EPFO ಖಾತೆದಾರರು ಮೃತಪಟ್ಟರೆ ಕುಟುಂಬಕ್ಕೆ ಸಿಗಲಿದೆ 7 ಲಕ್ಷ ರೂಗಳ ವಿಮೆ

ಕಾರ್ಮಿಕ ಸಚಿವಾಲಯದ ಈ ಆದೇಶವು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ ಗೆ ಸಂಬಂಧಿಸಿದೆ. ಒಂದು ವೇಳೆ ಇಪಿಎಫ್  ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ ಲಾಭ ಸಿಗಲಿದೆ.  

Written by - Ranjitha R K | Last Updated : May 2, 2021, 05:07 PM IST
  • ಇಪಿಎಫ್‌ಒ ಖಾತೆದಾರರಿಗೆ ಪ್ರಮುಖ ನಿರ್ಧಾರ ಪ್ರಕಟಿಸಿದ ಸರ್ಕಾರ
  • ವಿಮೆಯ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧಾರ
  • ಇಪಿಎಫ್ ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ ಲಾಭ ಸಿಗಲಿದೆ.
EPFO ಖಾತೆದಾರರು ಮೃತಪಟ್ಟರೆ ಕುಟುಂಬಕ್ಕೆ ಸಿಗಲಿದೆ 7 ಲಕ್ಷ ರೂಗಳ ವಿಮೆ  title=
ಇಪಿಎಫ್‌ಒ ಖಾತೆದಾರರಿಗೆ ಪ್ರಮುಖ ನಿರ್ಧಾರ ಪ್ರಕಟಿಸಿದ ಸರ್ಕಾರ (file photo)

ನವದೆಹಲಿ : ಕರೋನಾ ಸಾಂಕ್ರಾಮಣದ (Coronavirus) ಮಧ್ಯೆ, ಕಾರ್ಮಿಕ ಸಚಿವಾಲಯವು ಇಪಿಎಫ್‌ಒ (EPFO) ಖಾತೆದಾರರಿಗೆ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದೆ. ಡೆತ್ ಇನ್ಸೂರೆನ್ಸ್ ಬೆನೆಫಿಟ್ ಮೊತ್ತವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದರ ಲಾಭ ಇಪಿಎಫ್‌ಒನ ಕನಿಷ್ಠ 5 ಕೋಟಿ ಚಂದಾದಾರರಿಗೆ ಸಿಗಲಿದೆ. ಈಗ, ಖಾತೆದಾರರ ಸಾವಿನ ನಂತರ, ಸಿಗುವ ಕನಿಷ್ಟ ಮೊತ್ತವನ್ನು 2.5 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಮತ್ತು ಗರಿಷ್ಠ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈ ಹಿಂದೆ ಈ ಮೊತ್ತ 2 ಲಕ್ಷ ರೂಪಾಯಿ ಮತ್ತು 6 ಲಕ್ಷ ರೂಪಾಯಿಗಳವರೆಗಿತ್ತು.  

ಕಾರ್ಮಿಕ ಸಚಿವಾಲಯದ ಈ ಆದೇಶವು ಎಂಪ್ಲಾಯಿ ಡೆಪಾಸಿಟ್ ಲಿಂಕ್ಡ್ ಇನ್ಶುರೆನ್ಸ್ (EDLI) ಗೆ ಸಂಬಂಧಿಸಿದೆ. ಒಂದು ವೇಳೆ ಇಪಿಎಫ್ (EPF) ಖಾತೆದಾರರು ಮೃತಪಟ್ಟರೆ , ಅವರ ಕುಟುಂಬಕ್ಕೆ ಈ ವಿಮೆಯ (Insurance) ಲಾಭ ಸಿಗಲಿದೆ. ಅಂದ ಹಾಗೆ  EDLI  (Employees Deposit Linked Insurance Scheme) ಫಲಾನುಭವಿಗಳ ಸಂಖ್ಯೆ ಇಪಿಎಫ್ ಚಂದಾದಾರರಿಗೆ ಸಮನಾಗಿರುವುದಿಲ್ಲ. ಇಡಿಎಲ್ಐ ಅಡಿಯಲ್ಲಿ ಕೇವಲ 2 ಮಿಲಿಯನ್ ಚಂದಾದಾರರು ಮಾತ್ರ ಇದ್ದಾರೆ. 

ಇದನ್ನೂ ಓದಿ : IT Returns File : IT ರಿಟರ್ನ್ ಸಲ್ಲಿಕೆಗೆ ಮೇ 31ರವರೆಗೆ ಅವಕಾಶ ನೀಡಿದ ಸರ್ಕಾರ!

ಪ್ರತಿ ಇಡಿಎಲ್ಐ ಚಂದಾದಾರರು ಇಪಿಎಫ್ (EPF) ಚಂದಾದಾರರಾಗಿರುತ್ತಾರೆ. ಆದರೆ ಪ್ರತಿ ಇಪಿಎಫ್ ಚಂದಾದಾರರು ಇಡಿಎಲ್ಐ ಚಂದಾದಾರರಾಗಿರುವುದಿಲ್ಲ. ಆದ್ದರಿಂದ ಎರಡು ಸಂಖ್ಯೆಗಳ ನಡುವೆ ದೊಡ್ಡ ವ್ಯತ್ಯಾಸವಿದೆ. 

ಇದನ್ನೂ ಓದಿ : SBI: ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯ ಒದಗಿಸಿದ ಎಸ್‌ಬಿಐ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News