Union Budget-2021: 'ರೈತ ಸಮುದಾಯಕ್ಕೆ' ಭರ್ಜರಿ ಸಿಹಿಸುದ್ದಿ..!

ಪ್ರಸಕ್ತ ವರ್ಷ ಗೋಧಿ ಖರೀದಿಗೆ 75 ಸಾವಿರ ಕೋಟಿ ರೂ. ವ್ಯಯ. 40 ಲಕ್ಷ ರೈತರಿಗೆ ಇದರ ಲಾಭ ಸಿಕ್ಕಿದೆ. 1.ಲಕ್ಷ 72 ಸಾವಿರ ಕೋಟಿ ರೂ. ಮೊತ್ತದಲ್ಲಿ ಭತ್ತ ಖರೀದಿಗೆ ಕ್ರಮ

Last Updated : Feb 1, 2021, 12:28 PM IST
  • ಕರೋನದ ದಿಂದ ಕಂಗೆಟ್ಟಿರುವ ದೇಶದ ಅರ್ಥಿಕ ಪರಿಸ್ಥಿತಿಯ ನಡುವೆ ಇಂದು 2021-22 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌
  • ರೈತರ ಆದಾಯ ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬದ್ಧ, ಕೃಷಿವಲಯ ಚೇತರಿಕಗೆ ಕೇಂದ್ರದಿಂದ ಹೊಸ ಯೋಜನೆ.
  • ಪ್ರಸಕ್ತ ವರ್ಷ ಗೋಧಿ ಖರೀದಿಗೆ 75 ಸಾವಿರ ಕೋಟಿ ರೂ. ವ್ಯಯ. 40 ಲಕ್ಷ ರೈತರಿಗೆ ಇದರ ಲಾಭ ಸಿಕ್ಕಿದೆ. 1.ಲಕ್ಷ 72 ಸಾವಿರ ಕೋಟಿ ರೂ. ಮೊತ್ತದಲ್ಲಿ ಭತ್ತ ಖರೀದಿಗೆ ಕ್ರಮ
Union Budget-2021: 'ರೈತ ಸಮುದಾಯಕ್ಕೆ' ಭರ್ಜರಿ ಸಿಹಿಸುದ್ದಿ..! title=

ನವದೆಹಲಿ: ಕರೋನದ ದಿಂದ ಕಂಗೆಟ್ಟಿರುವ ದೇಶದ ಅರ್ಥಿಕ ಪರಿಸ್ಥಿತಿಯ ನಡುವೆ ಇಂದು 2021-22 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್‌ ಅವರು ಮಂಡನೆ ಮಾಡುತ್ತಿದ್ದಾರೆ.

ಈ ನಡುವೆ ಅವರು ಬಜೆಟ್ ಮಂಡನೆ ವೇಳೇಯಲ್ಲಿ , ರೈತ(Farmer)ರ ಆದಾಯ ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬದ್ಧ, ಕೃಷಿವಲಯ ಚೇತರಿಕಗೆ ಕೇಂದ್ರದಿಂದ ಹೊಸ ಯೋಜನೆ. ಪ್ರಸಕ್ತ ವರ್ಷ ಗೋಧಿ ಖರೀದಿಗೆ 75 ಸಾವಿರ ಕೋಟಿ ರೂ. ವ್ಯಯ. 40 ಲಕ್ಷ ರೈತರಿಗೆ ಇದರ ಲಾಭ ಸಿಕ್ಕಿದೆ. 1.ಲಕ್ಷ 72 ಸಾವಿರ ಕೋಟಿ ರೂ. ಮೊತ್ತದಲ್ಲಿ ಭತ್ತ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು. ಪಶುಪಾಲನೆ, ಹೈನುಗಾರಿಕೆ ಕುಕ್ಕುಟೋದ್ಯಮಕ್ಕೆ ಅನುದಾನ ಹೆಚ್ಚಳ ಮಾಡಲಾಗುವುದು 30 ಸಾವಿರ ಕೋಟಿ ರೂ. ಇದ್ದ ಅನುದಾನ 40 ಸಾವಿರ ಕೋಟಿಗೆ ಹೆಚ್ಚಳ ರೈತರ ಸಾಲ ಯೋಜನೆಗೆ 16.5 ಲಕ್ಷ ಕೋಟಿ ರೂ.ನಿಗದಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

Budget 2021: ರೈತರ ಮನವೊಲಿಕೆಗೆ ತಯಾರಿ, ಈ ಯೋಜನೆಗಳ ವಿಸ್ತರಣೆ ಸಾಧ್ಯತೆ

ಬ್ಯಾಂಕ್ ಠೇವಣಿದಾರ ವಿಮೆಗೆ ಹಣದ ಮೊತ್ತ ಏರಿಕೆ 1 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. 6 ವರ್ಷಗಳಲ್ಲಿ ವಿದ್ಯುತ್ ಹಲವು ಸುಧಾರಣೆಗಳನ್ನು ತರಲಾಗಿದೆ. 2.8 ಕೋಟಿ ಮನೆಗಳಲ್ಲಿ 6 ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಹಕರು ಯಾರಿಂದ ಬೇಕಾದ್ರೂ ವಿದ್ಯುತ್ ಖರೀದಿಸಬಹುದು. ನ್ಯಾಷನಲ್ ಡೈಡ್ರೋಜನ್ ಎನರ್ಜಿ ಮಿಷನ್ ಗೆ ಚಾಲನೆ. 2022 ಕ್ಕೆ ನ್ಯಾಷನಲ್ ಹೈಡ್ರೋಜನ್ ಎನರ್ಜಿ ಮಿಷನ್ ಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಪ್ರತಿಯೊಂದು ವಲಯಕ್ಕೂ ವಿಶೇಷ ಕೊಡುಗೆ, ಬಜೆಟ್‌ಗೆ ಮೊದಲು CEA Krishnamurthy Subramanian ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News