ಜಿಸ್ಯಾಟ್-6ಎ ಸಂವಹನ ಉಪಗ್ರಹದೊಂದಿಗೆ ಸಂಪರ್ಕ ಕಳೆದುಕೊಂಡ ಇಸ್ರೋ

ಇತ್ತೀಚಿಗೆ ಉಡಾವಣೆಗೊಂಡಿದ್ದ ಜಿಸ್ಯಾಟ್-6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಂಪರ್ಕ ಕಳೆದುಕೊಂಡಿದೆ.

Last Updated : Apr 1, 2018, 03:58 PM IST
ಜಿಸ್ಯಾಟ್-6ಎ ಸಂವಹನ ಉಪಗ್ರಹದೊಂದಿಗೆ ಸಂಪರ್ಕ ಕಳೆದುಕೊಂಡ ಇಸ್ರೋ title=

ನವದೆಹಲಿ: ಇತ್ತೀಚಿಗೆ ಉಡಾವಣೆಗೊಂಡಿದ್ದ ಜಿಸ್ಯಾಟ್-6ಎ ಎಸ್ ಬ್ಯಾಂಡ್ ಸಂವಹನ ಉಪಗ್ರಹ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಸಂಪರ್ಕ ಕಳೆದುಕೊಂಡಿದೆ. ವರದಿಗಳ ಪ್ರಕಾರ ಉಪಗ್ರಹದೊಂದಿಗೆ ಮರುಸಂಪರ್ಕ ಹೊಂದಲು ಇಸ್ರೋ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ ಎನ್ನಲಾಗಿದೆ. 

ಭಾರತಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಶಕ್ತಿಶಾಲಿ ಎಸ್-ಬ್ಯಾಂಡ್ ಸಂವಹನ ಉಪಗ್ರಹ ಜಿಸ್ಯಾಟ್ -6 ಎ ಅನ್ನು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್08) ಮೂಲಕ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್(SLP)ನಿಂದ ಮಾರ್ಚ್ 29ರಂದು ಯಶಸ್ವಿ ಉಡಾವಣೆ ಮಾಡಿತ್ತು. 

ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‍ವಿ-ಎಫ್-08 ರಾಕೆಟ್'ಅನ್ನು ಸಂಜೆ 4:56ಕ್ಕೆ ಉಡಾವಣೆ ಮಾಡಲಾಗಿತ್ತು. ಸುಮಾರು 17 ನಿಮಿಷಗಳ ಕಾಲ ಮೂರು ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ, ಕಡೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಜಿಸ್ಯಾಟ್-6ಎ ಉಪಗ್ರಹವನ್ನು ಹೊತ್ತ GSLV-F08 ರಾಕೆಟ್ ಸುಮಾರು 415.6 ಟನ್‌ ತೂಕವಿದ್ದು, 161ಅಡಿ ಎತ್ತರವಿದೆ. ಈ ರಾಕೆಟ್ ಗೆ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಲಾಗಿದ್ದು, ಇದರ ಇಂಧನ ದಕ್ಷತೆ ಈ ಹಿಂದಿನ ರಾಕೆಟ್ ಗಳಿಗಿಂತಲೂ ಉತ್ತಮವಾಗಿದೆ.

ಇನ್ನು ಜಿಸ್ಯಾಟ್-6ಎ ಉಪಗ್ರಹವನ್ನು ಭೂಮಿಯಿಂದ ಸುಮಾರು 36,000ಕಿ.ಮೀ. ದೂರದಲ್ಲಿರುವ ಕಕ್ಷೆಗೆ ರವಾನೆ ಮಾಡಲಾಗಿದ್ದು, 10 ವರ್ಷಗಳು ಈ ಉಪಗ್ರಹ ಕಾರ್ಯನಿರ್ವಹಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಇದೀಗ ಈ ಉಪಗ್ರಹದೊಂದಿಗೆ ಇಸ್ರೋ ಸಂಪರ್ಕ ಕಳೆದುಕೊಂಡಿದ್ದು, ಮರು ಸಂಪರ್ಕ ಹೊಂದಲು ಪ್ರಯತ್ನಿಸುತ್ತಿರುವುದಾಗಿ ANI ಸುದ್ದಿ ಸಂಸ್ಥೆ ವರದಿ ಮಾಡಿದೆ. 

Trending News