ಕರೋನಾ ಲಸಿಕೆಗೆ ಮೊದಲು ಮತ್ತು ನಂತರ ತಿನ್ನುವ ಆಹಾರ ಹೇಗಿರಬೇಕು..?

ವ್ಯಾಕ್ಸಿನೇಶನ್  ಮೊದಲು ಮತ್ತು ನಂತರ ಹಸಿರು ತರಕಾರಿಯನ್ನು ಸಾಕಷ್ಟು ಸೇವಿಸಿ. ಪಾಲಕ್ , ಬ್ರೊಕಲಿ ಮುಂತಾದ ಹಸಿರು ತರಕಾರಿಯನ್ನು ಚೆನ್ನಾಗಿ ತಿನ್ನಿ.

Written by - Ranjitha R K | Last Updated : Apr 29, 2021, 12:44 PM IST
  • ದೊಡ್ಡ ಮಟ್ಟದಲ್ಲಿ ಕರೋನಾ ವ್ಯಾಕ್ಸಿನ್ ಅಭಿಯಾನ ನಡೆಯುತ್ತಿದೆ.
  • ವ್ಯಾಕ್ಸಿನೇಶನ್ ಗಾಗಿ ನಿಮ್ಮ ಶರೀರವನ್ನೂ ಸಿದ್ದಪಡಿಸಿಕೊಳ್ಳಿ
  • ವ್ಯಾಕ್ಸಿನೇಶನ್ ಮೊದಲು ಮತ್ತು ನಂತರ ಈ ಆಹಾರ ಸೇವಿಸಿ
ಕರೋನಾ ಲಸಿಕೆಗೆ ಮೊದಲು ಮತ್ತು ನಂತರ ತಿನ್ನುವ ಆಹಾರ ಹೇಗಿರಬೇಕು..? title=
ವ್ಯಾಕ್ಸಿನೇಶನ್ ಮೊದಲು ಮತ್ತು ನಂತರ ಈ ಆಹಾರ ಸೇವಿಸಿ (file photo)

ನವದೆಹಲಿ : ಕರೋನಾಸುರನ  ಮೇಲೆ ಕಡಿವಾಣ ಹಾಕಲು ದೇಶದಲ್ಲಿ ಬಹುದೊಡ್ಡ ಮಟ್ಟದಲ್ಲಿ ವ್ಯಾಕ್ಸಿನ್ (Vaccine) ಅಭಿಯಾನ ಆರಂಭವಾಗಿದೆ. ಮೇ 1 ರಿಂದ 18 ವಯೋಮಾನದಿಂದ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುತ್ತದೆ. ಕರೋನಾ ವೈರಸ್ ನಿಂದ (cornavirus) ಬಚಾವ್ ಆಗುವ ಎರಡೇ ಉಪಾಯವೆಂದರೆ ಸಾಮಾಜಿಕ ಅಂತರ ಮತ್ತು ವ್ಯಾಕ್ಸಿನ್.  ವರದಿಗಳ ಪ್ರಕಾರ ವ್ಯಾಕ್ಸಿನ್ ಹಾಕಿಸಿಕೊಂಡ ನಂತರ ಕೆಲವರಲ್ಲಿ ಜ್ವರ ಅಥವಾ ತಲೆನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ಮತ್ತು ನಂತರ ನಮ್ಮ ಆಹಾರ ಪದ್ದತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ವ್ಯಾಕ್ಸಿನ್ ಹಾಕಿಸಿಕೊಂಡ ನಂತರ   ಹೆಚ್ಚಿಗೆ ಉಲ್ಲಸಿತರಾಗಿರುತ್ತೀರಿ.

1. ಫ್ರೆಶ್ ತರಕಾರಿ
ವ್ಯಾಕ್ಸಿನೇಶನ್ (Vaccination) ಮೊದಲು ಮತ್ತು ನಂತರ ಹಸಿರು ತರಕಾರಿಯನ್ನು ಸಾಕಷ್ಟು ಸೇವಿಸಿ. ಪಾಲಕ್ (Palak) , ಬ್ರೊಕಲಿ ಮುಂತಾದ ಹಸಿರು ತರಕಾರಿಯನ್ನು ಚೆನ್ನಾಗಿ ತಿನ್ನಿ. ಇದು ಶರೀರದ ನೋವನ್ನು ಆದಷ್ಟು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ : Pigeon Pea : ಮಧುಮೇಹಿಗಳೆ ತಕ್ಷಣವೇ ತೊಗರಿ ಬೆಳೆ ಸೇವಿಸಲು ಶುರು ಮಾಡಿ! ಇದು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡುತ್ತದೆ!

2. ಹೆಲ್ತಿ ರೆಡಿಮೇಡ್ ಸೂಪ್ :
ಶರೀರದಲ್ಲಿ ಸಮತೋಲನ ಕಾಯ್ದುಕೊಳ್ಳಲು ಉತ್ತಮ ಆಹಾರ ಸೇವಿಸುವುದು ಅಗತ್ಯವಾಗಿದೆ.   ಈ ನಿಟ್ಟಿನಲ್ಲಿ ರೆಡಿ ಮೇಡ್ ಸೂಪ್ (Ready soup) ಕೂಡಾ ಉತ್ತಮ ಆಯ್ಕೆ

3. ಬ್ಲೂಬೆರಿ ತಿನ್ನಿ
ಬ್ಲೂಬೆರಿಯಲ್ಲಿ ನೋವು ನಿವಾರಕ ಗುಣವಿರುತ್ತದೆ. ಇದು ಶರೀರದಲ್ಲಿ ಸೆರೊಟಿನಿನ್ ಮಟ್ಟವನ್ನು ಏರಿಕೆ ಮಾಡುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗುಣ ಕೂಡಾ ಇರುತ್ತದೆ. ಇದು ಹಲವು ರೋಗಗಳ ವಿರುದ್ಧ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ.

4. ಈರುಳ್ಳಿ, ಬೆಳ್ಳುಳ್ಳಿ: 
ಈರುಳ್ಳಿ (Onion) ಮತ್ತು ಬೆಳ್ಳುಳ್ಳಿಯಲ್ಲಿ (Garlic) ಪ್ರೊಬಯೋಟಿಕ್ಸ್ ಸಮೃದ್ದವಾಗಿರುತ್ತದೆ. ಆರೋಗ್ಯಕ್ಕೆ ಈರುಳ್ಳಿ ಬೆಳ್ಳುಳ್ಳಿ ತಿನ್ನುವುದು ಅತಿ ಮುಖ್ಯ
ಇಮ್ಯೂನಿಟಿ ಹೆಚ್ಚಿಸುವ ಯಾವುದೇ ಆಹಾರ ತಿನ್ನಿ

ಇದನ್ನೂ ಓದಿ : ಊಟದ ವೇಳೆ ತಪ್ಪಿಯೂ ಈ ಹನ್ನೆರಡು ತಪ್ಪು ಮಾಡಬೇಡಿ

ದೇಹದಲ್ಲಿ ಇಮ್ಯೂನಿಟಿ (immunity) ಹೆಚ್ಚಿಸುವ ಯಾವುದೇ ಆಹಾರ ತಿನ್ನಬಹುದು. ಮುಖ್ಯವಾಗಿ ಅರಸಿನ ಸೇವಿಸಿದರೆ ಇನ್ನೂ ಉತ್ತಮ. ಇದು ದೇಹದ ನೋವನ್ನು ಕಡಿಮೆ ಮಾಡುತ್ತದೆ. ಮತ್ತು ಮೆದುಳನ್ನು ತಂಪಾಗಿರಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News