IND vs AUS: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ !

India vs Australia : ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಟೀಮ್ ಇಂಡಿಯಾಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

Written by - Yashaswini V | Last Updated : Jan 12, 2021, 11:10 AM IST
  • ಟೀಮ್ ಇಂಡಿಯಾದ ಸ್ಟಾರ್ ಫಾಸ್ಟ್ ಬೌಲರ್ ಜಸ್ಪ್ರಿತ್ ಬುಮ್ರಾ ಕೂಡ ಗಾಯದಿಂದ ಬಳಲುತ್ತಿದ್ದಾರೆ
  • ಸಿಡ್ನಿಯಲ್ಲಿ ಫೀಲ್ಡಿಂಗ್ ಮಾಡುವಾಗ ಜಸ್ಪ್ರೀತ್ ಬುಮ್ರಾ ಅವರಿಗೆ ಹೊಟ್ಟೆಯ ತೊಂದರೆ ಕಾಣಿಸಿಕೊಂಡಿದೆ
  • ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿರುವ ಜಸ್ಪ್ರಿತ್ ಬುಮ್ರಾ
IND vs AUS: ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ! title=
Jasprit Bumrah is ruled out of brisbane test

ಸಿಡ್ನಿ: ಟೀಮ್ ಇಂಡಿಯಾದ ಹೆಚ್ಚಿನ ಆಟಗಾರರು ಗಾಯಗೊಂಡಿದ್ದು, ಮಂಗಳವಾರ ಭಾರತ ತಂಡವು ಮತ್ತೊಂದು ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾದ ಸ್ಟಾರ್ ಫಾಸ್ಟ್ ಬೌಲರ್ ಜಸ್ಪ್ರಿತ್ ಬುಮ್ರಾ ಕೂಡ ಗಾಯದಿಂದ ಬಳಲುತ್ತಿದ್ದು, ಇದರಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.

ನಾಲ್ಕನೇ ಮತ್ತು ಅಂತಿಮ ಪಂದ್ಯದಿಂದ ಹೊರಗುಳಿದ ಬುಮ್ರಾ :
ಟೀಮ್ ಇಂಡಿಯಾದ ವೇಗದ ಬೌಲಿಂಗ್ ದಾಳಿಯಲ್ಲಿ ಮುಂಚೂಣಿಯಲ್ಲಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಹೊಟ್ಟೆ ನೋವಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತದ ಫಾಸ್ಟ್ ಬೌಲರ್ ಬುಮ್ರಾ ಅವರಿಗೆ ಈ ಸಮಸ್ಯೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ -  IND vs AUS Sydney Test: ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ

ಮಾಹಿತಿಯ ಪ್ರಕಾರ, ಜಸ್ಪ್ರಿತ್ ಬುಮ್ರಾ ಅವರ ಸ್ಕ್ಯಾನ್ ವರದಿಯಲ್ಲಿ ಸ್ಟ್ರೆಚ್ ವರದಿಗಳು ಬಹಿರಂಗಗೊಂಡಿವೆ ಮತ್ತು ಮುಂಬರುವ ಇಂಗ್ಲೆಂಡ್ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ತಂಡದ ಸದಸ್ಯರ ಬಗ್ಗೆ ಭಾರತೀಯ ತಂಡದ ಆಡಳಿತವು ವಿಶೇಷ ಕಾಳಜಿ ವಹಿಸಿದೆ ಎಂದು ಹೇಳಲಾಗುತ್ತಿದೆ.

'ಸಿಡ್ನಿಯಲ್ಲಿ ಫೀಲ್ಡಿಂಗ್ ಮಾಡುವಾಗ ಜಸ್ಪ್ರೀತ್ ಬುಮ್ರಾ ಅವರಿಗೆ ಹೊಟ್ಟೆಯ ತೊಂದರೆ ಕಾಣಿಸಿಕೊಂಡಿದೆ. ಹಾಗಾಗಿ ಅವರು ಬ್ರಿಸ್ಬೇನ್ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ. ಆದರೆ ಅವರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ ' ಎಂದು ಬಿಸಿಸಿಐ (BCCI) ಮೂಲವೊಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದೆ.

ಇದನ್ನು ಓದಿ - IND vs AUS : ರಾಷ್ಟ್ರಗೀತೆ ಹಾಡುವ ವೇಳೆ ಕಣ್ಣಲ್ಲಿ ನೀರು ತುಂಬಿಕೊಂಡ Mohammed Siraj

ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ ಮೊಹಮ್ಮದ್ ಸಿರಾಜ್ (Mohammed Siraj) ಭಾರತ ತಂಡಕ್ಕೆ ಬೌಲಿಂಗ್ ವಿಷಯದಲ್ಲಿ ಆಸರೆಯಾಗಲಿದ್ದಾರೆ ಮತ್ತು ಜನವರಿ 15 ರಿಂದ ಪ್ರಾರಂಭವಾಗುವ ಬ್ರಿಸ್ಬೇನ್ ಟೆಸ್ಟ್ನಲ್ಲಿ ನವದೀಪ್ ಸೈನಿ, ಶಾರ್ದುಲ್ ಠಾಕೂರ್ ಮತ್ತು ಟಿ ನಟರಾಜನ್ ಅವರನ್ನು ಬೆಂಬಲಿಸುವ ನಿರೀಕ್ಷೆಯಿದೆ.

ವಿಹಾರಿ ಕೂಡ ಕೊನೆಯ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ :
ಸಿಡ್ನಿಯಲ್ಲಿ ನಡೆದ ಪಂದ್ಯ ಡ್ರಾನಲ್ಲಿ ಅಂತ್ಯ ಆಗಿದೆ. ಆದರೆ ಮೂರನೇ ಟೆಸ್ಟ್ ಹೀರೋ ಹನುಮಾ ವಿಹಾರಿ (Hanuma Vihari) ಮಂಡಿರಜ್ಜು ಗಾಯದಿಂದಾಗಿ ಬ್ರಿಸ್ಬೇನ್‌ನಲ್ಲಿ ನಾಲ್ಕನೇ ಟೆಸ್ಟ್ ಆಡಲು ಸಾಧ್ಯವಾಗುವುದಿಲ್ಲ.

ಪಂದ್ಯದ ನಂತರ ಹನುಮಾ ವಿಹಾರಿ ಅವರನ್ನು ಸ್ಕ್ಯಾನ್‌ಗಾಗಿ ಕರೆದೊಯ್ಯಲಾಯಿತು. ಇದರ ವರದಿಯನ್ನು ಮಂಗಳವಾರ ಸಂಜೆ ವೇಳೆಗೆ ನಿರೀಕ್ಷಿಸಲಾಗಿದೆ. ಆದರೆ ಜನವರಿ 15 ರಿಂದ ಪ್ರಾರಂಭವಾಗುವ ಮುಂದಿನ ಪಂದ್ಯದ ವೇಳೆಗೆ ವಿಹಾರಿ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News