Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ 20 ಲಕ್ಷ ರೂ. ಪಡೆಯಿರಿ!

Sukanya Samriddhi Yojana: ಹೆಣ್ಣು ಮಕ್ಕಳು ಲಕ್ಷ್ಮಿಯ ರೂಪ, ನಿಮಗೂ ಹೆಣ್ಣು ಮಕ್ಕಳಿದ್ದರೆ ಮತ್ತು ಅವರ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಈ ಯೋಜನೆ ನಿಮಗೆ ಅನುಕೂಲವಾಗಲಿದೆ.  

Written by - Yashaswini V | Last Updated : Apr 20, 2021, 03:10 PM IST
  • ಹೆಣ್ಣುಮಕ್ಕಳ ಉಜ್ವಲ್ ಭವಿಷ್ಯಕ್ಕಾಗಿ ಸರ್ಕಾರ ಈ ಜನಪ್ರಿಯ ಯೋಜನೆ
  • ನಿಮ್ಮ ಮಗಳಿಗೆ 10 ವರ್ಷ ತುಂಬುವುದರ ಒಳಗೆ ಹೂಡಿಕೆ ಮಾಡಲು ಪ್ರಾರಂಭಿಸಬೇಕಾಗುತ್ತದೆ
  • ಸರ್ಕಾರವು ಈ ಯೋಜನೆ ಮೇಲೆ ವಾರ್ಷಿಕ 7.6% ಬಡ್ಡಿಯನ್ನು ಪಾವತಿಸುತ್ತಿದೆ
Sukanya Samriddhi: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆಯಲ್ಲಿ ದಿನಕ್ಕೆ 131 ರೂ. ಹೂಡಿಕೆ ಮಾಡಿ  20 ಲಕ್ಷ ರೂ. ಪಡೆಯಿರಿ!  title=
Sukanya Samriddhi Yojana

ನವದೆಹಲಿ: Sukanya Samriddhi Yojana- ಹೆಣ್ಣು ಲಕ್ಷ್ಮೀ ಸ್ವರೂಪ. ನಿಮಗೂ ಹೆಣ್ಣು ಮಕ್ಕಳಿದ್ದರೆ ಮತ್ತು ಅವರ ಭವಿಷ್ಯಕ್ಕಾಗಿ ಉತ್ತಮ ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ 131 ರೂಪಾಯಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಹಣ ಉಳಿಸಬಹುದಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ ಅಂತಹ ದೀರ್ಘಾವಧಿಯ ಯೋಜನೆಯಾಗಿದ್ದು, ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯದ ಬಗ್ಗೆ ನೀವು ನಿಶ್ಚಿಂತೆಯಿಂದ ಇರಬಹುದು. ಇದಕ್ಕಾಗಿ, ಹೆಚ್ಚು ಶ್ರಮ ಪಡುವ ಅಗತ್ಯವಿಲ್ಲ. ನಿಮ್ಮ ಮಗಳಿಗೆ 21 ವರ್ಷ ತುಂಬುವ ವೇಳೆಗೆ ನಿಮಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ ಅದಕ್ಕೆ ತಕ್ಕಂತೆ ಹಣ ಹೂಡಿಕೆ ಮಾಡಬಹುದಾಗಿದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
ಹೆಣ್ಣುಮಕ್ಕಳ ಉಜ್ವಲ್ ಭವಿಷ್ಯಕ್ಕಾಗಿ ಸರ್ಕಾರ ಈ ಜನಪ್ರಿಯ ಯೋಜನೆಯನ್ನು ಪರಿಚಯಿಸಿದೆ.  ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ (Sukanya Samriddhi Yojana) ನಿಮ್ಮ ಮಗಳಿಗೆ 10 ವರ್ಷ ತುಂಬುವುದರ ಒಳಗೆ ಖಾತೆಯನ್ನು ತೆರೆಯಬಹುದು. ನೀವು ವಾರ್ಷಿಕವಾಗಿ ಕನಿಷ್ಠ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಇದರಲ್ಲಿ ಹೂಡಿಕೆ ಮಾಡಬಹುದು. ಮಗಳಿಗೆ 21 ವರ್ಷ ತುಂಬಿದಾಗ ಈ ಯೋಜನೆ ಪ್ರಬುದ್ಧವಾಗಿರುತ್ತದೆ. ಆದಾಗ್ಯೂ, ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಯು ಕನಿಷ್ಠ 18 ವರ್ಷ ವಯಸ್ಸಿನ ಮಗಳವರೆಗೆ ಲಾಕ್ ಆಗುತ್ತದೆ. 18 ವರ್ಷಗಳ ನಂತರವೂ, ಅವರು ಈ ಯೋಜನೆಯಿಂದ ಒಟ್ಟು ಮೊತ್ತದ 50 ಪ್ರತಿಶತವನ್ನು ಹಿಂಪಡೆಯಬಹುದು. ಈ ಹಣವನ್ನು ಮಗಳ ಪದವಿ ಶಿಕ್ಷಣ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ಬಳಸಬಹುದು. ಇದರ ನಂತರ, ಆಕೆಗೆ 21 ವರ್ಷ ತುಂಬಿದ ನಂತರವೇ ಪೂರ್ಣ ಹಣವನ್ನು ಹಿಂಪಡೆಯಬಹುದು.

ಇದನ್ನೂ ಓದಿ - ತಿಂಗಳಿಗೆ ಕೇವಲ ರೂ.500 ಹೂಡಿಕೆ ಮಾಡಿ ಲಕ್ಷಾಂತರ ಗಳಿಕೆ ಮಾಡುವ ಟ್ರಿಕ್ ಇಲ್ಲಿದೆ

15 ವರ್ಷಗಳವರೆಗೆ ಮಾತ್ರ ಹಣ ಠೇವಣಿ ಮಾಡಬಹುದು:
ಈ ಯೋಜನೆಯ ಬಹಳ ಮುಖ್ಯವಾದ ವಿಷಯವೆಂದರೆ ನೀವು ಪೂರ್ಣ 21 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬೇಕಾಗಿಲ್ಲ, ಖಾತೆ ತೆರೆದ ನಂತರ ನೀವು ಕೇವಲ 15 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬಹುದು, ಆದರೆ ಮಗಳಿಗೆ 21 ವರ್ಷಗಳು ತುಂಬುವವರೆಗೆ ನೀವು ಹೂಡಿಕೆ ಮಾಡಿರುವ ಹಣದ ಮೇಲೆ ಬಡ್ಡಿ ಸಿಗುತ್ತದೆ. ಪ್ರಸ್ತುತ, ಸರ್ಕಾರವು ಈ ಯೋಜನೆ ಮೇಲೆ ವಾರ್ಷಿಕ 7.6% ಬಡ್ಡಿಯನ್ನು ಪಾವತಿಸುತ್ತಿದೆ. ಈ ಯೋಜನೆಯಲ್ಲಿ ಮನೆಯ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಖಾತೆ ತೆರೆಯಬಹುದು. ಒಂದೊಮ್ಮೆ ಮೊದಲೇ ಒಂದು ಹೆಣ್ಣು (Daughter) ಮಗು ಇದ್ದು ಎರಡನೇ ಬಾರಿಗೆ ಅವಳಿ ಹೆಣ್ಣು ಮಕ್ಕಳಾಗಿದ್ದರೆ ಆ ಸಂದರ್ಭದಲ್ಲಷ್ಟೇ 3 ಹೆಣ್ಣುಮಕ್ಕಳೂ ಸಹ ಯೋಜನೆಯ ಲಾಭವನ್ನು ಪಡೆಯಬಹುದು.

ಹೂಡಿಕೆಗೆ ಈ ರೀತಿ ಇರಲಿ ತಯಾರಿ:
ಮೊದಲನೆಯದಾಗಿ, ನಿಮ್ಮ ಮಗಳಿಗೆ 21 ವರ್ಷ ತುಂಬುವ ವೇಳೆ ನಿಮಗೆ ಎಷ್ಟು ಮೊತ್ತ ಬೇಕಾಗುತ್ತದೆ ಎಂದು ನೀವು ನಿರ್ಧರಿಸಬೇಕು. ನೀವು ಬೇಗನೆ ಯೋಜನೆಯನ್ನು ಪ್ರಾರಂಭಿಸಿದರೆ, ನೀವು ಈ ಯೋಜನೆ ಮೆಚ್ಯುರಿಟಿ ವೇಳೆಗೆ ಅಂದರೆ, ಮಗಳಿಗೆ 21 ವರ್ಷ ವಯಸ್ಸಾದಾಗ ಹೆಚ್ಚಿನ ಮೊತ್ತವನ್ನು ಪಡೆಯುತ್ತೀರಿ.

ಹೂಡಿಕೆ ಯಾವಾಗ ಪ್ರಾರಂಭಿಸಬೇಕು?
ನಿಮ್ಮ ಮಗಳಿಗೆ 10 ವರ್ಷ ತುಂಬುವುದರ ಒಳಗೆ ಹೂಡಿಕೆ ಮಾಡಲು ಪ್ರಾರಂಭಿಸಬೇಕಾಗುತ್ತದೆ. ನೀವು ನಿಮ್ಮ ಮಗಳಿಗೆ  10 ವರ್ಷ ಇದ್ದಾಗ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರಿ ಎಂದು ಭಾವಿಸೋಣ... ನೀವು ಕೇವಲ 11 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಅದೇ ರೀತಿ ನಿಮ್ಮ ಮಗಳಿಗೆ 5 ವರ್ಷವಿದ್ದಾಗ ಹೂಡಿಕೆ ಮಾಡಲು  ಪ್ರಾರಂಭಿಸಿದರೆ, ನಿಮಗೆ 16 ವರ್ಷಗಳ ಕಾಲ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಈ ಕಾರಣದಿಂದಾಗಿ ಮುಕ್ತಾಯದ ಮೊತ್ತವು ಹೆಚ್ಚಾಗುತ್ತದೆ. ಈಗ ನಿಮ್ಮ ಮಗಳಿಗೆ 2021 ರಲ್ಲಿ 1 ವರ್ಷ ಮತ್ತು ನೀವು ಈಗಲೇ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಅದು 2042 ರಲ್ಲಿ ಮೆಚ್ಯೂರ್ ಆಗಲಿದೆ ಮತ್ತು ಈ ಯೋಜನೆಯ ಗರಿಷ್ಠ ಲಾಭವನ್ನು ನೀವು ಪಡೆಯಬಹುದು.

ಇದನ್ನೂ ಓದಿ - ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು

131 ರೂಪಾಯಿ 20 ಲಕ್ಷ ರೂಪಾಯಿಗಳಾಗುವುದು ಹೇಗೆ?
>> ನಿಮ್ಮ ಮಗಳಿಗೆ ಒಂದು ವರ್ಷವಿದ್ದಾಗ ಹೂಡಿಕೆ ಮಾಡಲು ಪ್ರಾರಂಭಿಸಿದರೆ ಅಂದರೆ ನೀವು ನಿಮ್ಮ ಒಂದು ವರ್ಷದ ಮಗುವಿಗೆ 2021ರಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುತ್ತೀರಿ ಎಂದು ಭಾವಿಸೋಣ
>> ನೀವು ಪ್ರತಿದಿನ 131 ರೂ. ಎಂದರೆ ಪ್ರತಿ ತಿಂಗಳು 3930 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.
>> ನೀವು ಪ್ರತಿ ತಿಂಗಳು 3930 ರೂ. ಠೇವಣಿ ಇಟ್ಟರೆ, ವರ್ಷದಲ್ಲಿ 47,160 ರೂ. ಠೇವಣಿ ಮಾಡಿದಂತಾಗುತ್ತದೆ.
>> ನೀವು ಈ ಹೂಡಿಕೆಗಳನ್ನು ಕೇವಲ 15 ವರ್ಷಗಳವರೆಗೆ ಮಾಡಿದರೆ, ಒಟ್ಟು ಹೂಡಿಕೆ ಮೊತ್ತ 7,07,400 ರೂ.
>> ನೀವು ವಾರ್ಷಿಕ 7.6% ಬಡ್ಡಿಯ ಪ್ರಕಾರ ಒಟ್ಟು 12,93,805 ರೂ. ಬಡ್ಡಿಯನ್ನು ಪಡೆಯುತ್ತೀರಿ.
>> 2042 ರಲ್ಲಿ, ಮಗಳಿಗೆ 21 ವರ್ಷ ವಯಸ್ಸಾದಾಗ, ಯೋಜನೆ ಮೆಚ್ಯೂರಿಟಿ ಆಗಲಿದೆ. ಆ ಸಮಯದಲ್ಲಿ ಒಟ್ಟು ಮುಕ್ತಾಯ ಮೊತ್ತವು 20,01,205 ರೂ. ಆಗಿರುತ್ತದೆ.

ನೀವು ಮುಖ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಲೆಕ್ಕಾಚಾರ ಇದು. ದಿನಕ್ಕೆ 131 ರೂಪಾಯಿಗಳನ್ನು ಉಳಿಸುವ ಮೂಲಕ, ನಿಮ್ಮ ಮಗಳ ಭವಿಷ್ಯವನ್ನು ನೀವು ಸದೃಢವಾಗಿಸಬಹುದು. ಪ್ರತಿಯೊಂದು ಹೂಡಿಕೆಯಲ್ಲೂ ಒಂದೇ ಮೂಲ ಮಂತ್ರವಿರುತ್ತದೆ. ಸರಿಯಾಗಿ ಯೋಚಿಸಿ ಯೋಜನೆ ಬಗ್ಗೆ ಮಾಹಿತಿ ಪಡೆದು ಮೊದಲೇ ಹೂಡಿಕೆ ಪ್ರಾರಂಭಿಸುವುದು. ನೀವು ಬೇಗನೆ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ದೊರೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News