Skin Care- ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ ಈ ಬಗ್ಗೆ ಎಚ್ಚರವಹಿಸಿ

ಪಾರ್ಲರ್‌ನಲ್ಲಿ ಬ್ಯೂಟಿಷಿಯನ್ ಬಳಸುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಜನರು ಗಮನ ಹರಿಸುವುದಿಲ್ಲ.

Written by - Yashaswini V | Last Updated : Apr 24, 2021, 03:49 PM IST
  • ನೀವು ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ, ಬ್ಲೀಚ್ ಬ್ರಾಂಡ್ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಿ
  • ನಿಮ್ಮ ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ನೀವು ಬ್ಲೀಚ್ ಅನ್ನು ಬಳಸಬಹುದು
  • ಮುಖಕ್ಕೆ ಬ್ಲೀಚ್ ಬಳಸುವ ಮೊದಲು ಬ್ಲೀಚ್‌ನ ಮುಕ್ತಾಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿ
Skin Care- ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ ಈ ಬಗ್ಗೆ ಎಚ್ಚರವಹಿಸಿ title=
How to apply beach for first time

How to apply beach for first time: ನಮ್ಮಲ್ಲಿ ಹೆಚ್ಚಿನವರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ ಕಾಪಾಡಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ ಹೋಗಿ ದುಬಾರಿ ಉತ್ಪನ್ನಗಳನ್ನು ಬಳಸುತ್ತಾರೆ. ಅಷ್ಟೇ ಅಲ್ಲ ಕೆಲವರು ಪಾರ್ಲರ್‌ನಲ್ಲಿ ಬ್ಯೂಟಿಷಿಯನ್ ಬಳಸುವ ಉತ್ಪನ್ನಗಳ ಬಗ್ಗೆ ಹೆಚ್ಚಿನ ಜನರು ಗಮನ ಹರಿಸುವುದಿಲ್ಲ. ದೇಶವು ಕರೋನಾದ ಎರಡನೇ ಅಲೆಯನ್ನು ಎದುರಿಸುತ್ತಿದೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಹೊರಗೆ ಹೋಗುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತೆ. ಆದ್ದರಿಂದ, ನಾವು ಮನೆಯಲ್ಲಿಯೇ ಇದ್ದು ನಮ್ಮ ಸೌಂದರ್ಯದ ಬಗ್ಗೆ ನಿಗಾವಹಿಸಬಹುದು. ಅನೇಕ ಜನರು ತಮ್ಮ ಚರ್ಮವನ್ನು ಕಾಪಾಡಿಕೊಳ್ಳಲು ಬ್ಲೀಚ್ ಬಳಸುತ್ತಾರೆ. ನೀವು ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ, ಈ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.

ಉತ್ತಮ ಬ್ರಾಂಡ್ ಬಳಸಿ :
ನೀವು ಮನೆಯಲ್ಲಿ ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ, ಬ್ಲೀಚ್ ಬ್ರಾಂಡ್ ಉತ್ತಮವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಚರ್ಮದ (Skin) ಪ್ರಕಾರಕ್ಕೆ ಅನುಗುಣವಾಗಿ ನೀವು ಬ್ಲೀಚ್ ಅನ್ನು ಬಳಸಬಹುದು ಮತ್ತು ಸಾಧ್ಯವಾದರೆ, ಅಂತರ್ಜಾಲದಿಂದಲೂ ಈ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ - Kids Mental Health: ಲಾಕ್‌ಡೌನ್ ಮಧ್ಯೆ ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ ಕಡಿಮೆ ಮಾಡಲು ಈ ಟಿಪ್ಸ್ ಅನುಸರಿಸಿ

ಬ್ಲೀಚ್ ಪ್ರಮಾಣ ಮತ್ತು ದಿನಾಂಕವನ್ನು ನೋಡಿಕೊಳ್ಳಿ:
ಮುಖದ ಮೇಲೆ ಬ್ಲೀಚ್ ಬಳಸುವ ಮೊದಲು, ನಾವು ಅದನ್ನು ಎಷ್ಟು ಪ್ರಮಾಣದಲ್ಲಿ ಬಳಸಬೇಕು ಮತ್ತು ಅದನ್ನು ಎಷ್ಟು ಸಮಯದವರೆಗೆ ನಾವು ಮುಖದ ಮೇಲೆ ಇಟ್ಟುಕೊಳ್ಳಬೇಕು ಎಂದು ನೋಡಿಕೊಳ್ಳಿ. ಈ ಮಾಹಿತಿಯನ್ನು ಪ್ಯಾಕ್‌ನಲ್ಲಿ ಬರೆಯದಿದ್ದರೆ, ಯಾವುದೇ ಕಾರಣಕ್ಕೂ ಹದಿನೈದು ನಿಮಿಷಗಳಿಗಿಂತ ಹೆಚ್ಚು ಕಾಲ ಬ್ಲೀಚ್ ಅನ್ನು ಚರ್ಮದ ಮೇಲೆ ಇಡಬೇಡಿ. ಮುಖಕ್ಕೆ (Face) ಬ್ಲೀಚ್ ಬಳಸುವ ಮೊದಲು ಬ್ಲೀಚ್‌ನ ಮುಕ್ತಾಯ ದಿನಾಂಕವನ್ನು ತಪ್ಪದೇ ಪರಿಶೀಲಿಸಿ.

ಬ್ಲೀಚ್ ಹಚ್ಚುವ ಮೊದಲು ಪ್ಯಾಚ್ ಟೆಸ್ಟ್ ಮಾಡಿ:
ನೀವು ಮೊದಲ ಬಾರಿಗೆ ಬ್ಲೀಚ್ ಬಳಸುತ್ತಿದ್ದರೆ ತಪ್ಪದೇ ಒಮ್ಮೆ ಪ್ಯಾಚ್ ಪರೀಕ್ಷೆಯನ್ನು ಮಾಡಬೇಕು ಎಂದು ನೆನಪಿಡಿ. ಬ್ಲೀಚ್‌ನಿಂದ ನಿಮಗೆ ಯಾವುದೇ ರೀತಿಯ ಅಲರ್ಜಿ ಅನುಭವ ಆಗುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಅದನ್ನು ಮುಖಕ್ಕೆ ಹಚ್ಚಿ. ನೀವು ಮೊದಲ ಬಾರಿಗೆ ಮನೆಯಲ್ಲಿ ಬ್ಲೀಚ್ ಬಳಸುತ್ತಿದ್ದರೆ ಅದನ್ನು ಮೊದಲು ಕಿವಿಯ ಹಿಂದೆ ಹಚ್ಚಿ, ನಿಮಗೆ ಯಾವುದೇ ಕಿರಿ ಕಿರಿ ಅನುಭವ ಆಗದಿದ್ದಾಗ ಮಾತ್ರವೇ ಮುಖಕ್ಕೆ ಹಚ್ಚಿ. ಪ್ಯಾಚ್ ಪರೀಕ್ಷೆಯಲ್ಲಿ ನಿಮಗೆ ಕಿರಿಕಿರಿಯುಂಟಾದರೆ, ಬ್ಲೀಚ್ ಅನ್ನು ಬಳಸಬೇಡಿ.

ಇದನ್ನೂ ಓದಿ - Snake Plant Benefits: ಬಹಳ ಉಪಯುಕ್ತ ಈ ಸ್ನೇಕ್ ಪ್ಲಾಂಟ್, ಖರೀದಿಸುವ ಮೊದಲು ಇದನ್ನು ತಿಳಿಯಿರಿ

ಬ್ಲೀಚ್ ಬಳಸುವ ಮೊದಲು ಚರ್ಮವನ್ನು ಸ್ವಚ್ಛಗೊಳಿಸಿ:
ನಿಮ್ಮ ಮುಖಕ್ಕೆ ಬ್ಲೀಚ್ ಹಚ್ಚುವಾಗಲೆಲ್ಲಾ ಮೊದಲು ಚರ್ಮವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರ ನಂತರ, ಚರ್ಮದ ಮೇಲೆ ಪ್ರಿ-ಬ್ಲೀಚ್ ಕ್ರೀಮ್ ಹಚ್ಚಿ ಮತ್ತು ಐದು ನಿಮಿಷಗಳ ಕಾಲ ಲಘುವಾಗಿ ಮಸಾಜ್ ಮಾಡಿ ಮತ್ತು ನಂತರವೇ ಬ್ಲೀಚ್ ಬಳಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News