60 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'..!

ದೀಪಾವಳಿ ಹಬ್ಬಕ್ಕೆ ಪಿಂಚಣಿ ದಾರರಿಗೆ ಕೇಂದ್ರ ಸರ್ಕಾರದಿಂದ ‘ಭರ್ಜರಿ ಗುಡ್ ನ್ಯೂಸ್’

Last Updated : Nov 10, 2020, 03:00 PM IST
  • ದೀಪಾವಳಿ ಹಬ್ಬಕ್ಕೆ ಪಿಂಚಣಿ ದಾರರಿಗೆ ಕೇಂದ್ರ ಸರ್ಕಾರದಿಂದ ‘ಭರ್ಜರಿ ಗುಡ್ ನ್ಯೂಸ್’
  • ದೇಶದಲ್ಲಿ ಸುಮಾರು 60 ಲಕ್ಷ ಪಿಂಚಣಿದಾರರ ಪಿಂಚಣಿಯನ್ನು ದ್ವಿಗುಣಗೊಳಿಸಲು ಚಿಂತನೆ
  • ಪಿಂಚಣಿ ಕನಿಷ್ಠ ಒಂದು ಸಾವಿರ ರೂಪಾಯಿಗಳಿದ್ದರೆ, ಅದು ಎರಡು ಸಾವಿರ ರೂ. ಗಳಿಗೆ ಹೆಚ್ಚಾಗುತ್ತೆ
60 ಲಕ್ಷ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ 'ಭರ್ಜರಿ ಗುಡ್ ನ್ಯೂಸ್'..! title=
Image Courtesy zee business

ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕೆ ಪಿಂಚಣಿ(Pension) ದಾರರಿಗೆ ‘ಭರ್ಜರಿ ಗುಡ್ ನ್ಯೂಸ್’ ಒಂದನ್ನ ನೀಡಲು ಮುಂದಾಗಿದ್ದು, ದೇಶದಲ್ಲಿ ಸುಮಾರು 60 ಲಕ್ಷ ಪಿಂಚಣಿದಾರರ ಪಿಂಚಣಿಯನ್ನು ದ್ವಿಗುಣಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.

PF ಖಾತೆದಾರರ ಗಮನಕ್ಕೆ: ಸರ್ಕಾರದಿಂದ ನಿಮ್ಗೆ ಸಿಗುತ್ತೆ ʼ₹ 50 ಸಾವಿರʼ! ಹೇಗೆ ಗೊತ್ತಾ?

ಪಿಂಚಣಿದಾರರು ದೀಪಾವಳಿಯಂದು ಇಪಿಎಫ್‌ಒ(EPFO)ನಿಂದ ಹೆಚ್ಚಿದ ಪಿಂಚಣಿ ಉಡುಗೊರೆಯನ್ನ ಪಡೆಯಬಹುದು. ಈ ನಿಟ್ಟಿನಲ್ಲಿ ಕನಿಷ್ಠ ಪಿಂಚಣಿ ಹೆಚ್ಚಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಕನಿಷ್ಠ ಪಿಂಚಣಿಯನ್ನ ಸಾವಿರದಿಂದ ಎರಡು ಸಾವಿರಕ್ಕೆ ಹೆಚ್ಚಿಸಲು ಕಾರ್ಮಿಕ ಸಚಿವಾಲಯ ಪ್ರಸ್ತಾಪಿಸಿತ್ತು ಎಂದು ಹೇಳಲಾಗುತ್ತಿದೆ.

EPFO ಪಿಂಚಣಿದಾರರಿಗೆ ಇಲ್ಲಿದೆ ಒಂದು ನೆಮ್ಮದಿಯ ಸುದ್ದಿ

ಸರ್ಕಾರದಿಂದ ಅನುಮೋದನೆ ಪಡೆದ ಕೂಡಲೇ ಇದನ್ನು ಅಧಿಕೃತವಾಗಿ ಘೋಷಿಸಬಹುದು. ಇನ್ನು ಅದಾಗ್ಲೇ ಕನಿಷ್ಠ ಪಿಂಚಣಿಯನ್ನ 2,000 ರೂ.ಗಳಿಂದ 3,000 ರೂ.ಗೆ ಹೆಚ್ಚಿಸಲು ಕೇಂದ್ರೀಯ ಟ್ರಸ್ಟಿಗಳ ಮಂಡಳಿಗೆ ಸೂಚಿಸಲಾಗಿದೆ. ಅದ್ರಂತೆ, ಪಿಂಚಣಿ ದ್ವಿಗುಣಗೊಳಿಸುವುದರಿಂದ ಸರ್ಕಾರಕ್ಕೆ 2000 ರಿಂದ 2500 ಕೋಟಿ ವೆಚ್ಚವಾಗಲಿದೆ. ಈ ಹೆಚ್ಚಳದಿಂದ ಸುಮಾರು 60 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

EPF ಖಾತೆಯ ಎಲ್ಲಾ ಮಾಹಿತಿ Whatsappನಲ್ಲಿ ಲಭ್ಯ, ಇಲ್ಲಿದೆ ಸಹಾಯವಾಣಿ ನಂಬರ್

ಪಿಂಚಣಿ ಹೆಚ್ಚಳದಿಂದ ಈ ಜನರಿಗೆ ಲಾಭ ಸಿಗುತ್ತೆ: ಇಪಿಎಫ್‌ಒ(EPFO) ವ್ಯಾಪ್ತಿಗೆ ಬರುವ ಸಂಘಟಿತ ವಲಯದ ಕಂಪನಿಗಳ ನೌಕರರು ಈ ಪ್ರಯೋಜನ ಪಡೆಯುತ್ತಾರೆ. ಕಾರ್ಮಿಕ ಸಚಿವಾಲಯದ ಈ ಪ್ರಸ್ತಾವನೆಯೊಂದಿಗೆ, ಪಿಂಚಣಿ ಕನಿಷ್ಠ ಒಂದು ಸಾವಿರ ರೂಪಾಯಿಗಳಿದ್ದರೆ, ಅದು ಎರಡು ಸಾವಿರ ರೂಪಾಯಿಗಳಿಗೆ ಹೆಚ್ಚಾಗುತ್ತೆ. ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ EPF ಗೆ ಕೊಡುಗೆ ನೀಡುತ್ತಾರೆ ಎಂದು ತಿಳಿದಿದೆ. ಇದು ನೌಕರರ ಮೂಲ ವೇತನ+ಡಿಎಯ 12-12% ಅನ್ನ ಹೊಂದಿರುತ್ತೆ. ನೌಕರರ ಪಿಂಚಣಿ ಯೋಜನೆ ಅಥವಾ ಇಪಿಎಸ್, ಕಂಪನಿಯ 12% ಕೊಡುಗೆಯಲ್ಲಿ 8.33% ನಷ್ಟಿದೆ.

 

 

Trending News