರವಾಡ ಭಾಗಗಳಲ್ಲಿ ಕುಡಿಯುವ ನೀರಿಗಾಗಿ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಮೊನ್ನೆ ಪ್ರಧಾನಿ ಮೋದಿ  ಬೆಂಗಳೂರಿಗೆ ಬಂದಾಗ ಮಹಾದಾಯಿ ವಿಚಾರವಾಗಿ ಯಾವುದೇ ಮಾತನ್ನಾಡಲಿಲ್ಲ.  ಈ ವಿಚಾರವಾಗಿ ಹಲವಾರು ಬಾರಿ ಸರ್ವಪಕ್ಷಗಳ ನಿಯೋಗ ತೆಗೆದುಕೊಂಡು ಹೋಗಿ ಕೈ ಮುಗಿದು ಮಹದಾಯಿ ವಿಷಯವನ್ನು ಪರಿಹರಿಸಿ ಎಂದು ಕೈ ಮುಗಿದು ಕೇಳಿದ್ದೇನೆ. ಆದರೆ ಮೋದಿಯವರು ಜಪ್ಪಯ್ಯ ಎನ್ನಲಿಲ್ಲ. ಆದ್ದರಿಂದ ಅವರಿಗೆ ತಕ್ಕ ಪಾಠವನ್ನು ರಾಜ್ಯದ  ಜನತೆ ಕಲಿಸಬೇಕು ಎಂದು ನಾನು ಕೇಳುಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿನಂತಿಸಿಕೊಂಡರು. 

 

 

 

 

 

Trending News